ರಾಜ್ಯದಲ್ಲಿ ಮಂಕಿಪಾಕ್ಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಬಿಬಿಎಂಪಿ ನೂತನ ಮಾರ್ಗಸೂಚಿ ಪ್ರಕಟಿಸಿದೆ.
ಪಾಲಿಕೆ UPHC ಗಳಿಗೆ ಬರುವ ರೋಗಿಗಳಿಗೆ ಮಂಕಿಪಾಕ್ಸ್ ಲಕ್ಷಣ ಇದ್ದರೆ ತಪಾಸಣೆ. ಮಂಕಿಪಾಕ್ಸ್ ದೃಢವಾದರೆ 21 ದಿನಗಳ ಕಾಲ ಐಸೋಲೇಷನ್ ಜೊತೆಗೆ ಗುಣ ಲಕ್ಷಣಗಳು ಗುಣವಾಗುವ ವರೆಗೆ ತಜ್ಞರ ಮೇಲ್ವಿಚಾರಣೆಯಲ್ಲೇ ಇರುತ್ತಾರೆ.
ಚರ್ಮ ಮತ್ತು ಮಕ್ಕಳ ಹೊರ ರೋಗ ವಿಭಾಗದಲ್ಲಿ ಹೆಚ್ಚಿನ ನಿಗಾ ಇಡುವಂತೆ ಸೂಚನೆ. UPHC ಗಳಲ್ಲಿ ಮಂಕಿಪಾಕ್ಸ್ ಬಗ್ಗೆ ಇರುವ ಮಾಹಿತಿಯನ್ನು ನೇರವಾಗಿ ಜನರಿಗೆ ತಿಳಿಸುವಂತ ಕೆಲಸವಾಗಬೇಕು. ಮಂಕಿಪಾಕ್ಸ್ ಪ್ರಕರಣ ದೃಢವಾಗದಿದ್ದರೂ ಕೂಡ ವರದಿ ಬರುವವ ವರೆಗೆ IPC ನಿಯಮದ ಪ್ರಕಾರವೇ ಹಾರೈಕೆ ಮಾಡಬೇಕು ಎಂದು ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.