Shivakumar A

Shivakumar A

ವಿಶ್ವದಲ್ಲಿ ಕರೋನಾ ಸೋಂಕಿನ ಹರಡುವಿಕೆ ಕ್ಷೀಣಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ- WHO ಮುಖ್ಯ ವಿಜ್ಞಾನಿ

ವಿಶ್ವದಲ್ಲಿ ಕರೋನಾ ಸೋಂಕಿನ ಹರಡುವಿಕೆ ಕ್ಷೀಣಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ- WHO ಮುಖ್ಯ ವಿಜ್ಞಾನಿ

ಈಗಾಗಲೇ ವಿಶ್ವದಾದ್ಯಂತ ಲಕ್ಷಾಂತರ ಜನರ ಪ್ರಾಣಕ್ಕೆ ಕುತ್ತು ತಂದಿರುವ ಕರೋನಾ ಸೋಂಕು, ಇನ್ನೂ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಸೋಂಕಿನ ರೂಪಾಂತರ ಮಾದರಿಗಳು, ವಿಜ್ಞಾನಿಗಳನ್ನು ಮತ್ತಷ್ಟು ಚಿಂತೆಗೀಡು...

ದೇಶದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ, ನಂತರ ನಾಗರಿಕ ಸಂಹಿತೆ ಕುರಿತು ಯೋಚಿಸಿ – ಜಸ್ಟೀಸ್ ನಾಗಮೋಹನ ದಾಸ್

ದೇಶದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ, ನಂತರ ನಾಗರಿಕ ಸಂಹಿತೆ ಕುರಿತು ಯೋಚಿಸಿ – ಜಸ್ಟೀಸ್ ನಾಗಮೋಹನ ದಾಸ್

ದೇಶದಲ್ಲಿ ಸಮಾನ ನಾಗರಿಕ ಸಂಹಿತೆ(Uniform Civil Code - UCC)ಯನ್ನು ಜಾರಿಗೆ ತರಬೇಕೆಂದು ದೆಹಲಿ ಹೈಕೋರ್ಟ್ ಪ್ರತಿಪಾದಿಸಿದೆ. ಇದಕ್ಕಾಗಿ ಅಗತ್ಯಕ್ರಮಗಳನ್ನು ಕೈಗೊಳ್ಳುವಂತೆಯೂ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿದೆ. “ಸಂವಿಧಾನದ...

ಕೇಂದ್ರ ಮಂತ್ರಿ ಮಂಡಲ ವಿಸ್ತರಣೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪುಟ ವಿಸ್ತರಣೆಯ ಸಂಪೂರ್ಣ ವಿವರ

ಕೇಂದ್ರ ಮಂತ್ರಿ ಮಂಡಲ ವಿಸ್ತರಣೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪುಟ ವಿಸ್ತರಣೆಯ ಸಂಪೂರ್ಣ ವಿವರ

ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಕೊನೆಗೂ ಮುಕ್ತಾಯವಾಗಿದೆ. 43 ಜನ ಸಂಸದರು ಬುಧವಾರ ಪ್ರಮಾಣವಚನ ಸ್ವೀಕರಿಸುವ ಮೂಲಕ ಪ್ರಧಾನಿ ಮೋದಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಕರ್ನಾಟಕದ ನಾಲ್ವರು ಸಚಿವರಾಗಿ ಆಯ್ಕೆಯಾಗಿದ್ದಾರೆ.  ನೂತನ ಸಚಿವರು ಸೇರಿದಂತೆ ಈ ಹಿಂದೆ ಇದ್ದಂತಹ ಸಚಿವರ ಖಾತೆ ಬದಲಾವಣೆಯ ಪಟ್ಟಿನ್ನು ಬುಧವಾರ ರಾತ್ರಿಯೇ ಬಿಡುಗಡೆಗೊಳಿಸಲಾಗಿದೆ. ಈ ಹಿಂದೆ ಕರ್ನಾಟಕಕ್ಕೆ ನೀಡಿದ್ದ ಒಂದು ಸಂಪುಟ ದರ್ಜೆಯ ಸಚಿವ ಸ್ಥಾನದ ಕೋಟಾವನ್ನು ಬಿಟ್ಟು, ನಾಲ್ಕು ರಾಜ್ಯ ಸಚಿವ ಸ್ಥಾನಗಳು ಲಭಿಸಿವೆ.  ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ರಾಜ್ಯ ಸಚಿವರ ಖಾತೆ, ಬೀದರ್ ಸಂಸದ ಭಗವಂತ ಖೂಬಾ ಅವರಿಗೆ ಹೊಸ ಮತ್ತು ನವೀಕರಿಸಬಹುದಾದದ ಇಂಧನ ಸಚಿವಾಲಯ ಹಾಗೂ ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯದ ರಾಜ್ಯ ಖಾತೆ, ಚಿತ್ರದುರ್ಗದ ಸಂಸದ ನಾರಾಯಣ ಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಖಾತೆ, ಕರ್ನಾಟಕ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ಕೌಶಲ್ಯ ಸಚಿವಾಲಯ, ಅಭಿವೃದ್ದಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಖಾತೆಯನ್ನು ನೀಡಲಾಗಿದೆ.  ಹೊಸದಾಗಿ ಸೇರ್ಪಡೆಗೊಂಡ ಸಹಕಾರ ಖಾತೆಯನ್ನು ಹೆಚ್ಚುವರಿಯಾಗಿ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ವಹಿಸಲಾಗಿದೆ. 15 ಸಚಿವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ನಾರಾಯಣ ತಾತು ರಾಣೆ, ಸರ್ಬಾನಂದ ನೋನೋವಾಲ್, ವೀರೇಂದ್ರ ಕುಮಾರ್, ಜ್ಯೋತಿರಾದಿತ್ಯ ಸಿಂಧಿಯಾ, ರಾಮಚಂದ್ರ ಪ್ರಸಾದ್ ಸಿಂಗ್, ಅಶ್ವಿನಿ ವೈಷ್ಣವ್, ಪಶುಪತಿ ಕುಮಾರ್ ಪಾರಸ್, ಕಿರೆನ್ ರಿಜಿಜು, ರಾಜ್ ಕುಮಾರ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಮನ್ಸುಖ್ ಮಾಂಡವಿಯಾ, ಭೂಪೆಂದರ್ ಯಾದವ್, ಪರ್ಷೋತ್ತಮ್ ರುಪಾಲ, ಕಿಶನ್ ರೆಡ್ಡಿ ಹಾಗೂ ಅನುರಾಗ್ ಸಿಣಗ್ ಠಾಕುರ್ ಅವರಿಗೆ ಸಂಪುಟ ದರ್ಜೆಯ ಖಾತೆಗಳು ಲಭಿಸಿವೆ.  11 ಜನ ಮಹಿಳೆಯರಿಗೆ ಸಚಿವ ಸ್ಥಾನ:  ಈ ಹಿಂದೆ ಸಚಿವೆಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ನಿರ್ಮಲಾ ಸೀತರಾಮನ್, ಸ್ಮೃತಿ ಇರಾನಿ, ರೇಣುಕಾ ಸೀಂಗ್ ಮತ್ತು ಸಾಧ್ವಿ ನಿರಂಜನ್ ಜ್ಯೋತಿ ಅವರ ಸಚಿವ ಸ್ಥಾನ ಮುಂದುವರೆಸಲಾಗಿದೆ.  ಇವರೊಂದಿಗೆ ಅಪ್ನಾ ದಳದ ಅನುಪ್ರಿಯಾ ಪಟೇಲ್, ಶೋಭಾ ಕರಂದ್ಲಾಜೆ, ದರ್ಶನಾ ಜಾರ್ದೋಶ್, ಮೀನಾಕ್ಷಿ ಲೇಖಿ, ಪ್ರತಿಮಾ ಭೌಮಿಕ್ ಮತ್ತು ಡಾ. ಭಾರತಿ ಪವಾರ್ ಅವರು ಸಚಿವ ಸ್ಥಾನವನ್ನು ಅಲಂಕರಿಸಿದ ಮಹಿಳಾ ಸಂಸದರಾಗಿದ್ದಾರೆ.  ಪ್ರಸ್ತುತ ಸಂಸತ್ತಿನಲ್ಲಿ 78 ಮಹಿಳಾ ಸಂಸದರಿದ್ದು, ಅವರಲ್ಲಿ 41 ಸಂಸದರು ಬಿಜೆಪಿಯಿಂದ ಆಯ್ಕೆಯಾದವರಿದ್ದಾರೆ.  ಸಂಪುಟ ದರ್ಜೆ ಸಚಿವರ ಪಟ್ಟಿ:  ರಾಜನಾಥ್ ಸಿಂಗ್- ರಕ್ಷಣಾ ಖಾತೆ, ಅಮಿತ್ ಶಾ- ಗೃಹ ಮತ್ತು ಸಹಕಾರ ಖಾತೆ, ನಿತಿನ್ ಗಡ್ಕರಿ - ರಸ್ತೆ ಮತ್ತು ಹೆದ್ದಾರಿ, ನಿರ್ಮಲಾ ಸೀತಾರಾಮನ್- ವಿತ್ತ ಮತ್ತು ಕಾರ್ಪೊರೇಟ್ ವ್ಯವಹಾರ, ನರೇಂದ್ರ ಸಿಂಗ್ ತೋಮರ್- ಕೃಷಿ ಮತ್ತು ರೈತ ವ್ಯವಹಾರ, ಡಾ. ಎಸ್ ಜೈಶಂಕರ್ - ವಿದೇಶಾಂಗ ಇಲಾಖೆ, ಅರ್ಜುನ್ ಮುಂಡಾ - ಬುಡಕಟ್ಟು ವ್ಯವಹಾಗಳ ಇಲಾಖೆ, ಸ್ಮೃತಿ ಇರಾನಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪಿಯೂಷ್ ಗೋಯಲ್ - ವಾಣಿಜ್ಯ ಮತ್ತು ಉದ್ದಿಮೆ,ಗ್ರಾಹಕ ವ್ಯವಹಾರಗಳು ಹಾಗೂ ನಾಗರಿಕ ಸರಬರಾಜು ಮತ್ತು ಜವಳಿ ಖಾತೆ, ಧರ್ಮೇಂದ್ರ ಪ್ರಧಾನ್ - ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ.  ಇನ್ನು, ಪ್ರಹ್ಲಾದ್ ಜೋಷಿ- ಸಂಸದೀಯ ವ್ಯವಹಾರಗಳ ಖಾತೆ, ಗಣಿ ಮತ್ತು ಕಲ್ಲಿದ್ದಲು ಖಾತೆ, ನಾರಾಯಣ ರಾಣೆ- ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಖಾತೆ, ಸರ್ಬಾನಂದ ಸೋನೋವಾಲ್ - ಬಂದರು ಮತ್ತು ಆಯುಚ್ ಇಲಾಖೆ, ಮುಖ್ತಾರ್ ಅಬ್ಬಾಸ್ ನಖ್ವಿ - ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ, ಡಾ. ವಿರೇಂದ್ರ ಕುಮಾರ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಗಿರಿರಾಜ್ ಸಿಂಗ್- ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜ್ಯೋತಿರಾದಿತ್ಯ ಸಿಂಧಿಯಾ - ನಾಗರಿಕ ವಿಮಾನಯಾನ ಇಲಾಖೆ, ರಾಮಚಂದ್ರ ಪ್ರಸಾದ್ ಸಂಗ್- ಉಕ್ಕು, ಅಶ್ವಿನಿ ವೈಷ್ಣವ್ - ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರನ್ನಾಗಿ ನೇಮಿಸಲಾಗಿದೆ.  ಉಳಿದಂತೆ, ಪಶುಪತಿ ಪಾರಸ್- ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆ, ಗಜೇಂದ್ರ ಸಿಂಗ್ ಶೇಖಾವತ್- ಜಲ ಶಕ್ತಿ, ಕಿರೆನ್ ರಿಜಿಜು- ಕಾನೂನು ಮತ್ತು ನ್ಯಾಯ, ರಾಜ್ ಕುಮಾರ್ ಸಿಂಗ್- ಇಂಧನ ಹಾಗೂ ಹೊಸ ಮತ್ತು ನವೀಕರಿಸಬಹುದಾದದ ಇಂಧನ ಇಲಾಖೆ, ಹರ್ದೀಪ್ ಸಿಂಗ್ ಪುರಿ- ಪೆಟ್ರೋಲಿಯಂ, ವಸತಿ ಹಾಗೂ ನಗರ ವ್ಯವಹಾರಗಳ ಖಾತೆ, ಮಾನ್ಸುಖ್ ಮಾಂಡವಿಯ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕಗಳು ಮತ್ತು ರಸಗೊಬ್ಬರ ಇಲಾಖೆ, ಭೂಪೆಂದರ್ ಯಾದವ್- ಪರಿಸರ, ಅರಣ್ಯ ಮತ್ತು ಕಾರ್ಮಿಕ ಇಲಾಖೆ, ಮಹೇಂದ್ರನಾಥ್ ಪಾಂಡೆ- ಬೃಹತ್ ಕೈಗಾರಿಕೆ, ಪರ್ಷೋತ್ತಮ್ ರುಪಾಲ- ಮೀನುಗಾರಿಕೆ, ಹೈನುಗಾರಿಕೆ ಮತ್ತು ಡೈರಿ ಇಲಾಖೆ, ಕಿಶನ್ ರೆಡ್ಡಿ- ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ದಿ ಇಲಾಖೆ ಹಾಗೂ ಅನುರಾಗ್ ಸಿಂಗ್ ಠಾಕುರ್ ಅವರಿಗೆ ಮಾಹಿತಿ ತಂತ್ರಜ್ಞಾನ ಮತ್ತು ಪ್ರಸರಣ ಇಲಾಖೆ ಸೇರಿದಂತೆ ಹೆಚ್ಚುವರಿಯಾಗಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದೆ.  45 ಜನ ಸಂಸದರಿಗೆ ರಾಜ್ಯ ಸಚಿವ ಸ್ಥಾನವನ್ನು ನೀಡಲಾಗಿದೆ. ಈಗ ಪ್ರಧಾನಿ ಮೋದಿಯವರು ಸೇರಿದಂತೆ ಒಟ್ಟು 78 ಸಚಿವರು ಕೇಮದ್ರ ಮಂತ್ರಿಮಂಡಲದ ಭಾಗವಾಗಿದ್ದಾರೆ. 

ದೀದಿಗೆ ಸಿಎಂ ಸ್ಥಾನ ಉಳಿಸುವ ಧಾವಂತ: ಪಶ್ಚಿಮ ಬಂಗಾಳದಲ್ಲಿ ಮೇಲ್ಮನೆ ರಚನೆಗೆ ನಿರ್ಣಯ ಅಂಗೀಕಾರ

ದೀದಿಗೆ ಸಿಎಂ ಸ್ಥಾನ ಉಳಿಸುವ ಧಾವಂತ: ಪಶ್ಚಿಮ ಬಂಗಾಳದಲ್ಲಿ ಮೇಲ್ಮನೆ ರಚನೆಗೆ ನಿರ್ಣಯ ಅಂಗೀಕಾರ

ಉತ್ತರಾಖಂಡ ಮಾಜಿ ಮುಖ್ಯಮಂತ್ರಿಯಾಗಿದ್ದ ತೀರಥ್ ಸಿಂಗ್ ರಾವತ್ ಅವರ ರಾಜಿನಾಮೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸ್ಥಾನಕ್ಕೂ ಕುತ್ತು ತಂದಿತ್ತು. ಒಂದರ್ಥದಲ್ಲಿ ನೋಡುವುದಾದರೆ, ಮಮತಾ ಬ್ಯಾನರ್ಜಿಯವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲೆಂದೇ ಬಿಜೆಪಿ ಹೆಣೆದ ವ್ಯೂಹ ಇದಾಗಿತ್ತು. ಕಳೆದ ಚುನಾವಣೆಯಲ್ಲಿ ಜಯ ಗಳಿಸಲು ವಿಫಲರಾಗಿದ್ದ ದೀದಿ, ಆರು ತಿಂಗಳ ಒಳಗಾಗಿ, ಶಾಸಕರಾಗಲೇಬೇಕಾದ ಅನಿವಾರ್ಯತೆ ಇದೆ. ಈಗ ಚುನಾವಣೆ ನಡೆಯದಿದ್ದರೂ, ದೀದಿಗೆ ಶಾಸಕ ಸ್ಥಾನ ಕೊಡಿಸಲು ಪಕ್ಷದ ಒಗ್ಗಟ್ಟಾಗಿದೆ.  1969ರ ವರೆಗೆ ಅಸ್ಥಿತ್ವದಲ್ಲಿದ್ದ ಪಶ್ಚಿಮ ಬಂಗಾಳ ವಿಧಾನ ಪರಿಷತ್ ಅನ್ನು ಅಂದಿನ ಎಡ ಪಕ್ಷಗಳ ನೇತೃತ್ವದ ಸರ್ಕಾರ ಬರಖಾಸ್ತುಗೊಳಿಸಿತ್ತು. ಈ ವಿಧಾನ ಪರಿಷತ್ತನ್ನು ಮತ್ತೆ ಅಸ್ಥಿತ್ವಕ್ಕೆ ತರುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಈ ಬಾರಿಯ ಚುನಾವಣೆಲ್ಲಿ ಭರವಸೆ ನೀಡಿತ್ತು. ಈಗ ಈ ಭರವಸೆ ದೀದಿ ಪಾಲಿಗೆ ವರದಾನವಾಗಿದೆ.  ಮಂಗಳವಾರದಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮೇಲ್ಮನೆ ರಚಿಸುವ ವಿಚಾರದಲ್ಲಿ ಸದಸ್ಯರ ಅಭಿಪ್ರಾಯ ಕೇಳಲಾಗಿತ್ತು.265 ಸದಸ್ಯರು ಈ ಚರ್ಚೆಯಲ್ಲಿ ಭಾಗಿಯಾಗಿದ್ದರು. ಟಿಎಂಸಿಗೆ ವಿಧಾನಸಭೆಯಲ್ಲಿಸ್ಪಷ್ಟ ಬಹುಮತವಿರುವುದರಿಂದ 196 ಸದಸ್ಯರು ಮೇಲ್ಮನೆ ಪರವಾಗಿ ಮತ ಚಲಾಯಿಸಿದರು. ಇದು ಉಪಚುನಾವಣೆ ನಡೆಯದಿದ್ದರೂ, ದೀದಿಗೆ ವಿಧಾನಪರಿಷತ್ ಶಾಸಕಿ ಸ್ಥಾನ ಪಡೆಯುವ ಅವಕಾಶವನ್ನು  ನೀಡಲಿದೆ. ಬಿಜೆಪಿಯು ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಸದ್ಯಕ್ಕೆ ಮೇಲ್ಮನೆ ರಚಿಸುವ ನಿರ್ಣಯ ಅಂಗೀಕಾರವಾಗಿದೆ. ಆದರೆ, ಇದಕ್ಕೆ ದೆಹಲಿಯಲ್ಲಿ ತೀವ್ರವಾದ ಪ್ರತಿರೋಧ ಎದುರಾಗುವ ಸಾಧ್ಯತೆಯಿದೆ.  ಒಂದು ರಾಜ್ಯದಲ್ಲಿ ಮೇಲ್ಮನೆ ರಚನೆಯಾಗಬೇಕಾದರೆ, ಕೇಂದ್ರ ಸಚಿವ ಸಂಪುಟದ ಅನುಮತಿ ಪಡೆಯಲೇಬೇಕು. ಮೇಲ್ಮನೆ ರಚಿಸುವ ಪ್ರಸ್ತಾವನೆಯು ಮೊದಲು ಕೇಂದ್ರ ಗೃಹ ಖಾತೆಗೆ ವರ್ಗಾವಣೆಯಾಗಲಿದೆ. ಆ ನಂತರ ಅದು ಸಚಿವ ಸಂಪುಟದ ಅನುಮೋದನೆಗೆ ವರ್ಗಾಯಿಸಲಾಗುವುದು. ಇಲ್ಲಿ ಅನುಮೋದನೆ ದೊರಕದಿದ್ದರೆ, ಪಶ್ಚಿಮ ಬಂಗಾಳದಲ್ಲಿ ಮೇಲ್ಮನೆ ರಚನೆಯಾಗುವುದಿಲ್ಲ.  ನಂದಿಗ್ರಾಮದಲ್ಲಿ ಸುವೆಂಧು ಅಧಿಕಾರಿ ವಿರುದ್ದ ಚುನಾವಣೆ ಸೋತಿರುವ ಮಮತಾ ಬ್ಯಾನರ್ಜಿಯ ಸಿಎಂ ಖುರ್ಚಿಯ ಕಾಲುಗಳು ಕೇಂದ್ರದ ನಿರ್ಧಾರದ ಮೇಲೆ ನಿಂತಿದೆ. ಒಂದು ವೇಳೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯದಿದ್ದರೆ, ದೀದಿಯ ಸಿಎಂ ಸ್ಥಾನಕ್ಕೆ ಕುತ್ತು ಬರಲಿದೆ. ಅಕ್ಟೋಬರ್ ತಿಂಗಳಲ್ಲಿ ಆರುತಿಂಗಳ ಅವಧಿ ಪುರ್ಣಗೊಳ್ಳಲಿದ್ದು, ಇದರ ಒಳಗಾಗಿ ಉಪಚುನಾವಣೆ ನಡೆಯಬೇಕಿದೆ.  ಕೋವಿಡ್ ಎರಡನೇಯ ಅಲೆಯ ಸಂದರ್ಭದಲ್ಲಿ ಪಂಚರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಿದ ಕಾರಣಕ್ಕೆ ತೀವ್ರವಾಗಿ ಟೀಕೆಗೆ ಒಳಗಾಗಿದ್ದ ಚುನಾವಣಾ ಆಯೋಗವು, ಸದ್ಯಕ್ಕೆ ಚುನಾವಣೆಗಳನ್ನು ಘೋಷಿಸುವ ಸಾಧ್ಯತೆ ಕಡಿಮೆಯಿದೆ.  ಉಪ ಚುನಾವಣೆಯ ಅವಶ್ಯಕತೆ ಕೇವಲ ಮಮತಾ ಬ್ಯಾನರ್ಜಿಗೆ ಅಷ್ಟೇ ಅಲ್ಲದೇ, ಹಣಕಾಸು ಸಚಿವರಾಗಿರುವ ಅಮಿತ್ ಮಿತ್ರಾ ಅವರಿಗೂ ಇದೆ. ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲೇ ಇಲ್ಲ. ಸದ್ಯಕ್ಕೆ ಏಳು ಸ್ಥಾನಗಳಿಗೆ ಚುನಾವಣೆ ನಡೆಯುವುದು ಬಾಕಿ ಇದ್ದು, ಎಲ್ಲರ ದೃಷ್ಟಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಮೇಲೆ ನೆಟ್ಟಿದೆ. 

ಎಲ್ಗರ್ ಪರಿಷತ್ ಪ್ರಕರಣ: ಉಳಿದ ಕಾರ್ಯಕರ್ತರ ಜಾಮೀನು ಅರ್ಜಿಗಳ ಸ್ಥಿತಿಗತಿಯೇನು?

ಎಲ್ಗರ್ ಪರಿಷತ್ ಪ್ರಕರಣ: ಉಳಿದ ಕಾರ್ಯಕರ್ತರ ಜಾಮೀನು ಅರ್ಜಿಗಳ ಸ್ಥಿತಿಗತಿಯೇನು?

ಎಲ್ಗರ್ ಪರಿಷತ್ ಪ್ರಕರಣದಲ್ಲಿ NIAಯಿಂದ ಬಂಧನಕ್ಕೆ ಒಳಗಾಗಿದ್ದ ಫಾ. ಸ್ಟ್ಯಾನ್ ಸ್ವಾಮಿ ಅವರು ಮೃತಪಟ್ಟಿದ್ದಾರೆ. ಇದೇ ಪ್ರಕರಣದಲ್ಲಿ ಹಲವು ಹಿರಿಯ ಹೋರಾಟಗಾರರನ್ನು NIA ಬಂಧಿಸಿದ್ದು, ಅವರು ಕೂಡಾ...

ಕರ್ನಾಟಕ ಅನ್ಲಾಕ್: ಸಂಭಾವ್ಯ ಮೂರನೇ ಅಲೆಯ ಕುರಿತು ಮುಂಜಾಗ್ರತೆಯಿರಲಿ

ಕರ್ನಾಟಕ ಅನ್ಲಾಕ್: ಸಂಭಾವ್ಯ ಮೂರನೇ ಅಲೆಯ ಕುರಿತು ಮುಂಜಾಗ್ರತೆಯಿರಲಿ

ಕರೋನಾ ಎರಡನೇ ಅಲೆಯ ಭಯ ಕಡಿಮೆಯಾಗಿದೆ. ದೇಶದಾದ್ಯಂತ ಅನ್ಲಾಕ್ ಪ್ರಕ್ರಿಯೆಗಳು ಆರಂಭವಾಗಿವೆ. ಆದರೆ, ಮೂರನೇ ಅಲೆ ಎಂಬ ಸಂಭಾವ್ಯ ಆಪತ್ತು ನಮ್ಮ ಕಣ್ಣ ಮುಂದೆಯೇ ಇದೆ.  ಇಂದಿನಿಂದ ಕರ್ನಾಟಕವೂ ಸಂಪೂರ್ಣವಾಗಿ ಓಪನ್ ಆಗಲಿದೆ. ಬೆಳಿಗ್ಗೆ 5ರಿಂದ ಸಂಜೆ 9ರ ವರೆಗೆ ಬಹುತೇಕ ಚಟುವಟಿಕೆಗಳು ಕರ್ನಾಟಕದಲ್ಲಿ ತೆರೆದುಕೊಳ್ಳಲಿವೆ. ಇಷ್ಟು ದಿನ ಮನೆಯಲ್ಲೇ ಇದ್ದಂತಹವರಿಗೆ ಮನೆಯಿಂದ ಹೊರ ಹೋಗುವ ಹರ್ಷ. ಆದರೆ, ಕರೋನಾ ಸೋಂಕಿನ ತೀವ್ರತೆ ಇನ್ನೂ ಮುಗಿದಿಲ್ಲ. ಅದರ ಹಬ್ಬುವಿಕೆ ಕಡಿಮೆಯಾಗಿರಬಹುದು. ಸೋಂಕಿನಿಂದ ದೇಶ ಸಂಪೂರ್ಣವಾಗಿ ಇನ್ನೂ ಹೊರಬಂದಿಲ್ಲ.  ಸೆಪ್ಟೆಂಬರ್ ನಿಂದ ನವೆಂಬರ್ ವರೆಗಿನ ಸಮಯದಲ್ಲಿ ಮೂರನೇ ಅಲೆಯು ದೇಶವನ್ನು ಅಪ್ಪಳಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಅಂತರ ಕಾಪಾಡುವಿಕೆ, ಮಾಸ್ಕ್ ಬಳಕೆ ಹಾಗು ಇತರ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿದ್ದಲ್ಲಿ, ಅಕ್ಟೋಬರ್ - ನವೆಂಬರ್ ವೇಳೆ ಮೂರನೇ ಅಲೆಯು ಉತ್ತುಂಗಕ್ಕೆ ಏರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.  ಕೇಂದ್ರ ಸರ್ಕಾರದ ಕೋವಿಡ್ ತಜ್ಞರ ತಂಡದ ಸದಸ್ಯರಾಗಿರುವ ವಿಜ್ಞಾನಿ ಮನೀಂದ್ರ ಅಗರ್ವಾಲ್ ಅವರ ಪ್ರಕಾರ ಕೋವಿಡ್ ನ ಹೊಸ ಮಾದರಿಯಾದ SARS-CoV-2 ಕಾಣಿಸಿಕೊಂಡಲ್ಲಿ ವೇಗದಿಂದ ಹರಡುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.  ಮೂರನೇ ಅಲೆಯು ಎರಡನೇ ಅಲೆಯಷ್ಟು ತೀವ್ರವಾಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ. ಪ್ರತಿ ದಿನದ ಪ್ರಕರಣಗಳಲ್ಲಿ ಎರಡನೇ ಅಲೆಯ ಅರ್ಧದಷ್ಟು ಪ್ರಕರಣಗಳು ಮಾತ್ರ ವರದಿಯಾಗಲಿದೆ. ಲಸಿಕಾಕರಣ ವೇಗದಿಂದ ನಡೆದಲ್ಲಿ ಸಂಭಾವ್ಯ ಮೂರನೇ ಅಲೆಯ ತೀವ್ರತೆ ಹಾಗೂ ಮುಂಬರುವ ಅಲೆಗಳನ್ನು ತಡೆಯಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.  ಪ್ರತಿದಿನ 50,000 ದಿಂದ 1,00,000 ಪ್ರಕರಣಗಳು ವರದಿಯಾಗಲಿವೆ ಎಂದು ಅವರು ಊಹಿಸಿದ್ದಾರೆ.  ಮೂರನೇ ಅಲೆಯ ತೀವ್ರತೆ ಹೆಚ್ಚಿನ ಮಟ್ಟಿಗೆ ಇರುವುದಿಲ್ಲ ಎಂದಯ ತಜ್ಞರು ಅಭಿಪ್ರಾಯಪಟ್ಟಿದ್ದರಾದರೂ, ಸೋಂಕು ಹರಡುವ ವೇಗ ಹೆಚ್ಚಾದಲ್ಲಿ, ಮತ್ತೆ ಲಾಕ್ಡೌನ್ ಮೊರೆ ಹೋಗುವ ಪರಿಸ್ಥಿತಿ ಬರಬಹುದು. ಕಳೆದ ಎರಡು ಅಲೆಗಳಲ್ಲಿ ಬೆಡ್, ಆಕ್ಸಿಜನ್ ಹಾಗೂ ವೆಂಟಿಲೇಟರ್ ಸಮಸ್ಯೆಯಿಂದ ಈಗಾಗಲೇ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.  ಈ ಬಾರಿ ಅನ್ಲಾಕ್ ಆಗುವ ಸಮಯದಲ್ಲಿ ವಿವೇಚನೆಯಿಂದ ವರ್ತಿಸಬೇಕಾಗಿದೆ. ಬೇಕಾಬಿಟ್ಟಿ ತಿರುಗಾಟ ಹಾಗೂ ಕರೋನಾ ಸೋಂಕಿನ ಕುರಿತ ಅಸಡ್ಡೆ ಮತ್ತೆ ಸಂಪೂರ್ಣ ರಾಜ್ಯವನ್ನು ಸಂಕಷ್ಟಕ್ಕೆ ನೂಕಲಿದೆ. ಸರ್ಕಾರವು ತನ್ನ ವೈಫಲ್ಯವನ್ನು ಪ್ರದರ್ಶಿಸುತ್ತಲೇ ಬಂದಿರುವುದರಿಂದ, ನಮ್ಮ ಜೀವದ ಕುರಿತು ನಾವೇ ಎಚ್ಚರಿಕೆ ವಹಿಸಿಕೊಳ್ಳಬೇಕಾಗಿದೆ. 

4 ತಿಂಗಳಲ್ಲಿ 3 ಸಿಎಂ: ಉತ್ತರಾಖಂಡದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಲು ಕಾರಣವೇನು?

4 ತಿಂಗಳಲ್ಲಿ 3 ಸಿಎಂ: ಉತ್ತರಾಖಂಡದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಲು ಕಾರಣವೇನು?

ಉತ್ತರಾಖಂಡ ರಾಜ್ಯವು ಕಳೆದ ನಾಲ್ಕು ತಿಂಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿದೆ. ಇತ್ತೀಚಿನ ಸಮಯದಲ್ಲಿ ಇಷ್ಟು ಅಸ್ಥಿರ ನಾಯಕತ್ವವನ್ನು ಯಾವ ರಾಜ್ಯವೂ ಕಂಡಿರಲಿಲ್ಲ. ಕರ್ನಾಟಕದಲ್ಲಿ ಇನ್ನೇನು ನಾಯಕತ್ವ ಬದಲಾವಣೆ...

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಗೊಂದಲ; ಡಿಕೆಶಿ vs ಸಿದ್ದು ಜಟಾಪಟಿಯ ಮುಂದುವರಿಕೆ?

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಗೊಂದಲ; ಡಿಕೆಶಿ vs ಸಿದ್ದು ಜಟಾಪಟಿಯ ಮುಂದುವರಿಕೆ?

ಕಳೆದ ವರ್ಷ ಕರ್ನಾಟಕ ಕಾಂಗ್ರೆಸ್ ಯುವ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಆ ಸಮಯದಿಂದ ಯುವ ಕಾಂಗ್ರೆಸ್ ನಲ್ಲಿ ಆರಂಭವಾದ ಗೊಂದಲ ಇನ್ನೂ...

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕಸರತ್ತು: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕಸರತ್ತು: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಕೇಂದ್ರ ಸರ್ಕಾರದ ಸಚಿವ ಸಂಪುಟದ ವಿಸ್ತರಣೆಗೆ ಕಾಲ ಕೂಡಿಬಂದಿದೆ. ಮುಂಬರುವ ವಿಧಾನಸಭೆ ಚುನಾವಣೆಗಳು ಹಾಗೂ 2024ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಈ ಬಾರಿಯ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ. 81 ಸಚಿವರನ್ನು ನೇಮಿಸಲು ಅವಕಾಶವಿದ್ದು, ಸದ್ಯಕ್ಕೆ ಕೇವಲ 53 ಸಚಿವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ, ಇನ್ನೂ 28 ಜನ ಸಂಸದರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆಯಿದೆ. ಈ ಬಾರಿ ಸಚಿವ ಸ್ಥಾನ ಪಡೆಯಲಿರುವ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ.  ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಅವಕಾಶ ಮಾಡಿಕೊಟ್ಟ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಈ ಬಾರಿ ಸಚಿವ ಸ್ಥಾನ ಖಚಿತವೆನ್ನಲಾಗುತ್ತಿದೆ. ಅಸ್ಸಾಂನಲ್ಲಿ ಹಿಮಂತ್ ಬಿಸ್ವಾ ಅವರಿಗೆ ಸಿಎಂ ಆಗಲು ಅನುವು ಮಾಡಿಕೊಟ್ಟ ಸರ್ಬಾನಂದ ಸೋನೋವಾಲ್ ಅವರು ಕೂಡಾ ಸಚಿವ ಸ್ಥಾನದ ರೇಸ್ ನಲ್ಲಿದ್ದಾರೆ.  ಜಫರ್ ಇಸ್ಲಾಂ ಬಿಹಾರದಿಂದ ಲೋಕಸಭೆಗೆ ಪ್ರತಿನಿಧಿಸುವವರ ಪೈಕಿ ಎನ್ ಡಿ ಎ ಮಿತ್ರಪಕ್ಷವಾಗಿರುವ ಜೆಡಿಯುಗೆ ಸಚಿವ ಸ್ಥಾನ ಲಭಿಸಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 2019ರಲ್ಲಿ ಕೇಂದ್ರ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದ ನಿತೀಶ್ ಕುಮಾರ್ ಸಚಿವ ಸ್ಥಾನವನ್ನು ನಿರಾಕರಿಸಿದ್ದರು. ಈಗ ಮತ್ತೆ ಅವರಿಗೆ ಮಣೆ ಹಾಕಲಾಗುವುದೋ ಇಲ್ಲವೋ ಎಂಬುದು ಕಾದು ನೋಡಬೇಕಷ್ಟೇ. ಈ ಬಾರಿ ಕೇಂದ್ರದಲ್ಲಿ ಎರಡು ಸಚಿವ ಸ್ಥಾನ ಪಡೆಯಬೇಕೆಂದು ನಿತೀಶ್ ಆಶಿಸಿದ್ದಾರೆ. ಜೆಡಿಯು ಸಂಸದರಾದ ಲಲ್ಲನ್ ಸಿಂಗ್, ರಾಮ್ ನಾಥ್ ಠಾಕುರ್ ಹಾಗೂ ಸಂತೋಷ್ ಖುಷ್ವಾಹ ರೇಸ್ ನಲ್ಲಿದ್ದಾರೆ.  ರಾಮ್ ನಾಥ್ ಠಾಕೂರ್ ಎಲ್ ಜೆ ಪಿಯ ರಾಮ್ ವಿಲಾಸ್ ಪಾಸ್ವಾನ್ ನಿಧನದ ನಂತರ ಖಾಲಿಯಾಗಿರುವ ಸಚಿವ ಸ್ಥಾನಕ್ಕೆ, ಅವರ ಪುತ್ರ ಚಿರಾಗ್ ಪಾಸ್ವಾನ್ ಆಯ್ಕೆಯಾಗುತ್ತಾರೆ ಎಂಬ ಭರವಸೆ ಇತ್ತು. ಆದರೆ, ಕಳೆದೆರಡು ವಾರದಲ್ಲಿ ಎಲ್ ಜೆ ಪಿ ನಾಯಕರು ಚಿರಾಗ್ ವಿರುದ್ದವೇ ಬಂಡೆದ್ದರಿಂದ, ಈಗ ಈ ಸ್ಥಾನ ಚಿರಾಗ್ ಕುಟುಂಬದ ಮತ್ತೋರ್ವ ಸಂಸದ ಪಶುಪತಿ ಪರಾಸ್ ಅವರಿಗೆ ಲಭಿಸುವ ಸಾಧ್ಯತೆಯಿದೆ.ಬಿಹಾರದ ಹಿಂದಿನ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ, ಮಹಾರಾಷ್ಟ್ರದ ನಾರಾಯಣ ರಾಣೆ ಮತ್ತು ಹಿರಿಯ ನಾಯಕ ಭೂಪೇಂದ್ರ ಯಾದವ್ ಅವರಿಗೆ ಸಚಿವ ಸ್ಥಾನ ಬಹತೇಕ ಖಚಿತವಾಗಿದೆ.  ಲಲ್ಲನ್ ಸಿಂಗ್ ಸತತ ಒಂದು ತಿಂಗಳ ಪರಾಮರ್ಶೆಯ ನಂತರ ಈಗಿರುವ ಸಚಿವರ ಅಂಕಪಟ್ಟಿಯನ್ನು ಕೂಡಾ ತಯಾರಿಸಲಾಗಿದೆ. ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಕ್ಕೆ ಈ ಬಾರಿ ಬಂಪರ್ ಆಫರ್ ಲಭಿಸುವ ಸಾಧ್ಯತೆಯಿದೆ. ವರುಣ್ ಗಾಂಧಿ, ರಾಮ್ ಶಂಕರ್ ಕಠೇರಿಯಾ, ಅನಿಲ್ ಜೈನ್, ರೀಟಾ ಬಹುಗುಣ ಜೋಷಿ ಮತ್ತು ಜಫರ್ ಇಸ್ಲಾಂ ಅವರು ಆಕಾಂಕ್ಷಿಗಳಾಗಿದ್ದಾರೆ.  ಉತ್ತರಾಖಂಡದಿಂದ ಅಜಯ್ ಭಟ್ ಅಥವಾ ಅನಿಲ್ ಬಲೂನಿ ಹಾಗೂ ಕರ್ನಾಟಕದಿಂದ ಅಚ್ಚರಿಯ ಆಯ್ಕೆಯಾಗಿ ಯುವ ಸಂಸದ ಪ್ರತಾಪ ಸಿಂಹ ಅವರು ಸಚಿವರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.  ಇತ್ತೀಚಿಗೆ ಚುನಾವಣೆ ಸೋತಿರುವ ಪಶ್ಚಿಮ ಬಂಗಾಳದಿಂದ ನಾಯಕರನ್ನು ಕೂಡಾ ಸಚಿವ ಸ್ಥಾನಕ್ಕೆ ಸೇರಿಸುವ ಆಲೋಚನೆ ಬಿಜೆಪಿ ಹೈಕಮಾಂಡ್ ಹೊಂದಿದ್ದು, ಇದರಿಂದ ಬಂಗಾಳದಲ್ಲಿ ಪಕ್ಷ ಸಂಘಟನೆ ಉತ್ತಮವಾಗಿ ನಡೆಯಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ಒಂದು ವೇಳೆ ಬಂಗಾಳದ ನಾಯಕರಿಗೆ ಸಚಿವ ಸ್ಥಾನ ನೀಡಿದರೆ, ಜಗನ್ನಾಥ್ ಸರ್ಕಾರ್, ಶಾಂತನು ಠಾಖೂರ್ ಮತ್ತು ನಿತೀತ್ ಪ್ರಮಾಣಿಕ್ ಅವರ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.  ಪಶುಪತಿ ಪರಾಸ್ ಇನ್ನುಳಿದಂತೆ, ಹರ್ಯಾಣದ ಬ್ರಿಜೇಂದ್ರ ಸಿಂಗ್, ರಾಜಸ್ಥಾನದ ರಾಹುಲ್ ಕಸ್ವಾನ್, ಓಡಿಶಾದ ಅಶ್ವನಿ ವೈಷ್ಣವ್, ಮಹಾರಾಷ್ಟ್ರದಿಂದ ಪೂನಂ ಮಹಾಜನ್ ಅಥವಾ ಪ್ರೀತಂ ಮುಂಡೆ ಮತ್ತು ದೆಹಲಿಯಿಂದ ಪರ್ವೇಶ್ ವರ್ಮಾ ಅಥವಾ ಮೀನಾಕ್ಷಿ ಲೇಖಿ ಸಚಿವ ಸ್ಥಾನವನ್ನು ಅಲಂಕರಿಸಲಿದ್ದಾರೆ.  ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ಹಿಡಿಯುವ ಉದ್ದೇಶದಿಂದ ಈ ಬಾರಿ ಅತ್ಯಂತ ಜಾಗರೂಕತೆಯಿಂದ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರಧಾನಿ ಮೋದಿಯವರು, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರ ಜತೆ ಸರಣಿ ಸಭೆಗಳನ್ನು ನಡೆಸಿದ್ದಾರೆ.  ಈಗಾಗಲೇ ಹೆಚ್ಚುವರಿಯಾಗಿ ಇಲಾಖೆಗಳನ್ನು ಪಡೆದಿರುವ ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ, ಹರ್ಷ್ ವರ್ಧನ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಸ್ಮೃತಿ ಇರಾಣಿ ಹಾಗೂ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಹೆಚ್ಚುವರಿ ಖಾತೆಯನ್ನು ಬಿಟ್ಟುಕೊಡಬೇಕಾದ ಸಂದರ್ಭ ಎದುರಾಗುವ ಸಾಧ್ಯತೆಯಿದೆ. 

ಪಂಜಾಬ್ ರಾಜಕೀಯ ಅಂಗಣದಲ್ಲಿ ಸಿಕ್ಸರ್ ಬಾರಿಸುವರೇ ಸಿಧು?

ಪಂಜಾಬ್ ರಾಜಕೀಯ ಅಂಗಣದಲ್ಲಿ ಸಿಕ್ಸರ್ ಬಾರಿಸುವರೇ ಸಿಧು?

ಪಂಜಾಬ್ ನಲ್ಲಿ ಚುನಾವಣೆಗೆ ಇನ್ನು ಎರಡು ವರ್ಷಗಳು ಬಾಕಿ ಇವೆ. ಈಗಲೇ ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಒಡಕು ಮೂಡಿದ್ದು, ಸಿಎಂ ಅಮರಿಂದರ್ ಸಿಂಗ್ ಮತ್ತು ನವಜ್ಯೋತ್ ಸಿಂಗ್ ಸಿಧು ನಡುವಿನ ಸಮರ ಈಗ ತಾರಕಕ್ಕೆ ಏರಿದೆ. ಪಕ್ಷದ ಹೈಕಮಾಂಡ್ ಅನ್ನು ಭೇಟಿಯಾಗಿ ನಾಯಕರ ಒಲವನ್ನು ಗಳಿಸುವ ಪ್ರಯತ್ನ ನಡೆಯುತ್ತಿದೆ.  ಬುಧವಾರ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಸಿಧು, ಪಂಜಾಬ್ ಕಾಂಗ್ರೆಸ್ ನಲ್ಲಿ ಮೂಡಿರುವ ಒಡಕು ನಿವಾರಿಸಲು ರಾಷ್ಟ್ರ ನಾಯಕರು ಮುಂದೆ ಬಂದಿದ್ದಾರೆ. ಅವರ ನಿರ್ಧಾರಕ್ಕಾಗಿ ಕಾಯುತ್ತೇನೆ ಎಂದು ಹೇಳಿದ್ದಾರೆ.  ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ಮುನ್ನ ಸಿಧು ಅವರು, ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾಗಿದ್ದರು. ಸತತ ನಾಲ್ಕು ಗಂಟೆಗಳ ಕಾಲ ಪ್ರಿಯಾಂಕ ಗಾಂಧಿಯೊಂದಿಗೆ ಚರ್ಚೆ ನಡೆಸಿದರು. ಈ ಚರ್ಚೆಯ ವಿಷಯಗಳು ಇನ್ನೂ ಬಹಿರಂಗವಾಗಿಲ್ಲ. ಇಷ್ಟು ಮಾತ್ರವಲ್ಲದೇ, ರಾಹುಲ್ ಗಾಂಧಿಯವರೊಂದಿಗಿನ ಸಭೆಯಲ್ಲಿ ಕೂಡಾ ಪ್ರಿಯಾಂಕ ಗಾಂಧಿ ಹಾಜರಿದ್ದಿದ್ದು, ಪಂಜಾಬ್ ಕಾಂಗ್ರೆಸ್ ನಲ್ಲಿ ಎದ್ದಿರುವ ಭಿನ್ನಮತದ ತೀವ್ರತೆಯನ್ನು ಸೂಚಿಸುತ್ತದೆ.  ಈ ಎರಡೂ ಸಭೆಗಳು ಸಿಧು ಅವರನ್ನು ಸಮಾಧಾನಗೊಳಿಸಿವೆಯೇ ಇಲ್ಲವೇ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ಸಿಧು ಅವರು ಹೈಕಮಾಂಡ್ ಮುಂದಿಟ್ಟಿರುವ ಬೇಡಿಕೆಗಳ ಮೇಲೆ ಈ ವಿಚಾರ ನಿರ್ಧರಿತವಾಗಿದೆ.  ಸಿಎಂ ಖುರ್ಚಿ ಮೇಲೆ ಕಣ್ಣು? ೨೦೧೭ರ ಚುನಾವಣೆಗಿಂತಲೂ ಹಿಂದೆ ಬಿಜೆಪಿ ಪಕ್ಷದಲ್ಲಿದ್ದ ಸಿಧು, ನಂತರ ಕಾಂಗ್ರೆಸ್ ಪಾಳೆಯಕ್ಕೆ ಸೇರಿದ್ದರು. ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸುವ ಮೂಲಕ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿಕೊಂಡಿದ್ದರು. ಈಗ ಮತ್ತೆ ಬಿಜೆಪಿ ಕಡೆಗೆ ಸಿಧು ಮುಖ ಮಾಡಲಿದ್ದಾರೆ ಎಂಬ ಕುರಿತು ಕಳೆದ ಮೇ ತಿಂಗಳಲ್ಲಿ ಗಾಳಿ ಸುದ್ದಿ ಹಬ್ಬಿತ್ತು. ಈ ಸಂದರ್ಭದಲ್ಲ ಇಎಚ್ಚೆತ್ತ ಹೈಕಮಾಂಡ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ.  ಕೃಷಿ ಕಾಯ್ದೆಗಳ ವಿರುದ್ದ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಪಂಜಾಬ್ ರೈತರ ಪಾಲು ಹೆಚ್ಚಿದೆ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಬಿಜೆಪಿ ವಿರುದ್ದ ಜನರು ಸಿಡಿದೆದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ೨೦೨೨ರ ಚುನಾವಣೆಯಲ್ಲಿ ಗೆಲ್ಲಲು, ಕಾಂಗ್ರೆಸ್ ಮುಂದೆ ವಿಫುಲವಾದ ಅವಕಾಶಗಳಿವೆ. ಈ ಅವಕಾಶವನ್ನು ಬಳಸಿಕೊಂಡು ಸಿಎಂ ಸ್ಥಾನವನ್ನು ಪಡೆಯುವ ಆಲೋಚನೆ ಮಾಡಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.  ಸಿಧು ಅವರ ಈ ಪ್ರಯತ್ನಕ್ಕೆ ಈಗಾಗಲೇ ತಣ್ಣೀರೆರಚಿರುವ ಹೈಕಮಾಂಡ್, ಹಾಲಿ ಸಿಎಂ ಅಮರೀಂದರ್ ಸಿಂಗ್ ಅವರಿಗೆ ನೀಡಿರುವ ಬೆಂಬಲ ಮುಂದುವರೆಸುವುದಾಗಿ ಹೇಳಿದ್ದಾರೆ. ಮಾತ್ರವಲ್ಲದೇ, ಮುಂಬರುವ ಚುನಾವಣೆಯನ್ನು ಕೂಡಾ ಅವರ ನೇತೃತ್ವದಲ್ಲಿಯೇ ಎದುರಿಸುವುದಾಗಿ ಹೇಳಿದೆ. ಆದರೆ, ರಾಜಕೀಯದಲ್ಲಿ ಯಾವಾಗ ಯಾರ ಸ್ಥಾನ ಪಲ್ಲಟವಾಗುತ್ತದೆ ಎಂಬುದು ಯಾರು ಬಲ್ಲರು? ಈ ಕಾರಣಕ್ಕಾಗಿ, ಸಿಎಂ ಸ್ಥಾನಕ್ಕೆ ಸಿಧು ತಮ್ಮ ಲಾಬಿ ಮುಂದವರೆಸಿರುವ ಸಾಧ್ಯತೆಗಳು ಕೂಡಾ ಇವೆ.  ಭಿನ್ನಮತ ಶಮನಕ್ಕೆ ಮುಂದಾದ ಪ್ರಿಯಾಂಕ ಗಾಂಧಿ? ಕೆಲ ದಿನಗಳ ಹಿಂದೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರು ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿಧು ವಿರುದ್ದ ವಾಗ್ದಾಳಿ ನಡೆಸಿದ್ದರು. ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರೀವಾಲ್ ಜತೆ ಸಿಧು ಮಾತುಕತೆಯಲ್ಲಿ ತೊಡಗಿದ್ದಾರೆ. ಅವರು ಯಾವ ಕ್ಷಣದಲ್ಲಿ ಬೇಕಾದರೂ ಪಕ್ಷ ಬದಲಾಯಿಸಬಹುದು ಎಂದಿದ್ದರು.  ಈ ಹೇಳಿಕೆಯಿಂದ ಸಿಟ್ಟಿಗೆದ್ದಿದ್ದ ಸಿಧು, ಅಮರಿಂದರ್ ಸಿಂಗ್ ಅವರ ಹೇಳಿಕೆಗೆ ಸ್ಪಷ್ಟನೆ ಕೇಳಿದ್ದರು.  ಇದೇ ರೀತಿಯ ಒಳಜಗಳ ಒಮ್ಮೆ ರಾಜಸ್ಥಾನ ಕಾಂಗ್ರೆಸ್ ನಲ್ಲಿಯೂ ನಡೆದಿತ್ತು. ಆ ಸಂದರ್ಭಧಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಯುವ ನಾಯಕ ಸಚಿನ್ ಪೈಲಟ್ ನಡುವೆ ತಕಾರಾರು ಎದ್ದಿತ್ತು. ಇನ್ನೇನು ಕಾಂಗ್ರೆಸ್ ಇಬ್ಬಾಗವಾಗುತ್ತದೆ ಎನ್ನುವಷ್ಟರಲ್ಲಿ ಪ್ರಿಯಾಂಕ ಗಾಂಧಿ ಮಧ್ಯ ಪ್ರವೇಶಿಸಿ ಭಿನ್ನಮತ ಶಮನಗೊಳಿಸಿದ್ದರು. ಈಗ ಪಂಜಾಬ್ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಒಡಕು ಸರಿಪಡಿಸಲು ಮತ್ತೆ ಪ್ರಿಯಾಂಕ ಗಾಂಧಿಯವರು ಮುಂದಾಗಿದ್ದಾರೆ.  ಸಚಿವ ಸ್ಥಾನ ನಿರಾಕರಿಸಿದ ಸಿಧು:  ರಾಜ್ಯ ಕಾಂಗ್ರೆಸ್ ನಲ್ಲಿದ್ದ ಭಿನ್ನಮತ ಶಮನಕ್ಕಾಗಿ ಸೋನಿಯಾ ಗಾಂಧಿ ಅವರು ಎಐಸಿಸಿಯ ತ್ರಿಸದಸ್ಯ ಸಮಿತಿಯನ್ನು ರಚಿಸಿ ವರದಿ ಕೇಳಿದ್ದರು. ಈ ವರದಿಯ ಪ್ರಕಾರ ಸಿಧು ಅವರಿಗೆ ಪಕ್ಷದಲ್ಲಿ ಹಾಗು ಸರ್ಕಾರದಲ್ಲಿ ಸ್ಥಾನ ನೀಡಬೇಕೆಂದು ಹೇಳಲಾಗಿತ್ತು. ಆದರೆ, ಈ ಸಿಧು ಅವರು ಈ ಆಫರ್ ಅನ್ನು ನೇರವಾಗಿ ತಿರಸ್ಕರಿಸಿದ್ದರು.  “ಲೋಕಸಭೆ, ರಾಜ್ಯಸಭೆ, ಶಾಸಕ, ಮಂತ್ರಿ… ಹೀಗೆ ಹದಿನೇಳು ವರ್ಷ ರಾಜಕೀಯದಲ್ಲಿದ್ದೇನೆ. ಒಂದೇ ಉದ್ದೇಶ ಏನೆಂದರೆ, ಪಂಜಾಬ್ ನ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಿ ಇಲ್ಲಿನ ಜನರಿಗೆ ಅಧಿಕಾರ ನೀಡುವುದು. ನನಗೆ ಹಲವು ಬಾರಿಯೂ ಕ್ಯಾಬಿನೆಟ್ ಸ್ಥಾನ ನೀಡದರೂ, ವ್ಯವಸ್ಥೆಯನ್ನು ಬದಲಾಯಿಸುವ ನನ್ನ ಪ್ರತೀ ಪ್ರಯತ್ನವನ್ನು ‘ವ್ಯವಸ್ಥೆ’ ನಿರಾಕರಿಸಿದಾಗ ನಾನು ‘ವ್ಯವಸ್ಥೆ’ಯನ್ನೇ ನಿರಾಕರಿಸುತ್ತೇನೆ,” ಎಂದು ಹೇಳಿದ್ದರು.  ಕಳೆದೆರಡು ವರ್ಷಗಳಿಂದ ಮುಸುಕಿನ ಗುದ್ದಾಟದಂತಿದ್ದ ಸಿಧು-ಅಮರಿಂದರ್ ಜಗಳ ಈಗ ಬೀದಿಗೆ ಬಂದು ನಿಂತಿದೆ. ಎರಡೇ ವರ್ಷಗಳಲ್ಲಿ ಚುನಾವಣೆಯೂ ಬರಲಿದ್ದು, ಕಾಂಗ್ರೆಸ್ ಹೈಕಮಾಂಡ್ ಈ ಭಿನ್ನಮತಕ್ಕೆ ಯಾವ ಮದ್ದು ಅರೆಯಲಿದೆ ಎಂಬುದು ನಿಜಕ್ಕು ಕುತೂಹಲ ಮೂಡಿಸಿದೆ. 

Page 18 of 20 1 17 18 19 20