Articles by

Shreekanth k

ಆಕ್ಸಿಜನ್ ಕೊರತೆಯ ಗಂಭೀರತೆ ಬಗ್ಗೆ ಒತ್ತು: ಮುಖ್ಯಮಂತ್ರಿಗೆ ಮತ್ತೊಂದು ಪತ್ರ ಬರೆದ ಹೆಚ್‌.ಕೆ ಪಾಟೀಲ

ಈಗ ರಾಜ್ಯದಲ್ಲಿ ಹಲವು ಕಡೆ ಆಕ್ಸಿಜನ್ ಕೊರತೆ ಕಾಡುತ್ತಿದೆ. ಜೀವಗಳು ಒದ್ದಾಡುತ್ತಿವೆ. ಇದರ ಗಂಭೀರತೆಯ ಬಗ್ಗೆ ಹಾಗೂ ಇನ್ನು ತಡಮಾಡಿದರೆ ಹೆಚ್ಚು ಹೆಚ್ಚು...

ವಿದ್ಯಾವಂತ ನಿರುದ್ಯೋಗಿ ಪದವೀಧರರ ಬದುಕಿಗೆ ಆಸರೆ -ನರೇಗಾ

ಕರೊನಾ ಮಹಾಮಾರಿ ಮಹಾನಗರಗಳಲ್ಲಿ ಹೆಚ್ಚುತ್ತಿರುವುದರಿಂದ ಮತ್ತು ಸೋಂಕು ತಡೆಗಾಗಿ ಸರ್ಕಾರ ಕಪ್ರ್ಯೂ ಜಾರಿಗೊಳಿಸಿದ್ದರಿಂದ ತಮ್ಮ ಹಳ್ಳಿಗಳತ್ತ ವಲಸೆ ಬರುತ್ತಿರುವ ಯುವಕರಿಗೆ ನರೇಗಾ ಕೆಲಸ...

ಆಕ್ಸಿಜನ್ ಸಿಗದೇ ಸೋಂಕಿತರು ಸಾಯುತ್ತಿರುವುದಕ್ಕೆ ಗದಗ್ ಶಾಸಕ ಹೆಚ್. ಕೆ. ಪಾಟೀಲ್ ಸರ್ಕಾರ ವಿರುದ್ಧ ಗರಂ

ಕೋವಿಡಾತಂಕ, ಸಾವು, ಜನರಲ್ಲಿ ಭಯ ಹೀಗೆ ಈ ವೈರಸ್ ಅಬ್ಬರ ಜೋರಾಗಿರುವ ಸಂದರ್ಭದಲ್ಲಿ ಗದಗ್ ಶಾಸಕರು ಸರ್ಕಾರಕ್ಕೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಆಕ್ಸಿಜನ್‌ಕೊರತೆಯಿಂದ ಜನರು ಮೃತಪಡುತ್ತಿರುವ ಪ್ರಕರಣ ಹಿನ್ನೆಲೆಯಲ್ಲಿಕಾಂಗ್ರೆಸ್ ಶಾಸಕ ಹೆಚ್ ಕೆ ಪಾಟೀಲ್ ಗದಗದಲ್ಲಿ ಸರ್ಕಾರವನ್ನು  ತರಾಟೆಗೆ ತಗೆದುಕೊಂಡಿದ್ದಾರೆ. ಚಾಮರಾಜನಗರ, ಕಲರ್ಬುಗಿ ಹಾಗೂ ಬೆಳಗಾವಿಯಲ್ಲಿ ಆಕ್ಸಿಜನ್‌ ಕೊರತೆಯಿಂದ ಮತ್ತೆ ಜನರು ಸಾಯುತ್ತಿದ್ದಾರೆ. ಇದು ಅತ್ಯಂತ ದುರ್ದೈವದ ಸಂಗತಿಯಾಗಿದೆ. ಸರ್ಕಾರಕ್ಕೆ  ಎಷ್ಟೆಲ್ಲ ಎಚ್ಚರಿಕೆ ಕೊಟ್ಟರೂ ನಿರ್ಲಕ್ಷ್ಯ ತೋರುತ್ತಿದೆ. ಕೆಲಸ ಮಾಡುವ ವಿಚಾರದಲ್ಲಿ  ಅಯೋಗ್ಯತೆ ತೋರಿಸುತ್ತಿದೆ. ಸರ್ಕಾರದ ಬೇಜವಾಬ್ದಾರಿಯಿಂದ ಜನ್ರು ಮೃತ ಪಡುತ್ತಿದ್ದಾರೆ. ಇನ್ನು ಚುನಾವಣಾ ರಾಜಕರಣ ಮಾಡಲು ಕಾಲ ಕಳೇದ್ರೇ ಹೊರತು ಜನ್ರ ಬಗ್ಗೆ ಕಾಳಜಿ ತೊರಲ್ಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಗ್ಗೆ ಎಷ್ಟಂತ ಟೀಕೆ ಮಾಡಬೇಕು. ಜನ್ರು ಸಾಯಿತ್ತಿರೋದು ಕಣ್ಣಿಗೆ ಕಾಣುತ್ತಿಲ್ವಾ ನಿಮಗೆ..! ಎಂದು...

ಬಾಲಕನ ಮಾಸ್ಕ್ ಜಾಗೃತಿ: ಮಾಸ್ಕ್ ಮಾರಿ ತಾಯಿಗೆ ಆರ್ಥಿಕ ನೆರವು

ಮಾರುಕಟ್ಟೆಯಲ್ಲಿ ಜನರು ಮುಂಜಾನೆ ತರಕಾರಿ ಹಾಗೂ ದಿನಸಿ ತೆಗೆದುಕೊಳ್ಳಲು ಬಂದವರಿಗೆ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಎಚ್ಚರಿಸುತ್ತ https://pratidhvani.com/kannadiga-muttanna-traveled-80-km-per-day-and-is-raising-awareness-of-corona/ ಮಾಸ್ಕ್ ತುಗೊಳಿ ಸಾರ್…ಹೇ ಒಂದಾದ್ರೂ ಮಾಸ್ಕ್ ತಗೊಳ್ರಿ...ಕರೋನಾ ಐತಿ....ಎನ್ನುತ್ತ ಕಾಣಸಿಗುತ್ತಾನೆ.  ಹಲವರ ಮನಕುಲುವಂತೆ ಮಾಡ್ತಿರೋ ಈ ಪುಟಾಣಿ ಬಾಲಕನ ಹೆಸರು ಮೊಹ್ಮದ್ ರಿಯಾಜ್ ಅಂತ..ಈತನ ವಯಸ್ಸೆನೋ ಚಿಕ್ಕದು....ಆದ್ರೆ‌ ಈತ ಮಾಡ್ತಿರೋ ಕೆಲಸ ಮಾತ್ರ ದೊಡ್ಡವರನ್ನೂ ಒಂದು ಕ್ಷಣ ದಂಗು ಬಡಿದು ನಿಲ್ಲಿಸುವಂತೆ ಮಾಡುತ್ತೆ. ಹೌದು..ಗದಗ ನಗರದ ಪುಟಾಣಿ ಬಾಲಕ ಮೊಹ್ಮದ್ ಸದ್ಯ ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದಾನೆ. ಚಿಕ್ಕವನಿದ್ದಾಗಲೇ ತಂದೆ ಕಾಣದ ಈತ ತನ್ನ ತಾಯಿ ಆಶ್ರಯದಲ್ಲಿ ಬೆಳೆಯುತ್ತಿದ್ದಾನೆ.ತಾಯಿ ಮನೆಯಲ್ಲಿ ಟೇಲರಿಂಗ್ ಕೆಲಸದ ಜೊತೆಗೆ ಇನ್ನಿತರ ಕೆಲಸ ಮಾಡಿ ತಮ್ಮ ಜೀವನದ ಬದುಕಿನ ಬಂಡಿ ಸಾಗಿಸ್ತಿದಾಳೆ.  ಇದನ್ನ ಬಹಳ ಹತ್ತಿರದಿಂದ ಕಂಡಿರೋ ಮೊಹ್ಮದ್ ರಿಯಾಜ್ ತಾನೂ ಸಹ ಏನಾದರೂ ಮಾಡಿ ಅಮ್ಮನಿಗೆ ಆಸರೆ ಆಗಬೇಕು ಅನ್ನೋದು ಆತನ ಬಯಕೆ. ಅದಕ್ಕಾಗಿ ಆತ ಕರೋನಾ ಲಾಕ್ಡೌನ್ ಪ್ರಾರಂಭ ಯಾವಾಗ ಆಯಿತೋ ಅಂದಿನಿಂದ ಮಾಸ್ಕ್ ಮಾರಾಟ ಮಾಡಿ ತನ್ನ ತಾಯಿಗೆ ಆರ್ಥಿಕವಾಗಿ ನೆರವು ನೀಡ್ತಿದ್ದಾನೆ. ಶಾಲಾ ಓದಿನಲ್ಲೂ ಸೈ ಅನಿಸಿಕೊಂಡಿರೋ ಮೊಹ್ಮದ್ ತನ್ನ ಪುಟ್ಟ ದುಡಿಮೆಯಲ್ಲೂ ಸೈ ಅನಿಸೋ ಮೂಲಕ ಎಲ್ಲರ ಮನಗೆದ್ದಿದ್ದಾನೆ. ನನ್ನ ಅಮ್ಮ ಬೇಡ ಅಂದ್ರೂ ನಾನು ಮಾಸ್ಕ್ ಮಾರುತ್ತೇನೆ. ಅಮ್ಮ ಒಬ್ರೇ ಕೆಲಸ ಮಾಡ್ತಾರೆ.ಮನೆಲಿ ಇರೋಕು ಬೇಜಾರು..ಹೀಗಾಗಿ ಮಾಸ್ಕ್ ಮಾರಾಟ ಮಾಡಿ ಬಂದ ದುಡ್ಡನ್ನು ಅಮ್ಮನ ಕೈಗೆ ಕೊಡ್ತೆನೆ. ಆಮೇಲೆ ಗೆಳೆಯರ ಜೊತೆ ಆಟಕ್ಕೂ ಹೋಗ್ತೆನೆ ಅನ್ನೋದು ಈ ಪುಟಾಣಿ ಪೋರನ ಮಾತು. https://pratidhvani.com/couple-forward-to-serve-those-in-covid-suffering/ ಮೊಹ್ಮದ್ ಗದಗ ನಗರದ ಪ್ರಮುಖ ರಸ್ತೆಗಳಲ್ಲಿ ಪುಟ್ಟ ಸೈಕಲ್ ನೊಂದಿಗೆ ಸಂಚರಿಸ್ತಾನೆ ಬೆನ್ನಿಗೆ ಒಂದು ಬ್ಯಾಗ್ ಕಟ್ಟಿಕೊಂಡು ಮಾಸ್ಕ ಟ್ರೇ ಹಿಡಕೊಂಡು ಮಾಸ್ಕ್ ಹಾಕಿದವರನ್ನು ಹಾಗೂ ಹಾಕದೇ ಇದ್ದವರನ್ನೂ ಮಾತನಾಡಿಸಿ ಒಂದೇ ಒಂದು ಮಾಸ್ಕ್ ತಗೊಳ್ರಿ ಅಂತ ರಿಕ್ವೆಸ್ಟ್ ಮಾಡಿಕೊಳ್ತಾನೆ. https://pratidhvani.com/kannadiga-muttanna-traveled-80-km-per-day-and-is-raising-awareness-of-corona/ ಈತನನ್ನು ನೋಡಿದವರು ಯಾರೂ ಸಹ ಮಾಸ್ಕ್ ಖರೀದಿ ಮಾಡದೇ ಹಾಗೇ ಹೋಗೊಲ್ಲ‌ಇಂದಿನ ಲಾಕ್ಡೌನ್ ಶಾಲಾ ರಜೆಗಳನ್ನ ಈ ರೀತಿ ಯೂಸ್ ಮಾಡಿಕೊಂಡಿರೋ ಬಾಲಕ ಕಳೆದ ವರ್ಷ ಲಾಕ್ಡೌನ್ ಸಮಯದ ನಂತರವೂ ಮಾಸ್ಕ್ ಮಾರಾಟ ಮಾಡಿ ಕರೋನಾ ನೆಗಲೆಟ್ ಮಾಡಬೇಡಿ ಅನ್ನೋ ಸಂದೇಶ ಸಾರಿದ್ದ. ಇನ್ನು ಕರೋನಾ 2ನೇ ಅಲೆಯು ಕರ್ನಾಟಕದಲ್ಲಿ ಅಬ್ಬರಿಸಿ ಎಲ್ಲರನ್ನೂ ಸಾವಿನ ಕೂಪಕ್ಕೆ ತಳ್ಳುತ್ತಿದೆ. ಇಂಥಹ ಸಂಧಿಘ್ನ ಪರಿಸ್ಥಿತಿಯಲ್ಲೂ ಜನ ಮಾತ್ರ ಮುನ್ನೆಚ್ಚೆರಿಕೆ ಕ್ರಮವಾಗಿ ಮಾಸ್ಕ ಹಾಕ್ತಿಲ್ಲ,ಅದೆಷ್ಟೇ ಹೇಳಿದರೂ ಕಾಟಾಚಾರಕ್ಕೆ ಎಂಬಂತೆ ಮಾಸ್ಕ ಧರಿಸ್ತಿದ್ದಾರೆ.ಅಂತದ್ರಲ್ಲಿ ಈ ಬಾಲಕ ಎಲ್ಲರಿಗೂ ಮಾಸ್ಕ್ ಕೊಟ್ಟು ತಾನಷ್ಟೆ ಜೀವನೋಪಾಯ ಕಂಡುಕೊಳ್ಳದೇ ಇತರರಿಗೂ ಜೀವನದ ಪಾಠ ಹೇಳ್ತಿರೋದಕ್ಕೆ  ಸ್ಥಳಿಯರು ಮೆಚ್ಚುಗೆ ವ್ಯಕ್ಯಪಡಿಸಿ ತಮ್ಮ ಕೈಲಾದ ಸಹಾಯ ಮಾಡ್ತಿದಾರೆ ಜೊತೆಗೆ ಈ ಬಾಲಕನಿಂದ ಮಾಸ್ಕ್ ಖರಿದಿಸಿ ತಾವೂ ಸಹ ಮಾಸ್ಕ್ ಧರಿಸ್ತಿದ್ದಾರೆ. https://pratidhvani.com/in-gadag-the-60-year-olds-are-enthusiastically-working-on-the-mgnrega-project/ ಒಟ್ಟಾರೆ ಕೊರೊನಾ ಮಾಹಾಮಾರಿ ಮನುಕುಲವನ್ನೇ ಬುಡಮೇಲು ಮಾಡ್ತಿದೆ. ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದವರ ಪಾಡಂತೂ ಹೇಳತೀರದಾಗಿದೆ. ಆದರೆ ಈ ಪುಟಾಣಿ ಬಾಲಕ‌ನ ದುಡಿಮೆ‌ ಹಾಗೂ ಜಾಗೃತಿ ನೋಡಿದಾಗ ಒಂದೆಡೆ ಕಣ್ಣೀರು ಮತ್ತೊಂದೆಡೆ ಆತ್ಮಸ್ಥೈರ್ಯ ಹುಟ್ಟುತ್ತೆ.ಕುಟುಂಬಕ್ಕೆ ಆಸರೆಯಾದ ಬಾಲಕನನ್ನು ನೋಡಿ ಸಂತೋಷ ಪಡಬೇಕೋ ಅಥವಾ ಕರೋನಾ ಅಟ್ಟಹಾಸ ಇಷ್ಟು ಚಿಕ್ಕ ಪುಟಾಣಿಯನ್ನೂ ಸಹ ದುಡಿಮೆಗೆ ಹಚ್ಚಿತಲ್ಲಾ ಎಂದು ದುಃಖಿಸಬೇಕೋ ಆ ದೇವರೆ ಹೇಳಬೇಕು....

ಕೋವಿಡ್ ಜಾಗೃತಿ ಮೂಡಿಸುತ್ತಿರುವ ಕನ್ನಡಿಗ ಮುತ್ತಣ್ಣ: ದಿನಕ್ಕೆ 80 ಕಿಮೀ ಪಯಣ

ಕರೋನಾ ವೈರಸ್ ಈಗ ಎಲ್ಲೆಡೆ ಕೇಕೆ ಹಾಕುತ್ತಿದೆ. ದಿನೇ ದಿನೇ ಕೇಸುಗಳು ಹೆಚ್ಚುತ್ತಲಿದ್ದರೂ ಜನರು ಮಾತ್ರ ಮಾಸ್ಕ್ ಧರಿಸುತ್ತಿಲ್ಲ, ಕೋವಿಡನ ಮುಖ್ಯ ರೂಲ್ಸ್...

ಸಾಂಪ್ರದಾಯಿಕ ಕೃಷಿ ಹಾಗೂ ಅದರ ಪದ್ಧತಿಗಳ ಬಗ್ಗೆ ಆನ್ ಲೈನ್ ಕ್ಯಾಂಪೇನ್ ಮಾಡುತ್ತಿರುವ ಬಸವರಾಜ: ಈಗ ಅವರು ನೀಡುವ ಮಾಹಿತಿ ಎಲ್ಲೆಡೆ ವೈರಲ್

ಇಂದು ನಮ್ಮ ಮಕ್ಕಳು ಮೊಬೈಲ್ ಯುಗದಲ್ಲಿ ಬದುಕುತ್ತಿದ್ದಾರೆ. ಕೃಷಿ, ರೈತರು ಎಂದರೆ ಅವರಿಗೆ ಹೆಚ್ಚೇನೂ ಗೊತ್ತಿಲ್ಲ. ಹಿಂದಿನ ಕಾಲದಲ್ಲಿ ಕಣ ಮಾಡುವುದು ಅದರ...

ಕೋವಿಡ್ ಸಂಕಟದಲ್ಲಿರುವವರಿಗೆ ಸೇವೆ ಸಲ್ಲಿಸಲು ಮುಂದಾದ ದಂಪತಿಗಳು

ಕಳೆದ ಒಂದು ವರ್ಷದಿಂದ  ಕೋವಿಡ್ ನಿಂದ ತತ್ತರಿಸಿ ಆಹಾರ, ಆರೋಗ್ಯ ಮತ್ತು ಆಶ್ರಯ ವಂಚಿತ ರಾಗಿ ಹಲವರು ಸಮಸ್ಯೆಗೀಡಾಗಿದ್ದಾರೆ. ಅಂಥವರಿಗೆ ಉಚಿತ ಸೇವೆ...

ಮಣ್ಣಿನ ಫಲವತ್ತತೆ ಹೆಚ್ಚಿಸುವ ದೇಸಿ ಗೋವುಗಳು; ನಿವೃತ್ತ ಸೇನಾಧಿಕಾರಿ ನೂತನ ಪ್ರಯತ್ನ

ಸುಗ್ಗಿ ಮುಗಿಸಿ ಬೇಸಿಗೆಯಲ್ಲಿ ಖಾಲಿಯಾಗಿರುವ ಹೊಲದಲ್ಲಿ ದೇಸಿ ಗೋವುಗಳನ್ನು ನಿಲ್ಲಿಸಿ  ಮಣ್ಣಿನ ಫಲವತ್ತತೆ ಹೆಚ್ಚಿಸಲು ರೈತ ಸಮುದಾಯ ಮುಂದಾಗಿದೆ. ಹೋಬಳಿಯ ಹೊಲಗಳಲ್ಲಿ ಕೊಪ್ಪಳ...

Want to stay up to date with the latest news?

We would love to hear from you! Please fill in your details and we will stay in touch. It's that simple!