• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, October 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆಸ್ಕಾಂಗೆ ಬರೋಬ್ಬರಿ ₹293.62 ಕೋಟಿ ಲಾಭ: ಆರ್ಥಿಕ ಶಿಸ್ತಿಗೆ ಸಿಕ್ಕಿತು ಭರ್ಜರಿ ಯಶಸ್ಸು | BESCOM

ಪ್ರತಿಧ್ವನಿ by ಪ್ರತಿಧ್ವನಿ
October 3, 2026
in Top Story, ಕರ್ನಾಟಕ
0
BESCOM posts ₹293.62 crore profit
Share on WhatsAppShare on FacebookShare on Telegram

ಬೆಂಗಳೂರು: ಸುಧಾರಿತ ಆದಾಯ ಸಂಗ್ರಹಣೆ (Revenue Collection) ಹಾಗೂ ಕಟ್ಟುನಿಟ್ಟಿನ ಆರ್ಥಿಕ ಶಿಸ್ತಿನ ಪರಿಣಾಮವಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು (BESCOM) 2025-26ನೇ ಹಣಕಾಸು ವರ್ಷದಲ್ಲಿ ಒಟ್ಟು 293.62 ಕೋಟಿ ರೂಪಾಯಿ ಲಾಭ ದಾಖಲಿಸಿದೆ.

ADVERTISEMENT
Nirmala Sitharaman : ರೈತರಿಂದ 1 ರೂಪಾಯಿ ಕೂಡ ಹೆಚ್ಚು ಹಣ ವಸೂಲಿ ಮಾಡಬಾರದು ಅಂತ ಮೋದಿ ಖಡಕ್ಕಾಗಿ ಹೇಳಿದ್ದಾರೆ..!

ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ನಡೆದ 144ನೇ ಆಡಳಿತ ಮಂಡಳಿ ಸಭೆಯಲ್ಲಿ ಸಂಸ್ಥೆಯ ಈ ಗಮನಾರ್ಹ ಆರ್ಥಿಕ ಸಾಧನೆಯ ವಿವರಗಳನ್ನು ಹಂಚಿಕೊಳ್ಳಲಾಯಿತು.

ಆದಾಯ ಹೆಚ್ಚಳ ಮತ್ತು ವೆಚ್ಚ ನಿಯಂತ್ರಣದ ಸಂಯೋಜನೆ

ಬೆಸ್ಕಾಂ ಸಾಧಿಸಿರುವ ಈ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಕೆ.ಜೆ. ಜಾರ್ಜ್, ಆದಾಯ ವಸೂಲಿ ಹೆಚ್ಚಳ, ವಿದ್ಯುತ್ ಖರೀದಿಯಲ್ಲಿ ಸಮರ್ಪಕ ನಿರ್ವಹಣೆ, ಹಣಕಾಸು ವೆಚ್ಚ ಕಡಿತ ಹಾಗೂ ಆಡಳಿತಾತ್ಮಕ ಶಿಸ್ತು ಈ ಲಾಭಕ್ಕೆ ಮುಖ್ಯ ಕಾರಣ ಎಂದಿದ್ದಾರೆ. ಆದಾಯ ಹೆಚ್ಚಳದ ಜತೆಗೆ ಸಂಸ್ಥೆಯ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿದ್ದರಿಂದ ಬೆಸ್ಕಾಂನ ಆರ್ಥಿಕ ಸ್ಥಿತಿ ಗಣನೀಯವಾಗಿ ಸುಧಾರಿಸಿದೆ ಎಂದು ಅವರು ತಿಳಿಸಿದರು.

Pawan Kalyan : ರಾಯಲಸೀಮೆ ಇನ್ಮುಂದೆ ಬರಗಾಲ ಮುಕ್ತವಾಗಿ ಅಭಿವೃದ್ಧಿಗೆ ಹೆಸರಾಗುತ್ತೆ..! #pratidhvani

ಪ್ರೋಬ್ ರೀಡಿಂಗ್ ಹಾಗೂ ಬಿಲ್ಲಿಂಗ್ ದಕ್ಷತೆ

ಆದಾಯ ಸೋರಿಕೆ ತಡೆಗಟ್ಟುವಲ್ಲಿ ಸಂಸ್ಥೆಯ ಸುಧಾರಿತ ತಂತ್ರಜ್ಞಾನ ಆಧಾರಿತ ಬಿಲ್ಲಿಂಗ್ ವ್ಯವಸ್ಥೆ ಮಹತ್ವದ ಪಾತ್ರ ವಹಿಸಿದೆ. ಪ್ರೋಬ್ ರೀಡಿಂಗ್ ಅಳವಡಿಕೆಯಿಂದ ಸಿಬ್ಬಂದಿಯ ಹಸ್ತಕ್ಷೇಪ ಕಡಿಮೆಯಾಗಿ, ಬಿಲ್ಲಿಂಗ್‌ನಲ್ಲಿ ನಿಖರತೆ ಮೂಡಿದೆ. ಇದರಿಂದ ಸುಮಾರು 100 ಮಿಲಿಯನ್ ಯೂನಿಟ್ ಹೆಚ್ಚುವರಿ ವಿದ್ಯುತ್ ಮಾರಾಟ ಅಧಿಕೃತವಾಗಿ ದಾಖಲಾಗಿದ್ದು, ಗರಿಷ್ಠ ಬೇಡಿಕೆಯನ್ನು ಸರಿಯಾಗಿ ಲೆಕ್ಕಹಾಕಲು ನೆರವಾಗಿದೆ. ಪ್ರಮುಖವಾಗಿ ಹೆಚ್ಚಿನ ಆದಾಯ ತರುವ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗಗಳಲ್ಲಿ ಶೇ.100ರಷ್ಟು ಬಿಲ್ಲಿಂಗ್ ದಕ್ಷತೆಯನ್ನು ಗುರಿಯಾಗಿಸಿಕೊಂಡು ಸಂಸ್ಥೆ ಮುನ್ನಡೆದಿದೆ.

ಕಾನೂನು ಹೋರಾಟ ಹಾಗೂ ಬಾಕಿ ವಸೂಲಾತಿ

ದೊಡ್ಡ ಮೊತ್ತದ ಬಾಕಿಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಆಯೋಗ ಮತ್ತು ನ್ಯಾಯಾಲಯಗಳಲ್ಲಿ ನಡೆಯುತ್ತಿದ್ದ ಪ್ರಕರಣಗಳನ್ನು ನಿರಂತರವಾಗಿ ಹಿಂಬಾಲಿಸಿ, ಕಂಪನಿಗೆ ಬರಬೇಕಿದ್ದ ಆದಾಯವನ್ನು ಯಶಸ್ವಿಯಾಗಿ ವಸೂಲಿ ಮಾಡಲಾಗಿದೆ. ಇದರಲ್ಲಿ ನಿಗದಿತ ಶುಲ್ಕ, ಕ್ರಾಸ್ ಸಬ್ಸಿಡಿ ಸರ್ಚಾರ್ಜ್ ಹಾಗೂ ಹೆಚ್ಚುವರಿ ಸರ್ಚಾರ್ಜ್‌ಗಳ ಮೊತ್ತ ಒಳಗೊಂಡಿದೆ. ಜತೆಗೆ, ಸರಾಸರಿ ಆದಾಯ ವಸೂಲಿಯನ್ನು (ARR) ನಿರಂತರ ಮೇಲ್ವಿಚಾರಣೆ ಮಾಡಿದ್ದರಿಂದ ಸೂಕ್ತ ದರ ಪರಿಷ್ಕರಣೆ ಪ್ರಸ್ತಾವನೆ ಸಲ್ಲಿಸಲು ಮತ್ತು ದೃಢ ಆರ್ಥಿಕ ನಿರ್ಧಾರ ಕೈಗೊಳ್ಳಲು ಸಾಧ್ಯವಾಯಿತು ಎಂದು ಸಚಿವರು ವಿವರಿಸಿದರು.

ವಿದ್ಯುತ್ ಖರೀದಿ ವೆಚ್ಚ ಕಡಿತ ಮತ್ತು ಸಾಲ ಮರುಹೊಂದಾಣಿಕೆ

ಹಳೆಯ ಬಾಕಿಗಳನ್ನು ಕಂತುಗಳಲ್ಲಿ ಪಾವತಿಸಿ ವಿಳಂಬ ಶುಲ್ಕದ (LPS) ಹೊರೆಯನ್ನು ತಪ್ಪಿಸಲಾಗಿದೆ. ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ ಮುಂಗಡ ಪಾವತಿ ಮಾಡುವ ಮೂಲಕ ಸಿಗುವ ರಿಯಾಯಿತಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದ್ದು, ಅರ್ಹ ಎಫ್‌ಪಿಪಿಸಿಎ ಮೊತ್ತವನ್ನು ಮರಳಿ ಪಡೆಯಲಾಗಿದೆ. ಮತ್ತೊಂದೆಡೆ, ಹೆಚ್ಚಿನ ಬಡ್ಡಿದರದ ಸಾಲಗಳನ್ನು ಕಡಿಮೆ ಬಡ್ಡಿ ದರಕ್ಕೆ ಪುನರ್ರಚನೆ ಮಾಡಿದ್ದರಿಂದ ಬಡ್ಡಿ ಹೊರೆ ಇಳಿಕೆಯಾಗಿದ್ದು, ನಗದು ಹರಿವು ಸುಧಾರಿಸಿದೆ. ಸಾಲ ಮರುಪಾವತಿಯಲ್ಲಿ ಬೆಸ್ಕಾಂ ಯಾವುದೇ ಸುಸ್ತಿ ಮಾಡದೆ ಪಾರದರ್ಶಕತೆ ಕಾಯ್ದುಕೊಂಡಿದೆ.

ಸಂಸ್ಥೆಯ ಬದ್ಧತೆಗೆ ಸಿಕ್ಕ ಫಲ

ಬಾಕಿ ಆದಾಯ ವಸೂಲಾತಿ, ವೆಚ್ಚ ನಿಯಂತ್ರಣ ಮತ್ತು ಆರ್ಥಿಕ ನಿರ್ವಹಣೆಯನ್ನು ಬಲಪಡಿಸಲು ರೂಪಿಸಿದ ನಿರಂತರ ತಂತ್ರಗಾರಿಕೆಯೇ ಈ ಲಾಭಕ್ಕೆ ಕಾರಣವಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎನ್. ಶಿವಶಂಕರ ತಿಳಿಸಿದ್ದಾರೆ. ಬಿಲ್ಲಿಂಗ್ ದಕ್ಷತೆ ಮತ್ತು ಆಡಳಿತಾತ್ಮಕ ಶಿಸ್ತು ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸಲು ದೊಡ್ಡ ಮಟ್ಟದಲ್ಲಿ ಕೈಜೋಡಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 

ಸ್ಪ್ಯಾಮ್ ಕರೆಗಳಿಗೆ ಟ್ರಾಯ್ ನಿಂದ ಕಠಿಣ ರೂಲ್ಸ್ : ಮೊದಲ ತಪ್ಪಿಗೇ 15 ದಿನ ಔಟ್‌ಗೋಯಿಂಗ್ ಬಂದ್ | Spam call

Tags: Bescomprofit₹293.62 crore
Previous Post

ಸ್ಪ್ಯಾಮ್ ಕರೆಗಳಿಗೆ ಟ್ರಾಯ್ ನಿಂದ ಕಠಿಣ ರೂಲ್ಸ್ : ಮೊದಲ ತಪ್ಪಿಗೇ 15 ದಿನ ಔಟ್‌ಗೋಯಿಂಗ್ ಬಂದ್ | Spam call

Next Post

ಶಿಕ್ಷಣ ಸೇವೆಗೆ ಗೌರವದ ಗರಿ: ನಾಳೆ ಪ್ರೊ. ಶ್ರೀಕಂಠಯ್ಯ ಅವರಿಗೆ ಅಭಿನಂದನಾ ಸಮಾರಂಭ | Prof. Srikanthayya

Related Posts

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ 30 ಅಡಿ ಎತ್ತರದ ಜಿರಳೆ ದಹನ! ರಾವಣನ ಸೈನ್ಯಕ್ಕೆ ಹೊಸ ಅತಿಥಿ
Top Story

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ 30 ಅಡಿ ಎತ್ತರದ ಜಿರಳೆ ದಹನ! ರಾವಣನ ಸೈನ್ಯಕ್ಕೆ ಹೊಸ ಅತಿಥಿ

by ಪ್ರತಿಧ್ವನಿ
October 16, 2026
0

ದಸರಾ ಹಬ್ಬದ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ರಾಮಲೀಲಾ ಈ ಬಾರಿ ವಿಶೇಷ ಕಾರಣಕ್ಕೆ ಗಮನ ಸೆಳೆಯುತ್ತಿದೆ. ರಾವಣ, ಕುಂಭಕರ್ಣ ಮತ್ತು ಮೇಘನಾದರ ಪ್ರತಿಕೃತಿಗಳ ದಹನದ...

Read moreDetails
ಆಳ್ವಿಕೆಯ ದುರವಸ್ಥೆ ನಲುಗಿರುವ ಪ್ರಜಾಸತ್ತೆ..

ಆಳ್ವಿಕೆಯ ದುರವಸ್ಥೆ ನಲುಗಿರುವ ಪ್ರಜಾಸತ್ತೆ..!

October 16, 2026
31 ಮುಸ್ಲಿಂ ದೇಶಗಳ ಪೈಲಟ್‌ಗಳಿಗೆ ಇಸ್ರೇಲ್ ನಿರ್ಬಂಧ? ಫ್ಲೈದುಬೈ ಘಟನೆ ಬಳಿಕ ಮಹತ್ವದ ಬೆಳವಣಿಗೆ!

31 ಮುಸ್ಲಿಂ ದೇಶಗಳ ಪೈಲಟ್‌ಗಳಿಗೆ ಇಸ್ರೇಲ್ ನಿರ್ಬಂಧ? ಫ್ಲೈದುಬೈ ಘಟನೆ ಬಳಿಕ ಮಹತ್ವದ ಬೆಳವಣಿಗೆ!

October 15, 2026
ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮತ್ತೆ ವಿಘ್ನ! ಸುರಕ್ಷತಾ ತಪಾಸಣೆಯಲ್ಲಿ 36 ದೋಷ ಪತ್ತೆ

ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮತ್ತೆ ವಿಘ್ನ! ಸುರಕ್ಷತಾ ತಪಾಸಣೆಯಲ್ಲಿ 36 ದೋಷ ಪತ್ತೆ

October 15, 2026
ಅಪ್ಪು ಕೊನೆಯ ಕ್ಷಣಗಳ ಬಗ್ಗೆ ಡಾ. ರಮಣ ರಾವ್ ಬಿಚ್ಚಿಟ್ಟ ಸತ್ಯವೇನು?

ಅಪ್ಪು ಕೊನೆಯ ಕ್ಷಣಗಳ ಬಗ್ಗೆ ಡಾ. ರಮಣ ರಾವ್ ಬಿಚ್ಚಿಟ್ಟ ಸತ್ಯವೇನು?

October 15, 2026
Next Post
Felicitation ceremony for Prof. Srikantaiah tomorrow

ಶಿಕ್ಷಣ ಸೇವೆಗೆ ಗೌರವದ ಗರಿ: ನಾಳೆ ಪ್ರೊ. ಶ್ರೀಕಂಠಯ್ಯ ಅವರಿಗೆ ಅಭಿನಂದನಾ ಸಮಾರಂಭ | Prof. Srikanthayya

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada