ಚಂದನ್‌ ಕುಮಾರ್

ಚಂದನ್‌ ಕುಮಾರ್

ಮೊದಲ ಮಹಿಳಾ ರಾಷ್ಟ್ರಪತಿ, ಪ್ರಧಾನಿ, ಲೋಕಸಭೆ ಸ್ಪೀಕರ್ ಎಲ್ಲರೂ ಕಾಂಗ್ರೆಸ್ ನವರೇ : ಬಿಜೆಪಿಗೆ ಕಾಂಗ್ರೆಸ್ ಟಾಂಗ್

ಮೊದಲ ಮಹಿಳಾ ರಾಷ್ಟ್ರಪತಿ, ಮಹಿಳಾ ಪ್ರಧಾನಿ, ಮಹಿಳಾ ಲೋಕಸಭೆ ಸ್ಪೀಕರ್ ಎಲ್ಲರೂ ಕೂಡ ಕಾಂಗ್ರೆಸ್ ನವರೇ ಎಂಬುದು ಬಿಜೆಪಿಗೆ ನೆನಪಿರಲಿ ಎಂದು ಕರ್ನಾಟಕ ಕಾಂಗ್ರೆಸ್ ಬಿಜೆಪಿಗೆ ಟಾಂಗ್...

Read moreDetails

ದಲಿತ ಲೇಖಕರು ಹೊರಕ್ಕೆ, RSS ಸಿದ್ಧಾಂತ ಒಳಕ್ಕೆ : ಪಠ್ಯಪುಸ್ತಕಗಳಲ್ಲಿನ ಬದಲಾವಣೆಗಳ ಸಂಪೂರ್ಣ ಪಟ್ಟಿ

ವಿವಾದಾತ್ಮಕ ಬಲಪಂಥೀಯ ವಾಗ್ಮಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ರಚಿಸಿದ ಶಾಲಾ ಪಠ್ಯಪುಸ್ತಕಗಳ ವಿರುದ್ಧ ಕರ್ನಾಟಕದ ಪ್ರಗತಿಪರ ಗುಂಪುಗಳು ಏಕೆ ಆಂದೋಲನ ನಡೆಸುತ್ತಿವೆ? ಈ ಪಠ್ಯಗಳಲ್ಲಿ ಯಾವ...

Read moreDetails

NDRF ನಿಯಮಗಳನ್ನು ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪದಿಂದಾಗಿರುವ ಹಾನಿಗೆ ಪರಿಹಾರ ನೀಡಿ : ಕೇಂದ್ರಕ್ಕೆ ಸಿದ್ದರಾಮಯ್ಯ ಒತ್ತಾಯ

NDRF ನಿಯಮಗಳನ್ನು ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಸಮರ್ಪಕವಾದ ಪರಿಹಾರ ನೀಡುವಂತೆ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು...

Read moreDetails

ಕೋವಿಡ್‌, ಡೆಂಗಿ ಪ್ರಕರಣ ಹೆಚ್ಚಳದ ಬಗ್ಗೆ ಆತಂಕ ಬೇಡ : ಸಚಿವ ಸುಧಾಕರ್‌

ಕೋವಿಡ್‌ ಮತ್ತು ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಲ್ಲ ರೀತಿಯ ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಸಾರ್ವಜನಿಕರು ಆತಂಕ ಪಡೆಯುವ ಅಗತ್ಯವಿಲ್ಲ. ಆದರೆ ಅಗತ್ಯ ಮುನ್ನೇಚ್ಚರಿಕೆ ಕ್ರಮಗಳನ್ನು ತಪ್ಪದೆ...

Read moreDetails

ಅದಾನಿಗೆ ಯೋಜನೆ ನೀಡುವಂತೆ ಶ್ರೀಲಂಕಾಕ್ಕೆ ಒತ್ತಡ ಹೇರಿದ್ದರೇ ಮೋದಿ?

500 ಮೆಗಾವ್ಯಾಟ್ ಪವನ‌ (Wind Power) ವಿದ್ಯುತ್ ಯೋಜನೆಯನ್ನು ನೇರವಾಗಿ ಅದಾನಿ ಗ್ರೂಪ್‌ಗೆ ನೀಡುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷ ಗೊಟಾಬಯ...

Read moreDetails

ಪ್ರವಾದಿ ಕುರಿತು ಅವಹೇಳನ: ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ ಬೆನ್ನಲ್ಲೇ ಬಿಜೆಪಿಯಿಂದ ಸ್ಪಷ್ಟನೆ, ನೂಪುರ್ ಶರ್ಮಾ ಕ್ಷಮೆಯಾಚನೆ!

ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರು ಪ್ರವಾದಿ ಮೊಹಮ್ಮದ್ ಕುರಿತು ಮಾಡಿದ ವಿವಾದಾತ್ಮಕ ಹೇಳಿಕೆಗಳು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಭಾರತಕ್ಕೆ ಹಿನ್ನಡೆಯನ್ನುಂಟು ಮಾಡಿದೆ....

Read moreDetails

ಬೇಳೂರು ರಾಘವೇಂದ್ರ ಶೆಟ್ಟಿ ಆರೋಪಗಳಿಗೆ 5 ಪುಟಗಳ ಸ್ಪಷ್ಟೀಕರಣ ಪತ್ರ ಬರೆದ ಡಿ.ರೂಪಾ : ಪತ್ರದಲ್ಲೇನಿದೆ ಗೊತ್ತೇ?

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ (KSHDCL) ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ನಡುವಿನ ಪತ್ರ ಸಮರ ಮುಂದುವರೆದಿದೆ. ಹೌದು, “ವೈಯಕ್ತಿಕ...

Read moreDetails

ಭಾರತೀಯ ಪ್ರಿಯಕರನನ್ನು ಸೇರಲು ಸುಂದರ್‌ಬನ್‌ ಕಾಡು ದಾಟಿ, ನದಿ ಈಜಿ ಬಂದ ಬಾಂಗ್ಲಾ ಯುವತಿ!

ಪ್ರೀತಿಗಾಗಿ ಏಳು ಸಾಗರಗಳನ್ನು ದಾಟಿ ಹೋದ, ವಿವಿಧ ಸವಾಲುಗಳನ್ನು ಸ್ವೀಕರಿಸಿ ಪ್ರೀತಿ ಪಡೆದ, ಯುದ್ಧ ಮಾಡಿ ಗೆದ್ದು ಪ್ರೇಮವನ್ನು ತಮ್ಮದಾಗಿಸಿಕೊಂಡ ಹಲವಾರು ಪುರಾಣ ಕಥನಗಳನ್ನು, ನಾಟಕಗಳನ್ನು, ರೊಮ್ಯಾಂಟಿಕ್‌...

Read moreDetails

ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗಬಹುದು, ಎಚ್ಚರಿಕೆ ವಹಿಸಿ : ಕೇಂದ್ರ ಸರ್ಕಾರ

ಆಧಾರ್ ಕಾರ್ಡ್ ದುರುಪಯೋಗ ಆಗುತ್ತಿರುವ ಬಗ್ಗೆ ಈ ಹಿಂದೆ ಬಂದ ಆರೋಪಗಳು, ದೂರಗಳ ಬಗ್ಗೆ ತಕರಾರು ತೆಗೆದಿದ್ದ ಕೇಂದ್ರ ಸರ್ಕಾರವೇ ಈಗ ದುರುಪಯೋಗ ಆಗುವ ಸಾಧ್ಯತೆ ಇದೆ...

Read moreDetails

ಬಿಹಾರ ಜಾತಿಗಣತಿ : ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಕೊಡಲಿಯೇಟು?

ರಾಜ್ಯವಾಪಿ ಜಾತಿಗಣತಿ ನಡೆಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಗಿದ್ದಾರೆ. ಈ ಕಾರಣಕ್ಕಾಗಿ ಜೂನ್ 1ನೇ ತಾರೀಕು ಸರ್ವಪಕ್ಷ ಸದಸ್ಯರ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಹಿಂದಿನಿಂದಲೂ ಬಿಹಾರದಲ್ಲಿ ಜಾತಿಗಣತಿಯನ್ನು ವಿರೋಧಿಸುತ್ತಲೇ ಬಂದಿರುವ ಬಿಜೆಪಿಯೂ ಈ ಸಭೆಯಲ್ಲಿ ಭಾಗವಹಿಸಲಿದೆ ಎಂದು ವರದಿಯಾಗಿದೆ.  ಮೇ 27ರಂದು ಸರ್ವಪಕ್ಷ ಸದಸ್ಯರ ಸಭೆ ನಡೆಸಲು ತೀರ್ಮಾನಿಸಲಾಗಿತ್ತಾದರೂ, ಇದಕ್ಕೆ ಬಿಜೆಪಿ ಸಮ್ಮತಿಸಿರಲಿಲ್ಲ. ಮಂಗಳವಾರ ನಡೆದ ಬೆಳವಣಿಗೆಯಲ್ಲಿ ಬಿಜೆಪಿಯು ಸಭೆಗೆ ಹಾಜರಾಗಲು ಸಮ್ಮತಿಸಿದೆ ಎಂದು ಬಿಹಾರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ.  ರಾಷ್ಟ್ರೀಯ ಜನತಾ ದಳ ಸೇರಿದಂತೆ ಬಿಹಾರದ ಬಹುತೇಕ ಪಕ್ಷಗಳು ಜಾತಿಗಣತಿ ನಡೆಸಲು ಸರ್ಕಾರವನ್ನು ಆಗ್ರಹಿಸಿದ್ದವು. ಆದರೆ, ಬಿಜೆಪಿ ಮಾತ್ರ ಈ ನಿರ್ಧಾರದಿಂದ ಅಸಮಾಧಾನಗೊಂಡಿತ್ತು. ಕಳೆದ ವರ್ಷ ಇದೇ ವಿಚಾರವಾಗಿ ನಿತೀಶ್ ಕುಮಾರ್ ನೇತೃತ್ವದ ಸರ್ವ ಪಕ್ಷ ಆಯೋಗವು ಪ್ರಧಾನಿ ಮೋದಿಯವರನ್ನೂ ಭೇಟಿಯಾಗಿತ್ತು.  ಜಾತಿಗಣತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ತನ್ನ ನಿರ್ಧಾರದಲ್ಲಿ ತಿಳಿಸಿತ್ತು. ಆದರೆ, ಜಾತಿಗಣತಿಯಿಂದ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬಹುದು ಎಂದು ವಿಪಕ್ಷಗಳು ವಾದ ಮಂಡಿಸಿದ್ದವು.  ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಕೊಡಲಿ ಏಟು? ಧರ್ಮಾಧರಿತ ರಾಜಕಾರಣದಿಂದಲೇ ಅಧಿಕಾರದ ಗದ್ದುಗೆ ಹಿಡಿಯುವ ಬಿಜೆಪಿಗೆ ಜಾತಿಗಣತಿ ಮಗ್ಗುಲ ಮುಳ್ಳಾಗಿದೆ. ಜನರು ಜಾತಿ ಆಧಾರದಲ್ಲಿ ಒಗ್ಗಟ್ಟಾದರೆ, ಬಿಜೆಪಿಯ ಮತ  ಬ್ಯಾಂಕ್ ಛಿದ್ರವಾಗಲಿದೆ. ಈಗಾಗಲೇ ದೇಶದಲ್ಲಿ ಆಳವಾಗಿ ಬೇರೂರಿರುವ ಧರ್ಮಾಧರಿತ ರಾಜಕಾರಣದ ಸಮೀಕರಣಗಳನ್ನು ಬಿಜೆಪಿ ಮತ್ತೆ ಜಾತಿಗಳಿಗೆ ಅನುಗುಣವಾಗಿ ನಡೆಸಬೇಕಾದ ಅನಿವಾರ್ಯತೆ ಒದಗಿ ಬರುತ್ತದೆ.  ಬಿಹಾರದ ಜಾತಿಗಣತಿಯ ಪರಿಣಾಮ ಕೇವಲ ಒಂದು ರಾಜ್ಯದ ಮಟ್ಟಿಗೆ ಸೀಮಿತವಾಗಿರುವುದಿಲ್ಲ. ಬದಲಾಗಿ ಸಂಪೂರ್ಣ ಉತ್ತರ ಭಾರತದ ಚಿತ್ರಣವನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಉತ್ತರ ಭಾರತದ ಹಿಂದುಳಿದ ವರ್ಗಗಳಲ್ಲಿ ಈಗಾಗಲೇ ಬಿಜೆಪಿ ಉತ್ತಮ ಹೆಸರನ್ನು ಪಡೆದಿದೆ. ಹಿಂದುತ್ವದ ಹೆಸರಿನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಜಾತಿ, ಉಪಜಾತಿಗಳಿಗೆ ನ್ಯಾಯ ಒದಗಿಸಬೇಕಾದ ಪ್ರಶ್ನೆಯೇ ಇಲ್ಲವಾಗಿಸಿದೆ. ಮೇಲ್ಜಾತಿಗಳಲ್ಲಿ ಬಿಜೆಪಿಯ ಹಿಡಿತ ಪ್ರಬಲವಾಗಿದ್ದರೂ, ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕ. ಈಗ ಜಾತಿಗಣತಿಯಿಂದಾಗಿ ಹಿಂದುತ್ವ ಎಂಬ ವಿಚಾರವನ್ನು ಮತದಾರರು ತರೆಮರೆ ಇದರಿಂದ ಬಿಜೆಪಿಗೆ ಹೆಚ್ಚಿನ ನಷ್ಟವಾಗಲಿದೆ.  ಕರ್ನಾಟಕದಲ್ಲಿಯೂ ಜಾತಿಗಣತಿ ಏನಾಯ್ತು? ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ, ಕರ್ನಾಟಕದಲ್ಲಿಯೂ ಜಾತಿಗಣತಿ ನಡೆದಿತ್ತು. ಆದರೆ, ಅದರ ವರದಿ ಇನ್ನೂ ಬಹಿರಂಗವಾಗಿಲ್ಲ. ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಅದನ್ನು ಬಹಿರಂಗಪಡಿಸುವ ಗೋಜಿಗೆ ಹೋಗಲಿಲ್ಲ. ಬರೋಬ್ಬರಿ 169 ಕೋಟಿ ಖರ್ಚು ಮಾಡಿ ನಡೆಸಿದಂತಹ ಜಾತಿಗಣತಿಯ ವರದಿ ವಿಧಾನಸೌಧದಲ್ಲಿ ಗೆದ್ದಲುಗಳಿಗೆ ಆಹಾರವಾಗುತ್ತಿದೆ.  ಜಾತಿಗಣತಿಯ ಆಧಾರದ ಮೇಲೆ ಎಸ್ ಟಿ ಸಮುದಾಯದ ಮೀಸಲಾತಿಯನ್ನು 7.5%ಕ್ಕೆ ಏರಿಸುವಂತೆ ಆಗ್ರಹಿಸಿ ನಿರಂತರ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ, ಈ ಕುರಿತಾಗಿ ಸರ್ಕಾರ ಎಳ್ಳಷ್ಟೂ ಆಸಕ್ತಿ ತೋರಿಸುತ್ತಿಲ್ಲ.  ಈಗ ಬಿಹಾರವೂ ಇಂತಹುದೇ ಒಂದು ಪರಿಸ್ಥಿತಿಯನ್ನು ಎದುರು ನೋಡುತ್ತಿದ್ದು, ಹಿಂದುಳಿದ ಮತ್ತು ಅತಿ ಹಿಂದುಳಿದ ಜಾತಿಗಳಿಗೆ ನ್ಯಾಯ ಒದಗಿಸುವ ಸಲುವಾಗಿ ನಡೆಸುವ ಜಾತಿಗಣತಿ ಕೇವಲ ರಾಜಕೀಯ ದಾಳವಾಗಿ ಉಳಿಯಬಾರದು. ಬದಲಾಗಿ, ಇದರ ವರದಿಯು ಸಾರ್ವಜನಿಕವಾಗಿ ಲಭ್ಯವಾಗಬೇಕು. ಸರ್ಕಾರದ ಯೋಜನೆಗಳು ಎಲ್ಲಾ ಜಾತಿ ಸಮುದಾಯಗಳಿಗೆ ಸರಿಸಮಾನಾಗಿ ಲಭಿಸಲು ಈ ಗಣತಿ ಸಹಕಾರಿಯಾಗಬೇಕು. ಬದಲಾಗಿ, ಕೇವಲ ರಾಜಕೀಯ ಮೇಲಾಟಕ್ಕೆ ಹಾಗೂ ಚುನಾವಣೆಗಳ ಸಂದರ್ಭದಲ್ಲಿ ಜಾತಿಯಾಧರಿತ ರಾಜಕಾರಣಕ್ಕಾಗಿ ಗಣತಿಯು ಮೀಸಲಾದರೆ, ಅದು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿ ಮಾತ್ರ ಉಳಿಯಲಿದೆ. 

Read moreDetails

ಕಾಶ್ಮೀರದಲ್ಲಿ ತಿಂಗಳೊಳಗೆ ಮೂವರು ಪೊಲೀಸರನ್ನು ಕೊಂದ ಉಗ್ರಗಾಮಿಗಳು.!

ಉಗ್ರಗಾಮಿಗಳನ್ನು ಸದೆ ಬಡಿಯುತ್ತೇನೆ, ಒಂದು ತಲೆಗೆ ಹತ್ತು ತಲೆ ತರುತ್ತೇನೆ ಎಂದೆಲ್ಲಾ ಭಾಷಣ ಮಾಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಭಯೋತ್ಪಾದನೆ, ಸೈನಿಕ ಪ್ರಾಣ...

Read moreDetails

ಶಾಲಾ ಮಕ್ಕಳಿಗೆ ಹಿಂದುತ್ವ ಪ್ರತಿಪಾದಕನ ಭಾಷಣ ಪಾಠ?: ರಾಜ್ಯದಲ್ಲಿ ಮತ್ತೊಂದು ವಿವಾದ ಆರಂಭ.!

ಶಾಲಾ ಶಿಕ್ಷಣದ ಮೂಲಕವೂ ಬಿಜೆಪಿ ಹಿಂದುತ್ವದ ನಂಜನ್ನು ಏರಿಸಲು ಹೋಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ಇದೀಗ ಕರ್ನಾಟಕದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮುನ್ನೆಲೆಗೆ ಬಂದಿದೆ. ರಾಷ್ಟ್ರೀಯ...

Read moreDetails

ಫೇಕ್ ವಿಡಿಯೋ ಹಂಚಿಕೊಂಡ ಕಿರಣ್ ಬೇಡಿ : ನೆಟ್ಟಿಗರಿಂದ ತರಾಟೆ!

ಮಾಜಿ ಐಪಿಎಸ್ ಅಧಿಕಾರಿ ಹಾಗೂ ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಫೇಕ್ ವಿಡಿಯೋ ಹಂಚಿಕೊಂಡ ಕಾರಣ ಟ್ರೋಲ್‌ಗೆ ಒಳಗಾಗಿದ್ದಾರೆ. ಹೌದು, ಸಮುದ್ರದ ಮಧ್ಯದಿಂದ...

Read moreDetails

ಬೆಂಗಳೂರಿನಲ್ಲಿ ಆರಂಭವಾಗಲಿದೆ ನಿಯೋ ರೈಲು ಸೇವೆ : ಏನಿದು ನಿಯೋ ರೈಲು?

ಸಿಲಿಕಾನ್ ಸಿಟಿಯಲ್ಲಿ ಸಂಚಾರಕ್ಕೆ ಮೆಟ್ರೋ ದಿ ಬೆಸ್ಟ್ ಚಾಯ್ಸ್. ಇದೀಗ ನಮ್ಮ ಮೆಟ್ರೋ ಮತ್ತೊಂದು ಹೆಜ್ಜೆ ಮುಂದೆ ಇಡುತ್ತಿದೆ. ಐಟಿ ಕಂಪನಿಗಳ ಸಹಭಾಗಿತ್ವದಲ್ಲಿ ದೇಶದಲ್ಲಿ ಮೊದಲ ಬಾರಿಗೆ...

Read moreDetails

ಕೇರಳ, ತೆಲಂಗಾಣದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಪ್ರಯತ್ನ

ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರವನ್ನು ಪಡೆಯಲು ಬಿಜೆಪಿ ಯಶಸ್ವಿಯಾಗಿದ್ದರೂ, ದಕ್ಷಿಣ ಭಾರತದಲ್ಲಿ ಮಾತ್ರ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಕರ್ನಾಟಕ, ಗೋವಾ ಹೊರತಾಗಿ ಬೇರೆ ಯಾವುದೇ ರಾಜ್ಯದಲ್ಲಿ ಅಧಿಕಾರಿ ಪಡೆಯಲು ಬಿಜೆಪಿ ವಿಫಲವಾಗಿದೆ. ಪ್ರಮುಖವಾಗಿ ಕೇರಳ ಹಾಗೂ ತೆಲಂಗಾಣದಲ್ಲಿ ಬಿಜೆಪಿ ಪ್ರದರ್ಶನ ಅತ್ಯಂತ ಕಳಪೆಯಾಗಿದ್ದು, ಈಗ ಈ ರಾಜ್ಯಗಳಲ್ಲಿ ಬಿಜೆಪಿಗೆ ಜೀವ ತುಂಬುವ ಪ್ರಯತ್ನ ನಡೆಸಲಾಗುತ್ತಿದೆ.  2016ರಲ್ಲಿ ಕೇರಳ ವಿಧಾನಸಭೆಗೆ ಬಿಜೆಪಿ ಮೊತ್ತಮೊದಲು ಪ್ರವೇಶ ಪಡೆದಿತ್ತು.2021ರಲ್ಲಿ ಆ ಸ್ಥಾನವನ್ನೂ ಕಳೆದುಕೊಂಡು ವಿಧಾನಸಭೆಯಲ್ಲಿ ಅಸ್ಥಿತ್ವವೇ ಇಲ್ಲದ ಪರಿಸ್ಥಿಗೆ ಬಿಜೆಪಿ ಇಳಿದಿದೆ. ಇನ್ನು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ತಮ್ಮನ್ನು ತಾವೇ ಮುಂದಿನ ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.  ಇವೆರಡೂ ರಾಜ್ಯಗಳಲ್ಲಿ ಬಿಜೆಪಿಯ ಪ್ರಭಾವ ಅಷ್ಟಕ್ಕಷ್ಟೇ. ಈ ಕಾರಣಕ್ಕೆ, ಕೇರಳ ಹಾಗು ತೆಲಂಗಾಣದಲ್ಲಿ ಬಿಜೆಪಿ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಲು ಹಾಗೂ ಮುಂಬರುವ ಚುನಾವಣೆಗಳಿಗೆ ತಯಾರಿಯಾಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಇಂದು ಮತ್ತು ನಾಳೆ ಭೇಟಿ ನೀಡಲಿದ್ದಾರೆ. ಈ ವೇಳೆ ಸರಣಿ ಸಭೆಗಳನ್ನು ನಡೆಸಿ, ಪಕ್ಷದ ಅಸ್ಥಿತ್ವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚೆ ನಡೆಸಲಿದ್ದಾರೆ.  ತೆಲಂಗಾಣದಲ್ಲಿ ಬಿಜೆಪಿ ಜೊತೆಗಿನ ವೈಮನಸ್ಯವನ್ನು ಟಿಆರ್ಎಸ್ ಮುಂದುವರೆಸಿದೆ. ಈ ಕಾರಣಕ್ಕೆ ಅಲ್ಲಿ ರೈತರ ಸಮಸ್ಯೆಗಳನ್ನು ಚುನಾವಣಾ ಸರಕಾಗಿಸಿ ಪ್ರಚಾರ ಪಡೆಯುವ ಕುರಿತು ಚಿಂತನೆ ನಡೆದಿದೆ. ಕಳೆದ ಚುನಾವಣೆಯಲ್ಲಿ ಕೇವಲ ಮೂರು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಸಫಲವಾಗಿದ್ದ ಬಿಜೆಪಿ, ಮುಂದಿನ ಚುನಾವಣೆಗೆ ಈಗಾಗಲೇ ನೀಲಿ ನಕ್ಷೆ ತಯಾರಿಸಿದೆ.  ಟಿಆರ್ಎಸ್ ಸರ್ಕಾರದ ವೈಫಲ್ಯಗಳು, ರೈತರ ಸಮಸ್ಯೆ ಹಾಗೂ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಕ್ಷೇತ್ರವಾರು ಪ್ರಚಾರಕ್ಕೆ ತಯಾರಿ ನಡೆಸಲಾಗಿದೆ. ಇದರೊಂದಿಗೆ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಸಲುವಾಗಿ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬಿಸಲು ಜೆ ಪಿ ನಡ್ಡಾ ಅವರು ಮೆಹಬೂಬ್ ನಗರದಲ್ಲಿ ಬಹಿರಂಗ ಸಮಾವೇಶವನ್ನೂ ಹಮ್ಮಿಕೊಳ್ಳಲಿದ್ದಾರೆ.  ಕೇರಳದ ಕಲ್ಲಿಕೋಟೆಯಲ್ಲಿಯೂ ಬಹಿರಂಗ ಸಮಾವೇಶವನ್ನು ಏರ್ಪಡಿಸಲಾಗಿದೆ. ಇಲ್ಲಿಯೂ ಪಕ್ಷದ ಪ್ರಮುಖರ ಸಭೆ ಕರೆದು, ಮುಂದಿನ ಲೋಕಸಭಾ ಹಾಗೂ ನಾಲ್ಕು ವರ್ಷಗಳ ನಂತರ ಬರುವ ವಿಧಾನಸಭಾ ಚುನಾವಣೆಗೆ ಈಗಿಂದಲೇ ತಯಾರಿ ನಡೆಸುವ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ವರದಿಯಾಗಿದೆ.  “ರಾಜ್ಯದ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ರಾಷ್ಟ್ರ ನಾಯಕರು ಆಗಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳಿಸುವ ಕುರಿತು ಚರ್ಚೆ ನಡೆಸಲಾಗುತ್ತದೆ,” ಎಂದು ಕೇರಳದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.  ಒಟ್ಟಿನಲ್ಲಿ, ನೆಲೆಯಿಲ್ಲದ ಕಡೆಗಳಲ್ಲಿ ಹೊಸತೊಂದು ನೆಲೆ ಕಂಡುಕೊಳ್ಳಲು ಬಿಜೆಪಿ ಶ್ರಮಪಡುತ್ತಿದೆ. ಎಡರಂಗ ಹಾಗು ಪ್ರಾದೇಶಿಕ ಪಕ್ಷದ ಪ್ರಭಾವವನ್ನು ಮೀರಿ ನಿಂತು ಸರ್ಕಾರ ರಚಿಸಲು ಬಿಜೆಪಿಗೆ ಸಾಧ್ಯವಾಗಬಹುದೇ ಎಂದು ಕಾದುನೋಡಬೇಕಿದೆ. 

Read moreDetails

ಮುಸ್ಲಿಂ ವ್ಯಾಪಾರಿ ಕಟ್ಟಿದ ಬಪ್ಪನಾಡು ದೇವಸ್ಥಾನ ಮತ್ತು ಇತಿಹಾಸ ತಿರುಚುವ ಹಿಂದುತ್ವ ರಾಜಕಾರಣ

ಕರಾವಳಿಯಲ್ಲಿ ಮುಸ್ಲಿಂ (ಬ್ಯಾರಿ) ವ್ಯಾಪಾರಿ ಕಟ್ಟಿದ ಬಪ್ಪನಾಡು ದೇವಿಯ ಕ್ಷೇತ್ರದ ಕತೆ ಜನಜನಿತವಾದದ್ದು ಯಕ್ಷಗಾನದ ಮೂಲಕ. ಇದೀಗ ಹಿಂದುತ್ವ ರಾಜಕಾರಣವು ಯಕ್ಷಗಾನದಲ್ಲೂ ಕರಾಳ ಪ್ರಭಾವ ಬೀರಿದ್ದು, ಚರಿತ್ರೆ...

Read moreDetails

ಹಲವು ಬಿಕ್ಕಟ್ಟುಗಳಲ್ಲಿ ನಲುಗುತ್ತಿರುವ ಭಾರತ ಮತ್ತು ಭಾರತೀಯರು : ಇದಕ್ಕೆ ಹೊಣೆ ಯಾರು?

ಮೋದಿ ಸರ್ಕಾರದ ನಿಲುವು ಮತ್ತು ದುರಾಡಳಿತದಿಂದ ದುಡಿಯುವ ಸಾಮರ್ಥ್ಯ ಇರುವ 90 ಕೋಟಿ ಭಾರತೀಯರನ್ನು ಹಲವು ಬಿಕ್ಕಟ್ಟಿಕೆ ಸಿಲುಕಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ವಿರೋಧ ಪಕ್ಷಗಳು ಆರೋಪಿಸಿ...

Read moreDetails

ಬ್ಯಾಕ್ ಟು ಸ್ಟಾರ್ಟ್ ಎಂದು ಟ್ವೀಟ್ ಮಾಡಿ ಸಂಚಲನ ಸೃಷ್ಟಿಸಿದ ಪ್ರಶಾಂತ್

ಕಾಂಗ್ರೆಸ್ ನೀಡಿದ ಆಫರ್ ಅನ್ನು ನಿರಾಕರಿಸಿದ ಬೆನ್ನಲ್ಲೇ ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಇದೀಗ...

Read moreDetails

ಇಂಧನಗಳ ಮೇಲಿನ ಸುಂಕ ಹೇರಿಕೆ ; ಹಾದಿ ತಪ್ಪಿಸುತ್ತಿರುವ ಪ್ರಧಾನಿ ಮೋದಿ ಹೇಳಿಕೆಗಳು

ವಿರೋಧಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಿದೆ ಎಂಬ ಪ್ರಧಾನಿಗಳ ಆರೋಪದ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಿಜೆಪಿ ಹೊರತು...

Read moreDetails

ಬೊಮ್ಮಾಯಿ ಸಂಪುಟ ಸೇರಲು ಶಾಸಕರಿಂದ ಹೈಲೆವೆಲ್ ಲಾಬಿ! : ಮೇ’ನಲ್ಲಿ ಕ್ಯಾಬಿನೆಟ್ ವಿಸ್ತರಣೆ ಸಾಧ್ಯತೆ?

ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ತಿಂಗಳು ಸಮೀಪಿಸುತ್ತಿದ್ದರೂ ಸಂಪುಟ ವಿಸ್ತರಣೆಗೆ ಸಮಯ ಕೂಡಿಬರುತ್ತಿಲ್ಲ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವ ಸಂದರ್ಭದಲ್ಲಾದರೂ ಸಂಪುಟ...

Read moreDetails
Page 2 of 15 1 2 3 15

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!