ಅಗೆದಷ್ಟು ಅಗಲ. ಬಗೆದಷ್ಟು ಆಳ ಎನ್ನುವ ಹಾಗೇ ಬಿಡಿಎ BDA ಕೆರೆ ಒತ್ತುವರಿ ಕರ್ಮಕಾಂಡ ಬಯಲಾಗುತ್ತಲೇ ಇದೆ. ಎಲ್ಲವೂ ಹಿಂದಿನ ಸರ್ಕಾರ ಮಾಡಿದ್ದು ಅಂತ ಈಗಿನ ಸರ್ಕಾರ ಕೆಲವೇ ಕೆಲವು ಕಡೆ ರಾಜಕಾಲುವೆ ಒತ್ತುವರಿ ತೆರವು ಮಾಡೋ ಕಳ್ಳಾಟ ಮಾಡುತ್ತಿದೆ. ಬಿಡಿಎ ಕೆರೆಗಳನ್ನ ನುಂಗಿಹಾಕಿ ಸಾವಿರಾರು ನಿವೇಶನಗಳ ಮಾರಾಟ ಮಾಡಿದೆ.
ಬಿಡಿಎ ಕೆರೆ ಒತ್ತುವರಿ ಕರ್ಮಕಾಂಡ ಅಷ್ಟಿಷ್ಟಲ್ಲ. ಅಸಲಿಗೆ ಬೆಂಗಳೂರಲ್ಲಿ BDA ನುಂಗಿ ನೀರು ಕುಡಿದಿರುವ ಕೆರೆಗಳ ಸಂಖ್ಯೆ ಹಾಗೂ ಅದರಲ್ಲಿ ನಿರ್ಮಾಣವಾದ ಸೈಟ್ ಗಳ ಸಂಖ್ಯೆ ಎಷ್ಟು ಗೊತ್ತಾ..? ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾಡಿರುವ ಕೆರೆ ಒತ್ತುವರಿ ಒಂದು ದೊಡ್ಡ ಕರ್ಮಕಾಂಡ. 2013 – 14ರಲ್ಲಿ ಒಂದೇ ಏಟಿಗೆ 23 ಕೆರೆ ನುಂಗಿ ನೀರು ಕುಡಿದಿತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. ಹೆಚ್ಚಾಗಿ ಬಫರ್ ಝೋನ್ ಅಲ್ಲಿ ನಿವೇಶನ ನೀಡಿದ್ದಾರೆ. ಬಿಡಿಎಗೆ ಹಣ ಕೊಟ್ಟು ಖರೀದಿ ಮಾಡಿದ್ರೂ ಬಿಬಿಎಂಪಿ ಯಿಂದ ಅನುಮತಿ ಸಿಗುತ್ತಿಲ್ಲ. ಎಲ್ಲಾ ಬಫರ್ ಝೋನ್ ಗಳಲ್ಲೂ ಮನೆ ಕಟ್ಟಿರುವುದು, ನಿವೇಶನ ಹಂಚಿಕೆ ಮಾಡಿದ್ದೀವಿ. ಈಗ ಏನೂ ಮಾಡಲು ಬರಲ್ಲ ಅಂದ್ರೇ ಕಷ್ಟ.

ಬೆಂಗಳೂರು ದಕ್ಷಿಣ ಭಾಗದಲ್ಲೇ 23 ಸಾವಿರಕ್ಕೂ ಹೆಚ್ಚು ನಿವೇಶನ ಹಂಚಿಕೆ
ಮಳೆ ಬಂದಾಗ ನೆರೆ ಆಗೋಕೆ ಕಾರಣ ರಾಜಕಾಲುವೆ, ಕೆರೆ ಒತ್ತುವರಿ ಅಂತ ಹೇಳುತ್ತೆ ಬಿಬಿಎಂಪಿ. ಅದರಲ್ಲೂ ಕೆರೆ ಒತ್ತುವರಿಯೇ ಭಾರೀ ಪ್ರಮಾಣದ ನೆರೆ ಆಗೋಕೆ ಕಾರಣ ಅಂತ ತಜ್ಞರು ಸಹ ಎಚ್ಚರಿಸುತ್ತಲಿದ್ದಾರೆ. ಆದರೆ ದಾಖಲೆ ಪ್ರಮಾಣದಲ್ಲಿ ನಗರದಲ್ಲಿ ಕೆರೆ ಒತ್ತುವರಿಯನ್ನ ಬಿಡಿಎ ಮಾಡಿದೆ. ಒಟ್ಟು 46 ಕೆರೆಗಳನ್ನು ಇದೂವರೆಗೂ ಅಕ್ರಮವಾಗಿ ಒತ್ತುವರಿ ಮಾಡಿದೆ ಬಿಡಿಎ. ಇನ್ನು ಬೆಂಗಳೂದು ದಕ್ಷಿಣ ಭಾಗದಲ್ಲಿ ಅತೀ ಹೆಚ್ಚು ಒತ್ತುವರಿ ಮಾಡಲಾಗಿದೆ. ಕೆರೆ ಜಾಗದಲ್ಲಿ 23,835 ನಿವೇಶನಗಳನ್ನ ಹಂಚಿಕೆ ಮಾಡಿದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. ಇನ್ನೂ ಕೆಲವು ಕಡೆ ನಿವೇಶನ ನಿರ್ಮಿಸಿ ಹಂಚಿಕೆ ಮಾಡುವುದು ಬಾಕಿಯಿದೆ.
ಕೆರೆ ಒತ್ತುವರಿಯನ್ನ ಒಪ್ಪಿಕೊಂಡ ಬಿಡಿಎ ಅಧ್ಯಕ್ಷರಾದ ವಿಶ್ವನಾಥ್ 2013-14ರ ಸರ್ಕಾರದ ಅವಧಿಯಲ್ಲಿ ಕೆರೆ ಸ್ವರೂಪ ಕಳೆದುಕೊಂಡಿದೆ ಎಂದು ಒತ್ತುವರಿ ಮಾಡಿಕೊಳ್ಳಲಾಗಿದೆ. ಈಗ ಎಲ್ಲಾ ಹಂಚಿಕೆ ಆದ್ಮೆಲೆ ಏನೂ ಮಾಡಲು ಬರಲ್ಲ ಅಂತಾರೆ ಬಿಡಿಎ ಅಧ್ಯಕ್ಷರು. ಬೆಂಗಳೂರಿನ ನೆರೆಗೆ ಬಿಡಿಎ ಕೆರೆ ಒತ್ತುವರಿ ದೊಡ್ಡ ಕಾರಣ. ಬಫರ್ ಝೋನ್ ಸೈಟ್ ಗಳು ಅನ್ನೋ ಕಾರಣಕ್ಕೆ ಬಿಬಿಎಂಪಿ ಅನುಮತಿ ನೀಡದಿದ್ರೇ ಒಂದು ತರದ ಸಮಸ್ಯೆ. ಒಂದು ವೇಳೆ ಅನುಮತಿ ಕೊಟ್ರೆ ಮತ್ತೆ ಮಳೆಯಿಂದ ನೆರೆ ಸಮಸ್ಯೆ ಎದುರಾಗಲಿದೆ.