ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ವಿಧಾನಸೌಧದಲ್ಲಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮುಗಿಸಿ ಸಿಎಂ ಕಚೇರಿಗೆ ಬೀಗ ಹಾಕಲು ಯತ್ನಿಸಿದ ಹಿನ್ನೆಲೆಯಲ್ಲಿ ಪ್ರತಿಭಟನಾನಿರತರನ್ನು ಬಂಧಿಸಿಲಾಯಿತು.
“ಜನ ವಿರೋಧಿ, ರೈತ ವಿರೋಧಿ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ” ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಪಕ್ಷದ ವತಿಯಿಂದ ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರುಗಳ ಜೊತೆಗೂಡಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ರೈತರಿಗೆ ಬರ ಪರಿಹಾರ ನೀಡದ, ಅಭಿವೃದ್ಧಿ ವಿರೋಧಿ, ಜನ ವಿರೋಧಿ ರಾಜ್ಯ ಸರ್ಕಾರವಾಗಿದ್ದು, ಶಾಸಕರಿಗೆ ಅನುದಾನ ನೀಡುವ ವಿಚಾರದಲ್ಲೂ ತಾರತಮ್ಯವೆಸಗಿರುವ ಬೇಜಾವಾಬ್ದಾರಿ ಸರ್ಕಾರದ ನಿಲುವುಗಳನ್ನು ಖಂಡಿಸಲಾಯಿತು. ಬೊಕ್ಕಸ ಬರಿದು ಮಾಡಿಕೊಂಡು ವಿಧಾನ ಸೌಧ ಖಾಲಿ ಮಾಡಿಕೊಂಡು ದೆಹಲಿ ಚಲೋ ನಾಟಕ ಮಾಡುತ್ತಿರುವ ಸರ್ಕಾರ ಮುಖ್ಯಮಂತ್ರಿಗಳ ಕಛೇರಿಗೆ ಬೀಗ ಜಡಿಯುವಂತೆ ಆಗ್ರಹಿಸಲಾಯಿತು.

ಈ ಪ್ರತಿಭಟನೆ ಬಳಿಕ ಸಿಎಂ ಕಚೇರಿಗೆ ಬೀಗ ಹಾಕಲು ಬಿಜೆಪಿ ನಾಯಕರು ತೆರಳಿದರು. ವಿಧಾನಸೌಧದ ದಕ್ಷಿಣ ದ್ವಾರದ ಮೂಲಕ ಸಿಎಂ ಕಚೇರಿಗೆ ತೆರಳಲು ಮುಂದಾದ ಬಿಜೆಪಿ ನಾಯಕರು ಪೊಲೀಸರು ತಡೆಯಲು ಯತ್ನಿಸಿದರು. ಈ ವೇಳೆ ವಿಜಯೇಂದ್ರ, ಅಶೋಕ್ ಮತ್ತು ಬಿಜೆಪಿ ಶಾಸಕರು ಪೊಲೀಸರನ್ನು ತಳ್ಳಿ ಮುಂದೆ ಹೋದರು. ಆದರೆ ಎಚ್ಚೆತ್ತ ಪೊಲೀಸರು ದಕ್ಷಿಣ ದ್ವಾರ ಬಂದ್ ಮಾಡಿದರು. ಇದರಿಂದಾಗಿ ಪೊಲೀಸರ ಜೊತೆ ಬಿಜೆಪಿ ನಾಯಕರ ನೂಕಾಟ ತಳ್ಳಾಟ ಶುರುವಾಗಿ, ವಿಧಾನಸೌಧದ ದಕ್ಷಿಣ ದ್ವಾರದ ಬಳಿ ಹೈಡ್ರಾಮಾ ನಡೆಯಿತು.

ಅಲ್ಲದೇ ಈ ವೇಳೆ ಬಿಜೆಪಿ ನಾಯಕರನ್ನು ಬಲವಂತವಾಗಿ ಬಸ್ ತುಂಬಿ ಬಿಲ್ಲೆ ಪಡೆದ ಪೊಲೀಸರು, ವಿಧಾನಸೌಧದಿಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಮಾಜಿ ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿ ಶಾಸಕರನ್ನು ವಶಕ್ಕೆ ಪಡೆದು ಬಸ್ ನಲ್ಲಿ ಕರೆದೊಯ್ದರು. ಅಲ್ಲದೇ ದಕ್ಷಿಣ ದ್ವಾರದಲ್ಲಿ ಬೀಗ ಹಾಕಲು ಮುಂದಾದ ವಿಪಕ್ಷ ನಾಯಕ ಅಶೋಕ್ ಮತ್ತಿತರರನ್ನು ಸಹ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.
#BJPKarnataka #BSY #BYVijayendra #BJPProtest #INCKarnataka






