ಅಕ್ರಮ ಕಸಾಯಿಖಾನೆಯಲ್ಲಿ ಏಳು ಹಸುಗಳ ಕತ್ತುಕೊಯ್ದು ಬರ್ಬರ ಹತ್ಯೆ ನಡೆಸಿದ ಘಟನೆ ಶಿವಮೊಗ್ಗ ಹೊರವಲಯದ ಸೂಳೇಬೈಲಿನಲ್ಲಿ ನಡೆದಿದೆ
ಸೂಳೆಬೈಲಿನ ಅಜೀಜ್ ಎಂಬುವರ ಮನೆ ಹಿಂಭಾಗದ ಶೆಡ್ ನಲ್ಲಿ ಮಾಂಸಕ್ಕಾಗಿ ಗೋವುಗಳ ಹತ್ಯೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಇಂದು ಬೆಳಿಗ್ಗೆ 5.30 ಕ್ಕೆ ತುಂಗಾ ನಗರ ಠಾಣೆ ಪಿಐ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರು ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ದಾಳಿ ಮಾಡಿದ್ದಾರೆ. ಆದರೆ ಈ ವೇಳೆ ಭೀಕರ ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರ ದಾಳಿಗೂ ಮುನ್ನವೇ ಏಳು ಹಸುಗಳ ಮಾರಣಹೋಮ ನಡೆದಿದೆ.

ದಾಳಿ ಬೆನ್ನಲ್ಲೆ ಆರೋಪಿಗಳು ಪರಾರಿಯಾಗಿದ್ದಾರೆ. ಅಜೀಜ್, ಬಾಬು, ಅಬ್ದುಲ್ ಸತ್ತರ್ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಕಸಾಯಿಖಾನೆಯಲ್ಲಿದ್ದ ಉಳಿದ 10 ಹಸು ರಕ್ಷಣೆ ಮಾಡಿದ್ದಾರೆ. ಗೋವುಗಳನ್ನು ಗೋಶಾಲೆಗೆ ಶಿಫ್ಟ್ ಮಾಡಿದ್ದಾರೆ.