• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬನೇರುಘಟ್ಟದ ಜೈವಿಕ ಉದ್ಯಾನವನದಲ್ಲಿ ಮರಿಯಾನೆ ಸಾವು

ಪ್ರತಿಧ್ವನಿ by ಪ್ರತಿಧ್ವನಿ
October 14, 2021
in ಕರ್ನಾಟಕ
0
ಬನೇರುಘಟ್ಟದ ಜೈವಿಕ ಉದ್ಯಾನವನದಲ್ಲಿ ಮರಿಯಾನೆ ಸಾವು
Share on WhatsAppShare on FacebookShare on Telegram

ಬನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಶ್ರೀರಾಮುಲು ಎಂಬ ಐದು ವರ್ಷದ ಗಂಡು ಮಾರಿಯಾನೆ ಉದ್ಯಾನ ಸಮೀಪದ ಉದುಗೆ ಬಂಡೆಯಿಂದ ಜಾರಿ ಕೆಳಗೆ ಬಿದ್ದು ಮೃತಪಟ್ಟಿದೆ.

ADVERTISEMENT

ಇತ್ತಿಚಿಗಷ್ಟೇ ಯದುನಂದನ ಎಂಬ ಹೆಸರಿನ ಜಿರಾಫೆ ಆಹಾರ ತಿನನ್ನಲು ತನ್ನ ಕುತ್ತಿಗೆಯನ್ನು ಹೊರಚಾಚಿದಾಗ ಉದ್ಯಾನವನ ಆವರಣದ ಗೋಡೆಯ ಆಂಗಲ್‌ಗೆ ಸಿಲುಕಿ ಸಾವನಪ್ಪಿತ್ತು. ಇದೀಗ, ಈ ಘಟನೆ ಮಾಸುವ ಮುನ್ನವೇ ಮರಿಯಾನೆ ಸಾವನಪ್ಪಿರುವುದು ಪ್ರಾಣಿಪ್ರಿಯರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಈ ಮರಿಯಾನೆ ಕಳೆದ ಭಾನುವಾರ ಆನೆಗಳ ಹಿಂಡಿನಿಂದ ಕಣ್ಮರೆಯಾಗಿತ್ತು. ರಾತ್ರಿ ವೇಳೆ ಕಾಡಿಗೆ ಹೋಗುವ ಉದ್ಯಾನದ ಆನೆಗಳ ಹಿಂಡು ಮರಳಿ ಬೆಳ್ಳಗೆ ಉದ್ಯಾನದ ಕಡೆ ತಿರುಗಿ ಬರುತ್ತಿದ್ದವು. ಭಾನುವಾರ ಹೋದ ಆನೆ ಶ್ರೀರಾಮುಲು ಸೋಮವಾರ ಉದ್ಯಾನದ ಅನೆಗಳ ಹಿಂಡಿನ ಜೊತೆ ಕಾಣಿಸಲಿಲ್ಲ. ಕೆಲವೊಮ್ಮೆ ಆನೆಗಳು ಕಾಡಾನೆಗಳ ಜೊತೆ ಒಂದೆರಡು ದಿನ ಇದ್ದು ವಾಪಸ್‌ ಉದ್ಯಾನದ ಆನೆಗಳ ಜೊತೆ ಕೂಡಿಕೊಳ್ಳತ್ತಿತ್ತು ಇದು ಸಹ ಹಾಗೆಯೇ ಹಾಗಿರಬಹುದು ಎಂದು ಉದ್ಯಾನದ ಸಿಬ್ಬಂದಿ ಭಾವಿಸಿದರು.

ಶ್ರೀರಾಮುಲು ಹಿಂಡಿನಿಂದ ಕಾಣೆಯಾಗಿ ವಾಪಸ್‌ ಕೂಡಿಕೊಳ್ಳದಿರುವುದು ಉದ್ಯಾನದ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಸಿಬ್ಬಂದಿಯು ಉದ್ಯಾನಕ್ಕೆ ಹೊಂದಿಕೊಂಡಿದ್ದ ಕಾಡಿನಲ್ಲಿ ಶೋಧ ನಡೆಸಿದಾಗ ಆನೆ ಪತ್ತೆಯಾಗಿರಲಿಲ್ಲ. ಬುಧವಾರ ಬೆಳ್ಳಗೆ ಸಿಬ್ಬಂದಿ ಹುಡುಕಾಟದಲ್ಲಿ ತೊಡಗಿದ್ದ ಸಮಯದಲ್ಲಿ ಉದ್ಯಾನದ ಸಮೀಪವಿರುವ ಉದುಗೆ ಬಂಡೆಯಿಂದ ಕೆಳಗೆ ಉರುಳಿ ಬಿದ್ದು ಕೊಳೆತ ಸ್ಥಿತಿಯಲ್ಲಿದ್ದ ಆನೆಯ ಮೃತದೇಹ ಪತ್ತೆಯಾಗಿದೆ. ಎತ್ತರದಿಂದ ಬಿದ್ದ ರಭಸಕ್ಕೆ ಅದರ ದಂತ ಮುರಿದು ಹೋಗಿದೆ.

ಕಳೆದ ಒಂದು ವಾರದಿಂದ ಮಳೆ ಸತತವಾಗಿ ಸುರಿಯುತ್ತಿರುವ ಕಾರಣ ರಾತ್ರಿ ವೇಳೆ ಹುಲ್ಲು ಮೇಯಲು ಹೋದಾಗ ಆನೆ ಬಂಡೆಯಿಂದ ಜಾರಿ ಕೆಳಗೆ ಬಿದ್ದಿರಬಹುದು ಎಂದು ಉದ್ಯಾನದ ಸಿಬ್ಬಂದಿ ಶಂಕಿಸಿದ್ದಾರೆ. ಆನೆ ಬಿದ್ದಿರುವ ಸ್ಥಳವು ಗುಡ್ಡದಿಂದ ಸುಮಾರು 100 ಮೀಟರ್‌ಗೂ ಹೆಚ್ಚು ಆಳದಲ್ಲಿದೆ. ಆನೆ ಬಿದ್ದಿರುವ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಉದ್ಯಾನವನದ ಸಿಬ್ಬಂದಿ ಇತರೆ ಆನೆಗಳ ಸಹಾಯದೊಂದಿಗೆ ಆನೆಯ ಮೃತದೇಹವನ್ನ ಮೇಳಕ್ಕೆತ್ತಿದ್ದರು.

2016ರ ನವೆಂಬರ್‌ 6ರಂದು ಈ ಮರಿಯಾನೆಯು ನಿಸರ್ಗ ಎಂಬ ಹೆಣ್ಣು ಅನಗೆ ಜನಿಸಿತ್ತು. ಆನೆಗೆ ಶ್ರೀರಾಮುಲು ಎಂದು ಉದ್ಯಾನವನದ ಸಿಬ್ಬಂದಿ ನಾಮಕರಣ ಮಾಡಿದ್ದರು. ಈ ಮರಿಯಾನೆಯನ್ನು ಕೆಲವು ದಿನಗಳ ಹಿಂದೆ ಜರ್ನಾಧನ ರೆಡ್ಡಿ ಶ್ರೀರಾಮುಲುನನ್ನು ದತ್ತು ಪಡೆದಿದ್ದರು.

Tags: Death of ElephantselephantElephant Camps in KarnatakaElephant CorridorElephantsKarnataka State Elephant Task Force
Previous Post

ʼಇದು ನನ್ನ ವಿಚಾರವಲ್ಲ. ಏನಿದ್ದರೂ ಪಕ್ಷ ತೀರ್ಮಾನಗೊಳಿಸುತ್ತೆʼ- ಉಚ್ಛಾಟನೆಗೊಂಡ ಸಲೀಂ ಯಾಚಿಸಿದ ಕ್ಷಮೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

Next Post

ಸಂವಿಧಾನದ ಕುರಿತು AICC ವಕ್ತಾರೆ ಲಾವಣ್ಯ ಬಲ್ಲಾಳ್‌ ಮಾತು

Related Posts

ರೇಣುಕಾಸ್ವಾಮಿ ಪ್ರಕರಣ: ಮಾಫಿ ಸಾಕ್ಷಿಯಾದ ಪ್ರದೋಷ್‌ಗೆ ಕುಟುಂಬದವರ ಜೊತೆ ಮಾತನಾಡಲು ಅವಕಾಶ ಸಿಗುತ್ತಾ?
ಕರ್ನಾಟಕ

ರೇಣುಕಾಸ್ವಾಮಿ ಪ್ರಕರಣ: ಮಾಫಿ ಸಾಕ್ಷಿಯಾದ ಪ್ರದೋಷ್‌ಗೆ ಕುಟುಂಬದವರ ಜೊತೆ ಮಾತನಾಡಲು ಅವಕಾಶ ಸಿಗುತ್ತಾ?

by ಪ್ರತಿಧ್ವನಿ
October 8, 2026
0

  ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್ ರಾವ್ ಇದೀಗ ಮಾಫಿ ಸಾಕ್ಷಿಯಾಗಿ ವಿಚಾರಣೆಗೆ ಸಹಕರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ತಿಳಿದಿರುವ ಸಂಪೂರ್ಣ ಮಾಹಿತಿಯನ್ನು...

Read moreDetails
Horoscope for October 6: A lucky day for these 4 zodiac signs

ಅಕ್ಟೋಬರ್ 8 ಗುರುವಾರದ ರಾಶಿಫಲ: ಯಾರಿಗೆ ಅದೃಷ್ಟ? ಯಾರಿಗೆ ನಷ್ಟ? ಇಲ್ಲಿದೆ ಸಂಪೂರ್ಣ ವಿವರ!

October 8, 2026
ವಿಪಕ್ಷಗಳ ಗುಡುಗಿಗೆ ಮೋದಿ ಸರ್ಕಾರ ತತ್ತರ : ಜ್ಞಾನೇಶ್‌ ಕುಮಾರ್‌ ರಾಜೀನಾಮೆಯೇ ಈ ಹೋರಾಟಕ್ಕೆ ಉತ್ತರ..?

ವಿಪಕ್ಷಗಳ ಗುಡುಗಿಗೆ ಮೋದಿ ಸರ್ಕಾರ ತತ್ತರ : ಜ್ಞಾನೇಶ್‌ ಕುಮಾರ್‌ ರಾಜೀನಾಮೆಯೇ ಈ ಹೋರಾಟಕ್ಕೆ ಉತ್ತರ..?

October 7, 2026
Jail term and ₹25,000 fine for woman who obtained government grants by creating a fake caste certificate

ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ಸರ್ಕಾರದ ಅನುದಾನ ಪಡೆದ ಮಹಿಳೆಗೆ ಜೈಲು ಶಿಕ್ಷೆ ಹಾಗೂ ರೂ. 25,000 ದಂಡ

October 7, 2026
Congress has a history of conducting sting operations and engaging in blackmail: B.Y. Vijayendra

ಸ್ಟಿಂಗ್ ಆಪರೇಷನ್ ನಡೆಸಿ ಬ್ಲ್ಯಾಕ್‌ಮೇಲ್ ಮಾಡುವ ಚರಿತ್ರೆ ಕಾಂಗ್ರೆಸ್‌ನದ್ದು: ಬಿ.ವೈ. ವಿಜಯೇಂದ್ರ ಆರೋಪ | B.Y. Vijayendra

October 7, 2026
Next Post
ಸಂವಿಧಾನದ ಕುರಿತು AICC ವಕ್ತಾರೆ ಲಾವಣ್ಯ ಬಲ್ಲಾಳ್‌ ಮಾತು

ಸಂವಿಧಾನದ ಕುರಿತು AICC ವಕ್ತಾರೆ ಲಾವಣ್ಯ ಬಲ್ಲಾಳ್‌ ಮಾತು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada