Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ವಿಪ್ರೋ ಮುಂದೆ ಮಂಡಿಯೂರಿದರಾ ಬಿಬಿಎಂಪಿ, ಕಂದಾಯ ಇಲಾಖೆ?

ಪ್ರತಿಧ್ವನಿ

ಪ್ರತಿಧ್ವನಿ

September 20, 2022
Share on FacebookShare on Twitter

ಶ್ರೀಸಾಮಾನ್ಯರ ಮುಂದೆ ಘರ್ಜಿಸುವ ಬಿಬಿಎಂಪಿ ಬುಲ್ಡೋಜರ್ ಗಳು ದೊಡ್ಡವರ ಮುಖ ಕಾಣುತ್ತಿದ್ದಂತೆ ಬಿಲ ಸೇರಿಕೊಳ್ಳುತ್ತಿದೆ. ಮೂರ್ನಾಲ್ಕು ದಿನಗಳ ಬಳಿಕ ಒತ್ತುವರಿ ತೆರವು ಅಂತ ಫೀಲ್ಡಿಗೆ ಇಳಿದ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇಂದು ವಿಪ್ರೋ ಕಂಪೆನಿ ಮುಂದೆ ಮಂಡಿಯೂರಿದ್ದಾರೆ. 

ಹೆಚ್ಚು ಓದಿದ ಸ್ಟೋರಿಗಳು

Vishnuvardhan cutout : ಏಷ್ಯಾ, ಇಂಟರ್​ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ ಸೇರಿದ‌ ‘ವಿಷ್ಣುವರ್ಧನ್‌ ಕಟೌಟ್ ಜಾತ್ರೆ’..!

HD Kumaraswamy tweet ; ಷರತ್ತು ಸಹಿತ ಗ್ಯಾರಂಟಿಗಳ ಬಗ್ಗೆ ಮಾಜಿ CM ಹೆಚ್.ಡಿ.ಕುಮಾರಸ್ವಾಮಿ ಕಿಡಿ

10 kg rice is also free : ಬಿಪಿಎಲ್‌ ಕಾರ್ಡ್‌ ಇದ್ದವರಿಗೆ 10 ಕೆಜಿ ಅಕ್ಕಿಯೂ ಫ್ರೀ ..!

ಮಾರ್ಕಿಂಗ್ ಮಾಡಿದ್ದು 8 ಅಡಿ.. ಆದರೆ ಕಿತ್ತು ಹಾಕಿದ್ದು ನಾಲ್ಕೇ ನಾಲ್ಕು ಕಲ್ಲು !!

ಗಂಟೆ ಬೆಳಗ್ಗೆ 11:30. ಒತ್ತುವರಿ ತೆರವಿಗೆ ಅಂತ ಬಿಬಿಎಂಪಿ ಅಧಿಕಾರಿಗಳು ಸರ್ಜಾಪುರ ಮುಖ್ಯ ರಸ್ತೆಯಲ್ಲಿರುವ ವಿಪ್ರೋಗೆ ಬಂದಿದ್ದರು. ಬಂದವರೇ ಕಳೆದ ದಿನ ಮಾರ್ಕಿಂಗ್ ಮಾಡಲಾದ ಜಾಗವನ್ನು ಮತ್ತೊಮ್ಮೆ ದೃಢೀಕರಿಸಿ, ತೆರವು ಕಾರ್ಯಾಚರಣೆಗೆ ಬುಲ್ಡೋಜರ್ ತರಿಸಿಕೊಂಡರು.‌ ಸರಿಯಾಗಿ 12 ಗಂಟೆಗೆ ಬುಲ್ಡೋಜರ್ ವಿಪ್ರೋ ಒತ್ತುವರಿ ಮಾಡಿ ಕಟ್ಟಿರುವ ತಡೆಗೋಡೆಯನ್ನು ಡ್ರಿಲ್ ಮಾಡಿ ಹೊಡೆದು ಉರುಳಿಸಿತು. ಒಂದು ತಾಸುಗಳ ಕಾಲ ನಿರಂತರವಾಗಿ ವಿಪ್ರೋದಲ್ಲಿ ತೆರವು ಕಾರ್ಯಾಚರಣೆ ನಡೆದಿತ್ತು. ಅಷ್ಟೊತ್ತಿಗೆ ಬೆಂಗಳೂರು ಪೂರ್ವ ತಾಲೂಕಿನ ತಹಶಿಲ್ದಾರ್ ಅಜಿತ್ ರೈ ಸ್ಥಳಕ್ಕೆ ಆಗಮಿಸಿದರು. ತಹಶಿಲ್ದಾರ್ ಅಜಿತ್ ರೈ ಆಗಮನದೊಂದಿಗೆ ಬಿರುಸಿನಿಂದ ಸಾಗಿದ್ದ ತೆರವು ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿತು. 

ವಿಪ್ರೋ ತೆರವು ಕಾರ್ಯಾಚರಣೆ ಮಧ್ಯೆ ಅಧಿಕಾರಿಗಳಿಗೆ ಬಂತು ಪೋನ್ ಕರೆ !!

ಅಸಲಿಗೆ ವಿಪ್ರೋ, ಸಲಾರ್‌ಪುರಿಯಾ ಕಂಪೆನಿಗಳು ಸರ್ಜಾಪುರ ಮುಖ್ಯ ರಸ್ತೆಯಲ್ಲಿ, ಹಾಲನಾಯಕನಹಳ್ಳಿ ಕೆರೆಯಿಂದ ಸಾವಳಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದೆ. ಈ ಎರಡೂ ಸಂಸ್ಥೆಗಳು ಒಟ್ಟಾರೆ 300 ಮೀಟರ್ ಯದ್ದ ಹಾಗೂ 8 1/2 ಅಡಿ ಅಗಲ ರಾಜಕಾಲುವೆ ನುಂಗಿ ನೀರು ಕುಡಿದಿದೆ. ಈ ವಿಚಾರ 2016ರಲ್ಲಿ ಪಾಲಿಕೆ ನಡೆಸಿದ SWD ಸರ್ವೇಯಲ್ಲೇ ಬಹಿರಂಗಗೊಂಡಿತ್ತು. ಇದೀಗ ವಿಪ್ರೋದ ಕಂಪೌಂಡ್ ವಾಲ್ ತೆರವುಗೊಳಿಸುತ್ತಿದ್ದಂತೆ ಅಧಿಕಾರಿಗಳ ಮೊಬೈಲ್ ಗೆ ಬಂದ ಕರೆಯೊಂದರ ಕಾರಣದಿಂದಾಗಿ ಇಡೀ ಕಾರ್ಯಾಚರಣೆಯೇ ಸ್ಥಗಿತಗೊಂಡಿದೆ. ಅಲ್ಲದೆ ಗ್ರಿಲ್ ಇರುವ ಕಾರಣಕ್ಕೆ ಗ್ಯಾಸ್ ಕಟರ್ ತರುವುದು ಮರೆತುಹೋಗಿದೆ. ಕಾರ್ಯಾಚರಣೆ ನಾಳೆ ಮುಂದುವರೆಯುತ್ತೆ ಅಂತ ಬಿಬಿಎಂಪಿ ಅಧಿಕಾರಿಗಳು ನೌಟಂಕಿ ಆಟವಾಡಿದ್ದಾರೆ. ಈ ಮೂಲಕ ಬಿಬಿಎಂಪಿ ಪೌರುಷ ಶ್ರೀಸಾಮಾನ್ಯರ ಮುಂದೆ ಮಾತ್ರ ಎಂಬುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಕ್ಕೆ ಮಾಧ್ಯಮಗಳು ತಹಶಿಲ್ದಾರ್ ಅಜಿತ್ ರೈ ಅನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಏಕಾಏಕಿ ತಹಶಿಲ್ದಾರ್ ಸಾಹೇಬರು ಗರಂ ಆಗಿ, ಸಿಟ್ಟು ತಡೆಯಲಾರದೆ ತನ್ನ ಜಾಗದ ತೂಕವನ್ನೂ ಲೆಕ್ಕಿಸಿದೆ ಅನಾಮಿಕರೊಬ್ಬರ ಕೈಗೊಂಬೆಯಂತೆ ವರ್ತಿಸಿದ್ದಾರೆ. ಅಲ್ಲದೆ ಮಾಧ್ಯಮಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಅಂತಿದ್ದಾರೆ. ಒಟ್ಟಾರೆ ಶ್ರೀಸಾಮಾನ್ಯರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಅಂತ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪದೇ ಪದೇ ಸಾಬೀತು ಮಾಡ್ತಿದ್ದಾರೆ. ಬಡಬಗ್ಗರ ಮನೆ ಮುಂದೆ ತೋರುವ ಪ್ರತಾಪ ದೊಡ್ಡವರ ಮುಂದೆ ಬಿಬಿಎಂಪಿ ಅಧಿಕಾರಿಗಳು ತೋರದೆ ಅವರ ಅಣತಿಯಂತೆ ಕೆಲಸ ಮಾಡುವರಂತೆ ಕಾಣುತ್ತಿದ್ದಾರೆ. ಇದಕ್ಕೆ ಇಂದು ವಿಪ್ರೋ ಒತ್ತುವರಿ ತೆರವು ಕಾರ್ಯಾಚರಣೆಯೇ ಸಾಕ್ಷಿ.

RS 500
RS 1500

SCAN HERE

Pratidhvani Youtube

«
Prev
1
/
4538
Next
»
loading
play
Siddaramaiah | ಯುವ ನಿಧಿ ಕಂಡೀಷನ್ಸ್ ಸ್ಪಷ್ಟಪಡಿಸಿದ ಸಿಎಂ #Pratidhvani
play
Siddaramaiah | ಬಿಪಿಎಲ್‌ ಕಾರ್ಡ್‌ ಇದ್ದವರಿಗೆ 10 ಕೆಜಿ ಅಕ್ಕಿಯೂ ಫ್ರೀ ..! #Pratidhvani
«
Prev
1
/
4538
Next
»
loading

don't miss it !

Chikkaballapur News :  ‘ಚಿಕ್ಕಬಳ್ಳಾಪುರ ನಗರದಲ್ಲಿ ನನ್ನ ಫ್ಲೆಕ್ಸ್ ಇರಬಾರದು’ ; ಶಾಸಕ ಪ್ರದೀಪ್‌ ಈಶ್ವರ್‌
Top Story

Chikkaballapur News : ‘ಚಿಕ್ಕಬಳ್ಳಾಪುರ ನಗರದಲ್ಲಿ ನನ್ನ ಫ್ಲೆಕ್ಸ್ ಇರಬಾರದು’ ; ಶಾಸಕ ಪ್ರದೀಪ್‌ ಈಶ್ವರ್‌

by ಪ್ರತಿಧ್ವನಿ
May 29, 2023
ನೂತನ ಸರ್ಕಾರದಲ್ಲಿ ಸಚಿವರಿಗೆ ಯಾವ ಖಾತೆ ಹಂಚಿಕೆ..?
ಅಂಕಣ

ನೂತನ ಸರ್ಕಾರದಲ್ಲಿ ಸಚಿವರಿಗೆ ಯಾವ ಖಾತೆ ಹಂಚಿಕೆ..?

by ಕೃಷ್ಣ ಮಣಿ
May 27, 2023
Brij Bhushan Singh : ಆರೋಪ ಸಾಬೀತಾದರೆ ನಾನು ನೇಣು ಹಾಕಿಕೊಳ್ಳುತ್ತೇನೆ  : ಬ್ರಿಜ್‌ ಭೂಷಣ್‌ ಸಿಂಗ್‌
Top Story

Brij Bhushan Singh : ಆರೋಪ ಸಾಬೀತಾದರೆ ನಾನು ನೇಣು ಹಾಕಿಕೊಳ್ಳುತ್ತೇನೆ : ಬ್ರಿಜ್‌ ಭೂಷಣ್‌ ಸಿಂಗ್‌

by ಪ್ರತಿಧ್ವನಿ
June 1, 2023
ನೂತನ ಸಚಿವರಿಗೆ ಟಾರ್ಗೆಟ್​ ಫಿಕ್ಸ್​ ಮಾಡಿದ ಸಿಎಂ ಸಿದ್ದರಾಮಯ್ಯ
ರಾಜಕೀಯ

ನೂತನ ಸಚಿವರಿಗೆ ಟಾರ್ಗೆಟ್​ ಫಿಕ್ಸ್​ ಮಾಡಿದ ಸಿಎಂ ಸಿದ್ದರಾಮಯ್ಯ

by Prathidhvani
May 28, 2023
Minister K.J.George visits BESCOM Corporate Office : ಬೆಸ್ಕಾಂ ನಿಗಮ ಕಚೇರಿಗೆ ಭೇಟಿ ನೀಡಿದ ಇಂಧನ ಸಚಿವ ಕೆ. ಜೆ.ಜಾರ್ಜ್‌
Top Story

Minister K.J.George visits BESCOM Corporate Office : ಬೆಸ್ಕಾಂ ನಿಗಮ ಕಚೇರಿಗೆ ಭೇಟಿ ನೀಡಿದ ಇಂಧನ ಸಚಿವ ಕೆ. ಜೆ.ಜಾರ್ಜ್‌

by ಪ್ರತಿಧ್ವನಿ
June 1, 2023
Next Post
ನಮೀಬಿಯಾದಿಂದ ಬಂದ 8 ಚೀತಾ ಕಾಡಿಗೆ ಬಿಟ್ಟ ಪ್ರಧಾನಿ ಮೋದಿ

ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾ ಚೀತಾ: ಹೊಸ ಆತಂಕದಲ್ಲಿ ಸ್ಥಳೀಯ ಆದಿವಾಸಿಗಳು,ಗ್ರಾಮಸ್ಥರು

ಮಹಾದೇವಪುರದಲ್ಲಿ ಬಿಬಿಎಂಪಿಯಿಂದ ಆಪರೇಷನ್ ಬುಲ್ಡೋಜರ್!

ಕಂದಾಯ ಇಲಾಖೆ ನೋಟಿಸ್: ರಾಜಕಾಲುವೆ ಹೂಳೆತ್ತಿ ತಾವೇ ರೆಡಿ ಮಾಡಿಸಿಕೊಳ್ಳುತ್ತಿದೆ ರೈನ್ ಬೋ ಡ್ರೈವ್ ಲೇಔಟ್ !!

ಅಪಾರ್ಟ್‌ ಮೆಂಟ್‌ ಕಟ್ಟಡದ ಗೋಡೆ ಕುಸಿದು ನಾಲ್ವರು ಕಾರ್ಮಿಕರು ಸಾವು

ಅಪಾರ್ಟ್‌ ಮೆಂಟ್‌ ಕಟ್ಟಡದ ಗೋಡೆ ಕುಸಿದು ನಾಲ್ವರು ಕಾರ್ಮಿಕರು ಸಾವು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist