ಸುಮಾರು 50 ವರ್ಷಗಳ ಹಿಂದೆ ಆರಂಭಿಸಿದ್ದ ಅಮೆರಿಕದ ಬಟ್ಟೆಗಳ ಚಿಲ್ಲರೆ ವ್ಯಾಪಾರ ಕಂಪನಿಯನ್ನೇ ಮಾಲೀಕ ಯೊವೊನ್ ಚೌಲ್ ನಾರ್ಡ್ ಎಂಬ ಶತಕೋಟ್ಯಾಧಿಪತಿ ಮಾಲಿನ್ಯ ಹೋರಾಟಕ್ಕಾಗಿ ದಾನ ಮಾಡಿದ್ದಾರೆ.
ಪರಿಸರ ಸಂರಕ್ಷಣೆಗಾಗಿ ಕಂಪನಿ ʻಪಟಗೋನಿಯಾʼದಿಂದ ಬರುವ ಎಲ್ಲಾ ಮಾದರಿ ಕಾರ್ಪೊರೇಟ್ ಆದಾಯವನ್ನು ಮೀಸಲಿಡುವುದಾಗಿ ಯೊವೊನ್ ಚೌಲ್ ನಾರ್ಡ್ ಘೋಷಿಸಿದ್ದಾರೆ.
ಪ್ರಾಕೃತಿಕ ಸಂಪತ್ತು, ಕಾಡು ಸಂರಕ್ಷಣೆಗಾಗಿ ತಮ್ಮ ಕಂಪನಿಯಿಂದ ಬರುವ ಆದಾಯವನ್ನು ಕಂಪನಿಯ ಸಂಸ್ಥಾಪಕ ದಾನ ಮಾಡಿದ್ದಾರೆ. ವಿಶೇಷ ಅಂದರೆ ಕಂಪನಿಯಲ್ಲಿ ಪಾಲು ಹೊಂದಿದ್ದ ಪತ್ನಿ ಹಾಗೂ ಇಬ್ಬರು ದತ್ತು ಮಕ್ಕಳು ಕೂಡ ತಮ್ಮ ಪಾಲಿನ ಷೇರುಗಳನ್ನು ಕೂಡ ದಾನ ಮಾಡಿದ್ದಾರೆ.