ಕಲಬುರಗಿ: ಎಲೆಕ್ಟ್ರಿಕ್ ಬೈಕ್ Electric bike ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಶೋ ರೂಮ್ಗೆ ಬೆಂಕಿ ಇಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಲಬುರಗಿಯ ಹುಮನಾಬಾದ್ ರಸ್ತೆಯಲ್ಲಿ On Humanabad Road, Kalaburagi ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಕಿರಾತಕನೋರ್ವ ಬೆಂಕಿ ಹಚ್ಚಿದ್ದಾನೆ. (set fire)ನಿನ್ನೆ ಬೆಳಿಗ್ಗೆ ಶೋ ರೂಂ ಬೆಂಕಿ ತಗುಲಿತ್ತು. ಆರಂಭದಲ್ಲಿ ಎಲ್ಲರೂ ಶಾಟ್೯ ಸಕ್ರ್ಯೂಟ್ ನಿಂದ ಬೆಂಕಿ ತಗುಲಿದೆ ಎಂದುಕೊಂಡಿದ್ದರು.ಆದರೆ ಪೊಲೀಸರ ತನಿಖೆ ವೇಳೆ ಬೆಂಕಿ ಹಚ್ಚಿದ್ದು ಪತ್ತೆಯಾಗಿದೆ.
ಮಹಮ್ಮದ್ ನದೀಮ್ ಎಂಬ ವ್ಯಕ್ತಿ ತನ್ನ ಏಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಸಿಬ್ಬಂದಿ ಜೊತೆ ವಾಗ್ವಾದ ಮಾಡಿ ಬಳಿಕ ಪೆಟ್ರೋಲ್ ತಂದು ಶೋ ರೂಂ ಒಳಗೆ ಬೆಂಕಿ ಹಚ್ಚಿದ್ದು ಬಯಲಾಗಿದೆ. ಘಟನೆ ಸಂಬಂಧ ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಧ್ಯ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇನ್ನು ಘಟನೆಯಲ್ಲಿ 6 ಹೊಸ ಎಲೆಕ್ಟ್ರಿಕ್ ಬೈಕ್ಗಳು ಸುಟ್ಟು ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಕೇವಲ 20 ದಿನದ ಹಿಂದೆ ಓಲಾ ಕಂಪನಿಯ ಸ್ಕೂಟರ್ ಖರೀದಿಸಿದ್ದ ಆರೋಪಿಯ ಬೈಕ್ ಪದೇ ಪದೇ ರಿಪೇರಿಗೆ ಬರುತ್ತಿದೆ ಎಂದು ಸಿಟ್ಟಾಗಿದ್ದ. ಸಾಕಷ್ಟು ಬಾರಿ ಶೋರೂಂಗೆ ಬಂದು ಸರಿಪಡಿಸಿಕೊಡುವಂತೆ ಮನವಿ ಮಾಡಿದ್ದ. ಆದ್ರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು ಇದರಿಂದ ಬೇಸತ್ತು ನಿನ್ನೆ ಶೋ ರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.