4 ವರ್ಷದ ಪುತ್ರಿಯನ್ನು ನಾಲ್ಕನೇ ಮಹಡಿಯಿಂದ ಎಸೆದು ತಾಯಿ ಕೊಲೆಗೈದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಸಂಪಂಗಿ ರಾಮನಗರದ ಅದ್ವೈತ್ ಅಪಾರ್ಟ್ ಮೆಂಟ್ ನಡೆದಿದೆ.
4 ವರ್ಷದ ಮಗಳು ಜೀತಿಯನ್ನು ತಾಯಿ ಸುಷ್ಮಾ ಎಸೆಯುತ್ತಿರುವ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ಕೊಂದ ನಂತರ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಸುಷ್ಮಾ ಇತ್ತೀಚೆಗಷ್ಟೇ ಅನಾರೋಗ್ಯದಿಂದ ಗಂಡನನ್ನು ಕಳೆದುಕೊಂಡಿದ್ದರು. . ಮಗಳು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಳು ಎಂದು ತಿಳಿದು ಬಂದಿದೆ. ಮಗುವನ್ನು ನೋಡಿಕೊಳ್ಳಲು ಆಗದೇ ಈ ಕೃತ್ಯ ಎಸಗಿದ್ದಾಳೆ ಎಂದು ಶಂಕಿಸಲಾಗಿದೆ.
ಮಗುವನ್ನು ಮೇಲಿಂದ ಬಿಸಾಡಿದ ಬಳಿಕ ಸುಷ್ಮಾ ತಾನೂ ಆತ್ಮಹತ್ಯೆ ಮಡಿಕೊಳ್ಳಲು ಯತ್ನಿಸಿದಾಗ ಅಕ್ಕಪಕ್ಕದ ಮನೆಯವರು ರಕ್ಷಿಸಿದ್ದಾರೆ.
ಸುಷ್ಮಾ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್ ನಲ್ಲಿ ಮಗುವನ್ನು ಬಿಟ್ಟು ಬಂದಿದ್ದಳು. ಈ ವೇಳೆ ಪತಿ ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು. ಇದೀಗ ಮತ್ತೆ ಮಗುವನ್ನು ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಸ್ಥಳೀಯರ ಸಮಯ ಪ್ರಜ್ಞೆಯಿಂದ ಆಕೆ ಬಚಾವ್ ಆಗಿದ್ದಾಳೆ.
ಸುಷ್ಮಾ ದಂತ ವೈದ್ಯೆಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದರೆ, ಪತಿ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಸದ್ಯ ಪ್ರಕರಣ ಸಂಬಂಧ ತಾಯಿ ಸುಷ್ಮಾ ವಿರುದ್ದ ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.