ನಂದಿಗ್ರಾಮ: ಮತ ಮರು ಎಣಿಕೆಯ ಬೇಡಿಕೆಯನ್ನು ನಿರಾಕರಿಸಿದ ಚುನಾವಣಾ ಆಯೋಗ- TMCಗೆ ಹಿನ್ನಡೆ

[Sassy_Social_Share]

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ನಂದಿಗ್ರಾಮದಲ್ಲಿ ಮತ ಮರು ಎಣಿಕೆ ನಡೆಸಬೇಕು ಎಂಬ ಟಿಎಂಸಿಯ ಬೇಡಿಕೆಯನ್ನು ಭಾರತೀಯ ಚುನಾವಣಾ ಆಯೋಗವು ನಿರಾಕರಿಸಿದೆ.

ಟಿಎಂಸಿ ಮಾಜಿ ನಾಯಕ, ಬಿಜೆಪಿ ಅಭ್ಯರ್ಥಿ ಅಧಿಕಾರಿ ಸುವೆಂದು ನಂದಿಗ್ರಾಮದಲ್ಲಿ ಮಮತಾ ವಿರುದ್ಧ ಕೇವಲ 1,756 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಟಿಎಂಸಿ ಭಾರೀ ಬಹುಮತ ಸಾಧಿಸಿದ್ದರೂ, ಪಕ್ಷದ ಮುಖ್ಯಸ್ಥೆ ಮಮತಾ ಅವರೇ ಚುನಾವಣೆಯಲ್ಲಿ ಸೋತಿದ್ದು ಟಿಎಂಸಿಗೆ ಭಾರಿ ಹಿನ್ನಡೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಟಿಎಂಸಿ ನಾಯಕರಾದ ರಾಜ್ಯ ಸಭಾ ಸದಸ್ಯ ಡೆರೆಕ್ ಒಬ್ರಿಯಾನ ನೇತೃತ್ವದ ನಿಯೋಗವೊಂದು ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ನಂದಿಗ್ರಾಮದಲ್ಲಿ ಮರು ಮತ ಎಣಿಕೆಗೆ ಮನವಿ ಸಲ್ಲಿಸಿತ್ತು.

ನಂದಿಗ್ರಾಮದ ಮತ ಎಣಿಕೆ ವೇಳೆ ಅಕ್ರಮ ನಡೆದಿದೆ. ಹಾಗಾಗಿ ಆ ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡಬೇಕೆಂದು ನಿಯೋಗವು ಚುನಾವಣಾ ಆಯೋಗಕ್ಕೆ ಹೇಳಿತ್ತು.
ನಂದಿಗ್ರಾಮದಲ್ಲಿ ಮಮತಾ ಅವರನ್ನು ಆರಂಭದಲ್ಲಿ 1,200 ಮತಗಳಿಂದ ವಿಜೇತರೆಂದು ಘೋಷಿಸಲಾಗಿತ್ತು ಆದರೆ ಕೆಲವು ನಿಮಿಷಗಳ ನಂತರ ಸುವೇಂದು ನಂದಿಗ್ರಾಮದಲ್ಲಿ 1,756 ಮತಗಳಿಂದ ಜಯಗಳಿಸಿದ್ದಾರೆ ಎಂದು ಘೋಷಿಸಲಾಯಿತು. ಇದು ಸಾಕಷ್ಟು ಗೊಂದಲಗಳಿಗೆ ಕಾರಣವಾಗಿತ್ತು. ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಟಿಎಂಸಿ ಮುಖ್ಯಸ್ಥೆ ಂತಾ ಬ್ಯಾನರ್ಜಿ ಫಲಿತಾಂಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದರು. ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆಯೆಂದು ಅವರೂ ಶಂಕೆ ವ್ಯಕ್ತಪಡಿಸಿದ್ದರು.

ದೊಡ್ಡ ವಿಜಯಕ್ಕಾಗಿ ನಂದಿಗ್ರಾಮವನ್ನು ತ್ಯಾಗ ಮಾಡಬೇಕಾಗಿ ಬಂತು. ನಾವು ಇಡೀ ರಾಜ್ಯವನ್ನೇ ಗೆದ್ದಿದ್ದೇವೆ. ನಂದಿಗ್ರಾಮದ ಮತದಾರರ ತೀರ್ಪನ್ನು ನಾವು ಗೌರವಿಸುತ್ತೇವೆ. ಮತ ಎಣಿಕೆ ವೇಳೆ ಅಕ್ರಮ ನಡೆದಿರುವುದಾಗಿ ಆರೋಪ ಕೇಳಿ ಬಂದಿರುವುದರಿಂದ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಮಮತಾ ಬ್ಯಾನರ್ಜಿಯವರು ತಿಳಿಸಿದ್ದರು.

ಈ ನಡುವೆ, ನಂದಿಗ್ರಾಮದ ಮತದಾರರಿಗೆ ಧನ್ಯವಾದ ತಿಳಿಸಿದ ಅಧಿಕಾರಿ ಸುವೆಂದು, ನಂದಿಗ್ರಾಮದ ಮಹಾನ್ ಜನರಿಗೆ ಅವರ ಪ್ರೀತಿ, ವಿಶ್ವಾಸ, ಆಶೀರ್ವಾದ ಮತ್ತು ಬೆಂಬಲಕ್ಕಾಗಿ ಮತ್ತು ನನ್ನನ್ನು ಅವರ ಪ್ರತಿನಿಧಿಯಾಗಿ ಮತ್ತು ನಂದಿಗ್ರಾಮದ ಶಾಸಕರಾಗಿ ಆಯ್ಕೆ ಮಾಡಿದ್ದಕ್ಕಾಗಿ ನನ್ನ ಪ್ರಾಮಾಣಿಕ ಧನ್ಯವಾದಗಳು. ಅವರಿಗೆ ಸೇವೆ ಸಲ್ಲಿಸುವುದು ಮತ್ತು ಅವರ ಕಲ್ಯಾಣಕ್ಕಾಗಿ ಕೆಲಸ ಮಾಡುವುದು ನನ್ನ ಎಂದಿಗೂ ಮುಗಿಯದ ಬದ್ಧತೆಯಾಗಿದೆ. ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ! ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಮತಾ, ನಂದಿಗ್ರಾಮ ನನಗೆ ಒಂದು ವಿಷಯವೇ ಅಲ್ಲ. ನಾನು ಹಲವಾರು ಕ್ಷೇತ್ರ ಗೆದ್ದುಕೊಂಡಿದ್ದೇನೆ. ಆದರೆ ನಂದಿಗ್ರಾಮದಲ್ಲಿ ಏನೋ ತಪ್ಪು ನಡೆದಿದೆ. ಇವಿಎಂ ತಿರುಚಲ್ಪಟ್ಟಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಸರ್ವರ್ ಡೌನ್ ಆಗಿತ್ತು. ಎಲ್ಲಾ ಕಡೆಯೂ ನಾವು ಗೆದ್ದಿದ್ದೇವೆ. ಆದರೆ, ಅಲ್ಲಿ ಮಾತ್ರ ಸೋತಿದ್ದೇವೆ. ಚುನಾವಣಾ ಆಯೋಗವು ಬಿಜೆಪಿ ವಕ್ತಾರರಂತೆ ವರ್ತಿಸಿದೆ. ಮೂರು ಗಂಟೆಗಳ ಹಿಂದೆ ಒಂದು ರೀತಿ ಹೇಳಿ, ಈಗ ಬೇರೆಯೇ ರೀತಿ ಹೇಳುತ್ತಿದೆ ಎಂದು ಹೇಳಿದ್ದಾರೆ.

Related posts

Latest posts

ಮೈಸೂರು, ಚಾಮರಾಜನಗರ ಡಿಸಿ ಕಚೇರಿ, ಆಸ್ಪತ್ರೆಯ ಎಲ್ಲ ದಾಖಲೆ ಜಪ್ತಿ: ಹೈಕೋರ್ಟ್ ಆದೇಶ

ಕರೋನಾ ಸಂದರ್ಭದಲ್ಲಿ ರಾಷ್ಟ್ರದ ನಾನಾ ಸರಕಾರಗಳ ನಿಷ್ಕ್ರಿಯತೆಗಳ ಬಗ್ಗೆ ಚಾಟಿ ಬೀಸುತ್ತಿರುವ ದೇಶದ ನ್ಯಾಯಾಲಯಗಳ ಸಾಲಿಗೆ ರಾಜ್ಯದ ಹೈಕೋರ್ಟ್ ಕೂಡ ಸೇರ್ಪಡೆಗೊಂಡಿದ್ದು, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತರಾಗಿರುವ...

ಚಾಮರಾಜನಗರ ಆಕ್ಸಿಜನ್ ‌ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ‌ – ಹೆಚ್‌ಡಿ ಕುಮಾರಸ್ವಾಮಿ

ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ...

ಆಕ್ಸಿಜನ್‌ ಕೊರತೆ: ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಬೇಕು -ಸಿದ್ದರಾಮಯ್ಯ

ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ ಹಿನ್ನಲೆ, ಕರ್ನಾಟಕದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಅನ್ನು ರಾಜ್ಯದ ಬಳಕೆಗೇ ಮೀಸಲಿಡಬೇಕು, ಈಗ ರಾಜ್ಯಕ್ಕೆ ನಿಗದಿ ಮಾಡಿರುವ ಆಕ್ಸಿಜನ್ ಪ್ರಮಾಣ ಬೇಡಿಕೆಯ ಶೇ. 50ರಷ್ಟು ಸಹ ಇಲ್ಲ. ಬೇಡಿಕೆಗೆ...