ಚಂದನ್‌ ಕುಮಾರ್

ಚಂದನ್‌ ಕುಮಾರ್

ಮೊದಲ ಮಹಿಳಾ ರಾಷ್ಟ್ರಪತಿ, ಪ್ರಧಾನಿ, ಲೋಕಸಭೆ ಸ್ಪೀಕರ್ ಎಲ್ಲರೂ ಕಾಂಗ್ರೆಸ್ ನವರೇ : ಬಿಜೆಪಿಗೆ ಕಾಂಗ್ರೆಸ್ ಟಾಂಗ್

ಮೊದಲ ಮಹಿಳಾ ರಾಷ್ಟ್ರಪತಿ, ಪ್ರಧಾನಿ, ಲೋಕಸಭೆ ಸ್ಪೀಕರ್ ಎಲ್ಲರೂ ಕಾಂಗ್ರೆಸ್ ನವರೇ : ಬಿಜೆಪಿಗೆ ಕಾಂಗ್ರೆಸ್ ಟಾಂಗ್

ಮೊದಲ ಮಹಿಳಾ ರಾಷ್ಟ್ರಪತಿ, ಮಹಿಳಾ ಪ್ರಧಾನಿ, ಮಹಿಳಾ ಲೋಕಸಭೆ ಸ್ಪೀಕರ್ ಎಲ್ಲರೂ ಕೂಡ ಕಾಂಗ್ರೆಸ್ ನವರೇ ಎಂಬುದು ಬಿಜೆಪಿಗೆ ನೆನಪಿರಲಿ ಎಂದು ಕರ್ನಾಟಕ ಕಾಂಗ್ರೆಸ್ ಬಿಜೆಪಿಗೆ ಟಾಂಗ್...

ದಲಿತ ಲೇಖಕರು ಹೊರಕ್ಕೆ, RSS ಸಿದ್ಧಾಂತ ಒಳಕ್ಕೆ : ಪಠ್ಯಪುಸ್ತಕಗಳಲ್ಲಿನ ಬದಲಾವಣೆಗಳ ಸಂಪೂರ್ಣ ಪಟ್ಟಿ

ದಲಿತ ಲೇಖಕರು ಹೊರಕ್ಕೆ, RSS ಸಿದ್ಧಾಂತ ಒಳಕ್ಕೆ : ಪಠ್ಯಪುಸ್ತಕಗಳಲ್ಲಿನ ಬದಲಾವಣೆಗಳ ಸಂಪೂರ್ಣ ಪಟ್ಟಿ

ವಿವಾದಾತ್ಮಕ ಬಲಪಂಥೀಯ ವಾಗ್ಮಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ರಚಿಸಿದ ಶಾಲಾ ಪಠ್ಯಪುಸ್ತಕಗಳ ವಿರುದ್ಧ ಕರ್ನಾಟಕದ ಪ್ರಗತಿಪರ ಗುಂಪುಗಳು ಏಕೆ ಆಂದೋಲನ ನಡೆಸುತ್ತಿವೆ? ಈ ಪಠ್ಯಗಳಲ್ಲಿ ಯಾವ...

ಕಿಮ್ಮನೆ ರತ್ನಾಕರ್‌ ಅವರು ಒಬ್ಬ ಸಭ್ಯ ರಾಜಕಾರಣಿ : ಸಿದ್ದರಾಮಯ್ಯ

NDRF ನಿಯಮಗಳನ್ನು ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪದಿಂದಾಗಿರುವ ಹಾನಿಗೆ ಪರಿಹಾರ ನೀಡಿ : ಕೇಂದ್ರಕ್ಕೆ ಸಿದ್ದರಾಮಯ್ಯ ಒತ್ತಾಯ

NDRF ನಿಯಮಗಳನ್ನು ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಸಮರ್ಪಕವಾದ ಪರಿಹಾರ ನೀಡುವಂತೆ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು...

ಕೋವಿಡ್‌, ಡೆಂಗಿ ಪ್ರಕರಣ ಹೆಚ್ಚಳದ ಬಗ್ಗೆ ಆತಂಕ ಬೇಡ : ಸಚಿವ ಸುಧಾಕರ್‌

ಕೋವಿಡ್‌, ಡೆಂಗಿ ಪ್ರಕರಣ ಹೆಚ್ಚಳದ ಬಗ್ಗೆ ಆತಂಕ ಬೇಡ : ಸಚಿವ ಸುಧಾಕರ್‌

ಕೋವಿಡ್‌ ಮತ್ತು ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಲ್ಲ ರೀತಿಯ ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಸಾರ್ವಜನಿಕರು ಆತಂಕ ಪಡೆಯುವ ಅಗತ್ಯವಿಲ್ಲ. ಆದರೆ ಅಗತ್ಯ ಮುನ್ನೇಚ್ಚರಿಕೆ ಕ್ರಮಗಳನ್ನು ತಪ್ಪದೆ...

ಅದಾನಿಗೆ ಯೋಜನೆ ನೀಡುವಂತೆ ಶ್ರೀಲಂಕಾಕ್ಕೆ ಒತ್ತಡ ಹೇರಿದ್ದರೇ ಮೋದಿ?

ಅದಾನಿಗೆ ಯೋಜನೆ ನೀಡುವಂತೆ ಶ್ರೀಲಂಕಾಕ್ಕೆ ಒತ್ತಡ ಹೇರಿದ್ದರೇ ಮೋದಿ?

500 ಮೆಗಾವ್ಯಾಟ್ ಪವನ‌ (Wind Power) ವಿದ್ಯುತ್ ಯೋಜನೆಯನ್ನು ನೇರವಾಗಿ ಅದಾನಿ ಗ್ರೂಪ್‌ಗೆ ನೀಡುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷ ಗೊಟಾಬಯ...

ಪ್ರವಾದಿ ಕುರಿತು ಅವಹೇಳನ: ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ ಬೆನ್ನಲ್ಲೇ ಬಿಜೆಪಿಯಿಂದ ಸ್ಪಷ್ಟನೆ, ನೂಪುರ್ ಶರ್ಮಾ ಕ್ಷಮೆಯಾಚನೆ!

ಪ್ರವಾದಿ ಕುರಿತು ಅವಹೇಳನ: ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ ಬೆನ್ನಲ್ಲೇ ಬಿಜೆಪಿಯಿಂದ ಸ್ಪಷ್ಟನೆ, ನೂಪುರ್ ಶರ್ಮಾ ಕ್ಷಮೆಯಾಚನೆ!

ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರು ಪ್ರವಾದಿ ಮೊಹಮ್ಮದ್ ಕುರಿತು ಮಾಡಿದ ವಿವಾದಾತ್ಮಕ ಹೇಳಿಕೆಗಳು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಭಾರತಕ್ಕೆ ಹಿನ್ನಡೆಯನ್ನುಂಟು ಮಾಡಿದೆ....

ಬೇಳೂರು ರಾಘವೇಂದ್ರ ಶೆಟ್ಟಿ ಆರೋಪಗಳಿಗೆ 5 ಪುಟಗಳ ಸ್ಪಷ್ಟೀಕರಣ ಪತ್ರ ಬರೆದ ಡಿ.ರೂಪಾ : ಪತ್ರದಲ್ಲೇನಿದೆ ಗೊತ್ತೇ?

ಬೇಳೂರು ರಾಘವೇಂದ್ರ ಶೆಟ್ಟಿ ಆರೋಪಗಳಿಗೆ 5 ಪುಟಗಳ ಸ್ಪಷ್ಟೀಕರಣ ಪತ್ರ ಬರೆದ ಡಿ.ರೂಪಾ : ಪತ್ರದಲ್ಲೇನಿದೆ ಗೊತ್ತೇ?

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ (KSHDCL) ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ನಡುವಿನ ಪತ್ರ ಸಮರ ಮುಂದುವರೆದಿದೆ. ಹೌದು, “ವೈಯಕ್ತಿಕ...

ಭಾರತೀಯ ಪ್ರಿಯಕರನನ್ನು ಸೇರಲು ಸುಂದರ್‌ಬನ್‌ ಕಾಡು ದಾಟಿ, ನದಿ ಈಜಿ ಬಂದ ಬಾಂಗ್ಲಾ ಯುವತಿ!

ಭಾರತೀಯ ಪ್ರಿಯಕರನನ್ನು ಸೇರಲು ಸುಂದರ್‌ಬನ್‌ ಕಾಡು ದಾಟಿ, ನದಿ ಈಜಿ ಬಂದ ಬಾಂಗ್ಲಾ ಯುವತಿ!

ಪ್ರೀತಿಗಾಗಿ ಏಳು ಸಾಗರಗಳನ್ನು ದಾಟಿ ಹೋದ, ವಿವಿಧ ಸವಾಲುಗಳನ್ನು ಸ್ವೀಕರಿಸಿ ಪ್ರೀತಿ ಪಡೆದ, ಯುದ್ಧ ಮಾಡಿ ಗೆದ್ದು ಪ್ರೇಮವನ್ನು ತಮ್ಮದಾಗಿಸಿಕೊಂಡ ಹಲವಾರು ಪುರಾಣ ಕಥನಗಳನ್ನು, ನಾಟಕಗಳನ್ನು, ರೊಮ್ಯಾಂಟಿಕ್‌...

ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗಬಹುದು, ಎಚ್ಚರಿಕೆ ವಹಿಸಿ : ಕೇಂದ್ರ ಸರ್ಕಾರ

ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗಬಹುದು, ಎಚ್ಚರಿಕೆ ವಹಿಸಿ : ಕೇಂದ್ರ ಸರ್ಕಾರ

ಆಧಾರ್ ಕಾರ್ಡ್ ದುರುಪಯೋಗ ಆಗುತ್ತಿರುವ ಬಗ್ಗೆ ಈ ಹಿಂದೆ ಬಂದ ಆರೋಪಗಳು, ದೂರಗಳ ಬಗ್ಗೆ ತಕರಾರು ತೆಗೆದಿದ್ದ ಕೇಂದ್ರ ಸರ್ಕಾರವೇ ಈಗ ದುರುಪಯೋಗ ಆಗುವ ಸಾಧ್ಯತೆ ಇದೆ...

ಬಿಹಾರ ಜಾತಿಗಣತಿ : ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಕೊಡಲಿಯೇಟು?

ಬಿಹಾರ ಜಾತಿಗಣತಿ : ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಕೊಡಲಿಯೇಟು?

ರಾಜ್ಯವಾಪಿ ಜಾತಿಗಣತಿ ನಡೆಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಗಿದ್ದಾರೆ. ಈ ಕಾರಣಕ್ಕಾಗಿ ಜೂನ್ 1ನೇ ತಾರೀಕು ಸರ್ವಪಕ್ಷ ಸದಸ್ಯರ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಹಿಂದಿನಿಂದಲೂ ಬಿಹಾರದಲ್ಲಿ ಜಾತಿಗಣತಿಯನ್ನು ವಿರೋಧಿಸುತ್ತಲೇ ಬಂದಿರುವ ಬಿಜೆಪಿಯೂ ಈ ಸಭೆಯಲ್ಲಿ ಭಾಗವಹಿಸಲಿದೆ ಎಂದು ವರದಿಯಾಗಿದೆ.  ಮೇ 27ರಂದು ಸರ್ವಪಕ್ಷ ಸದಸ್ಯರ ಸಭೆ ನಡೆಸಲು ತೀರ್ಮಾನಿಸಲಾಗಿತ್ತಾದರೂ, ಇದಕ್ಕೆ ಬಿಜೆಪಿ ಸಮ್ಮತಿಸಿರಲಿಲ್ಲ. ಮಂಗಳವಾರ ನಡೆದ ಬೆಳವಣಿಗೆಯಲ್ಲಿ ಬಿಜೆಪಿಯು ಸಭೆಗೆ ಹಾಜರಾಗಲು ಸಮ್ಮತಿಸಿದೆ ಎಂದು ಬಿಹಾರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ.  ರಾಷ್ಟ್ರೀಯ ಜನತಾ ದಳ ಸೇರಿದಂತೆ ಬಿಹಾರದ ಬಹುತೇಕ ಪಕ್ಷಗಳು ಜಾತಿಗಣತಿ ನಡೆಸಲು ಸರ್ಕಾರವನ್ನು ಆಗ್ರಹಿಸಿದ್ದವು. ಆದರೆ, ಬಿಜೆಪಿ ಮಾತ್ರ ಈ ನಿರ್ಧಾರದಿಂದ ಅಸಮಾಧಾನಗೊಂಡಿತ್ತು. ಕಳೆದ ವರ್ಷ ಇದೇ ವಿಚಾರವಾಗಿ ನಿತೀಶ್ ಕುಮಾರ್ ನೇತೃತ್ವದ ಸರ್ವ ಪಕ್ಷ ಆಯೋಗವು ಪ್ರಧಾನಿ ಮೋದಿಯವರನ್ನೂ ಭೇಟಿಯಾಗಿತ್ತು.  ಜಾತಿಗಣತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ತನ್ನ ನಿರ್ಧಾರದಲ್ಲಿ ತಿಳಿಸಿತ್ತು. ಆದರೆ, ಜಾತಿಗಣತಿಯಿಂದ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬಹುದು ಎಂದು ವಿಪಕ್ಷಗಳು ವಾದ ಮಂಡಿಸಿದ್ದವು.  ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಕೊಡಲಿ ಏಟು? ಧರ್ಮಾಧರಿತ ರಾಜಕಾರಣದಿಂದಲೇ ಅಧಿಕಾರದ ಗದ್ದುಗೆ ಹಿಡಿಯುವ ಬಿಜೆಪಿಗೆ ಜಾತಿಗಣತಿ ಮಗ್ಗುಲ ಮುಳ್ಳಾಗಿದೆ. ಜನರು ಜಾತಿ ಆಧಾರದಲ್ಲಿ ಒಗ್ಗಟ್ಟಾದರೆ, ಬಿಜೆಪಿಯ ಮತ  ಬ್ಯಾಂಕ್ ಛಿದ್ರವಾಗಲಿದೆ. ಈಗಾಗಲೇ ದೇಶದಲ್ಲಿ ಆಳವಾಗಿ ಬೇರೂರಿರುವ ಧರ್ಮಾಧರಿತ ರಾಜಕಾರಣದ ಸಮೀಕರಣಗಳನ್ನು ಬಿಜೆಪಿ ಮತ್ತೆ ಜಾತಿಗಳಿಗೆ ಅನುಗುಣವಾಗಿ ನಡೆಸಬೇಕಾದ ಅನಿವಾರ್ಯತೆ ಒದಗಿ ಬರುತ್ತದೆ.  ಬಿಹಾರದ ಜಾತಿಗಣತಿಯ ಪರಿಣಾಮ ಕೇವಲ ಒಂದು ರಾಜ್ಯದ ಮಟ್ಟಿಗೆ ಸೀಮಿತವಾಗಿರುವುದಿಲ್ಲ. ಬದಲಾಗಿ ಸಂಪೂರ್ಣ ಉತ್ತರ ಭಾರತದ ಚಿತ್ರಣವನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಉತ್ತರ ಭಾರತದ ಹಿಂದುಳಿದ ವರ್ಗಗಳಲ್ಲಿ ಈಗಾಗಲೇ ಬಿಜೆಪಿ ಉತ್ತಮ ಹೆಸರನ್ನು ಪಡೆದಿದೆ. ಹಿಂದುತ್ವದ ಹೆಸರಿನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಜಾತಿ, ಉಪಜಾತಿಗಳಿಗೆ ನ್ಯಾಯ ಒದಗಿಸಬೇಕಾದ ಪ್ರಶ್ನೆಯೇ ಇಲ್ಲವಾಗಿಸಿದೆ. ಮೇಲ್ಜಾತಿಗಳಲ್ಲಿ ಬಿಜೆಪಿಯ ಹಿಡಿತ ಪ್ರಬಲವಾಗಿದ್ದರೂ, ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕ. ಈಗ ಜಾತಿಗಣತಿಯಿಂದಾಗಿ ಹಿಂದುತ್ವ ಎಂಬ ವಿಚಾರವನ್ನು ಮತದಾರರು ತರೆಮರೆ ಇದರಿಂದ ಬಿಜೆಪಿಗೆ ಹೆಚ್ಚಿನ ನಷ್ಟವಾಗಲಿದೆ.  ಕರ್ನಾಟಕದಲ್ಲಿಯೂ ಜಾತಿಗಣತಿ ಏನಾಯ್ತು? ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ, ಕರ್ನಾಟಕದಲ್ಲಿಯೂ ಜಾತಿಗಣತಿ ನಡೆದಿತ್ತು. ಆದರೆ, ಅದರ ವರದಿ ಇನ್ನೂ ಬಹಿರಂಗವಾಗಿಲ್ಲ. ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಅದನ್ನು ಬಹಿರಂಗಪಡಿಸುವ ಗೋಜಿಗೆ ಹೋಗಲಿಲ್ಲ. ಬರೋಬ್ಬರಿ 169 ಕೋಟಿ ಖರ್ಚು ಮಾಡಿ ನಡೆಸಿದಂತಹ ಜಾತಿಗಣತಿಯ ವರದಿ ವಿಧಾನಸೌಧದಲ್ಲಿ ಗೆದ್ದಲುಗಳಿಗೆ ಆಹಾರವಾಗುತ್ತಿದೆ.  ಜಾತಿಗಣತಿಯ ಆಧಾರದ ಮೇಲೆ ಎಸ್ ಟಿ ಸಮುದಾಯದ ಮೀಸಲಾತಿಯನ್ನು 7.5%ಕ್ಕೆ ಏರಿಸುವಂತೆ ಆಗ್ರಹಿಸಿ ನಿರಂತರ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ, ಈ ಕುರಿತಾಗಿ ಸರ್ಕಾರ ಎಳ್ಳಷ್ಟೂ ಆಸಕ್ತಿ ತೋರಿಸುತ್ತಿಲ್ಲ.  ಈಗ ಬಿಹಾರವೂ ಇಂತಹುದೇ ಒಂದು ಪರಿಸ್ಥಿತಿಯನ್ನು ಎದುರು ನೋಡುತ್ತಿದ್ದು, ಹಿಂದುಳಿದ ಮತ್ತು ಅತಿ ಹಿಂದುಳಿದ ಜಾತಿಗಳಿಗೆ ನ್ಯಾಯ ಒದಗಿಸುವ ಸಲುವಾಗಿ ನಡೆಸುವ ಜಾತಿಗಣತಿ ಕೇವಲ ರಾಜಕೀಯ ದಾಳವಾಗಿ ಉಳಿಯಬಾರದು. ಬದಲಾಗಿ, ಇದರ ವರದಿಯು ಸಾರ್ವಜನಿಕವಾಗಿ ಲಭ್ಯವಾಗಬೇಕು. ಸರ್ಕಾರದ ಯೋಜನೆಗಳು ಎಲ್ಲಾ ಜಾತಿ ಸಮುದಾಯಗಳಿಗೆ ಸರಿಸಮಾನಾಗಿ ಲಭಿಸಲು ಈ ಗಣತಿ ಸಹಕಾರಿಯಾಗಬೇಕು. ಬದಲಾಗಿ, ಕೇವಲ ರಾಜಕೀಯ ಮೇಲಾಟಕ್ಕೆ ಹಾಗೂ ಚುನಾವಣೆಗಳ ಸಂದರ್ಭದಲ್ಲಿ ಜಾತಿಯಾಧರಿತ ರಾಜಕಾರಣಕ್ಕಾಗಿ ಗಣತಿಯು ಮೀಸಲಾದರೆ, ಅದು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿ ಮಾತ್ರ ಉಳಿಯಲಿದೆ. 

Page 3 of 30 1 2 3 4 30