ಬಿಗ್ ಬಾಸ್ಗೆ 17 ಮಂದಿ ಸ್ಪರ್ಧಿಗಳಿದ್ದರು. ಪ್ರತಿ ವಾರ ಒಬ್ಬೊಬ್ಬ ಸ್ಪರ್ಧಿಗಳು ಆಟದಿಂದ ಎಲಿಮಿನೇಟ್ ಆಗಿದ್ದರು. ಕಳೆದ ವಾರಾ ಐಶ್ವರ್ಯಾ ಶಿಂಧೋಗಿ ಔಟ್ ಆಗಿ ಹೊರ ಬಂದಿದ್ದರು. ಪ್ರಸ್ತುತ ಮನೆಯಲ್ಲಿ 9 ಸ್ಪರ್ಧಿಗಳಿದ್ದಾರೆ. ಮೋಕ್ಷಿತಾ ಪೈ(Mokshitha Pai), ತ್ರಿವಿಕ್ರಮ್(Trivikram), ಭವ್ಯಾ ಗೌಡ(Bhavya Gowda), ಉಗ್ರಂ ಮಂಜು(Ugram Manju), ಧನರಾಜ್(Dhanraj), ರಜತ್(Rajath), ಗೌತಮಿ(Gowthami), ಹನುಮಂತ(Hanumantha), ಚೈತ್ರಾ ಕುಂದಾಪುರ(Chaitra Kundapur) ಮನೆಯಲ್ಲಿದ್ದಾರೆ.

ಕನ್ನಡದ ‘ಬಿಗ್ ಬಾಸ್ ಸೀಸನ್ 11’ರ (Big Boss Kannada 11) ಆಟ 93ನೇ ದಿನಕ್ಕೆ ಕಾಲಿಟ್ಟಿದೆ. ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್’ ಆಟಕ್ಕೆ ತೆರೆ ಬೀಳಲಿದೆ. ಹಾಗಾದರೆ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗ? ಎನ್ನುವ ಪ್ರೇಕ್ಷಕರಿಗೆ ಇಲ್ಲಿದೆ ಉತ್ತರ.

9 ಸ್ಪರ್ಧಿಗಳ ನಡುವೆ ಉಳಿವಿಗಾಗಿ ಫೈಟ್ ನಡೆಯುತ್ತಿದೆ. ಹೀಗಿರುವಾಗ ಇನ್ನೂ 2 ವಾರಗಳ ಕಾಲ ಬಿಗ್ ಬಾಸ್ ಆಟ ಮುಂದುವರೆಯಲಿದೆ ಎನ್ನಲಾಗಿದೆ. 11ರ ಸೀಸನ್ ‘ಬಿಗ್ ಬಾಸ್’ ಹೊಸ ಅದ್ಯಾಯದೊಂದಿಗೆ ಶುರು ಆಗಿತ್ತು. ಟಿರ್ಆರ್ಪಿ (TRP) ವಿಚಾರದಲ್ಲೂ ‘ಬಿಗ್ ಬಾಸ್’ ಅಗ್ರ ಸ್ಥಾನದಲ್ಲಿದೆ. ಹಾಗಾಗಿ 125 ದಿನಗಳ ಕಾಲ ಶೋ ನಡೆಸಬೇಕು ಎಂದು ಬಿಗ್ ಬಾಸ್ ಟೀಮ್ ಇದೆ ಎಂದು ಹೇಳಲಾಗುತ್ತಿದೆ. ಇದು ನಿಜವೇ ಆಗಿದ್ದಲ್ಲಿ ಬಿಗ್ ಬಾಸ್ ನೋಡುವ ಪ್ರೇಕ್ಷಕರಿಗೆ ಖುಷಿ ಆಗೋದು ಗ್ಯಾರಂಟಿ.
