ವಿಶ್ವ ವಿಖ್ಯಾತ ಆಗ್ರಾದ ತಾಜ್ಮಹಲ್ನಲ್ಲಿ ಮುಚ್ಚಿರುವ 22 ಕೋಣೆಗಳನ್ನು ತೆರೆಯಬೇಕೆನ್ನುವ ಅರ್ಜಿಯೊಂದು ಅಲಹಾಬಾದ್ ನ್ಯಾಯಾಲಯದ ಮೆಟ್ಟಿಲೇರಿ ಸುದ್ದಿ ಮಾಡಿದ ಬೆನ್ನಲ್ಲೇ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಆ ಕೋಣೆಗಳ ಫೋಟೋಗಳನ್ನು ಬಿಡುಗಡೆ ಮಾಡಿದೆ.
ಹೌದು, ಮುಚ್ಚಿರುವ 22 ಕೋಣೆಗಳಲ್ಲಿ ಈ ಹಿಂದೆ ಮಾಡಲಾದ ಕಾಮಗಾರಿಯ ಫೋಟೋಗಳನ್ನು 2022ರ ಜನವರಿಯಲ್ಲೇ ಎಎಸ್ಐ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಅದರಲ್ಲಿ ಕಾಮಗಾರಿಗೂ ಮೊದಲು ಮತ್ತು ನಂತರ ಹೇಗೆ ಕಾಣಿಸುತ್ತಿದ್ದವು ಎನ್ನುವುದನ್ನು ವಿವರಿಸುವ ನಾಲ್ಕು ಫೋಟೋಗಳಿವೆ.
ಪ್ಲಾಸ್ಟರಿಂಗ್ ಮತ್ತು ಪೇಂಟಿಂಗ್ ಕೆಲಸ ಮಾಡಿರುವುದನ್ನು ಫೋಟೋಗಳಲ್ಲಿ ಕಾಣಸಿಗುತ್ತದೆ. ಈ ಕೊಠಡಿಗಳಲ್ಲಿ ಯಾವುದೇ ರಹಸ್ಯಗಳಿಲ್ಲ ಎಂದು ಈ ಹಿಂದೆಯೇ ಎಎಸ್ಐ ಅಧಿಕಾರಿಗಳು ಕೋರ್ಟ್ಗೆ ಮಾಹಿತಿ ನೀಡಿದ್ದರು.
ತಾಜ್ ಮಹಾಲ್ನ ಮುಚ್ಚಿದ 22 ಕೋಣೆಯನ್ನು ತೆಗರಸುವಂತೆ ಅಲಹಾಬಾದ್ ಹೈಕೋರ್ಟ್ಗೆ ಸಾವರ್ಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು ಅದನ್ನು ವಿಚಾರಣೆ ನಡೆಸಿದ ನ್ಯಾಯಾಲ, ಇದು ನಮ್ಮ ಕೆಲಸವಲ್ಲ ಪುರಾತತ್ವ ಇಲಾಖೆಯ ಕೆಲಸ ಇಂತಹ ಪ್ರಕರಣವನ್ನು ನೀವು ಅಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಅರ್ಜಿಯನ್ನು ವಜಾ ಮಾಡಿತ್ತು.