ಶರಾವತಿ ಹಿನ್ನೀರು ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಮಧು ಬಂಗಾರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಕಳೆದ 60 ವರ್ಷಗಳಿಂದ ಇದೇ ಕಾಂಗ್ರೆಸ್ ಇತ್ತೋ, ಸತ್ತಿತ್ತೋ ಎಂದು ಕಿಡಿಕಾರಿದ್ದಾರೆ.
ಎಲ್ಲ ಓಟಿನ ಬೇಟೆ, ಅದಕ್ಕಾಗಿ ಕಾಲ್ನಡಿಗೆ, ಬೇರೇನೂ ಇಲ್ಲ ಕಳೆದ 60 ವರ್ಷಗಳಿಂದ ಇದೇ ಕಾಂಗ್ರೆಸ್ ಇತ್ತೋ, ಸತ್ತಿತ್ತೋ ಎಂದು ಜನ ಕೇಳ್ಬೇಕಾಗುತ್ತೆ ಅವತ್ತಿನಿಂದ ಇದ್ದ ಸಮಸ್ಯೆ ಇದು 2016-17ರಲ್ಲಿ ಚುನಾವಣೆ ಗಿಮಿಕ್ ಮಾಡಿದ್ರು. ಕೇಂದ್ರ ಸರ್ಕಾರಕ್ಕೆ ತಿಳಿಸದೆ ಡಿನೋಟಿಫಿಕೇಶನ್ ಮಾಡಿದ್ರು ತಾಂತ್ರಿಕವಾಗಿ ಮಾಡಿದ ತಪ್ಪು ಇದು ಹೈಕೋರ್ಟ್ ಅದನ್ನು ರದ್ದು ಮಾಡಿದೆ ಎಂದು ತಿಳಿಸಿದ್ದಾರೆ.
ಮೇಲ್ಮನವಿ ಸಲ್ಲಿಸುವ ಪ್ರಶ್ನೆ ಇಲ್ಲ ನಾವೀಗ ಸಮಗ್ರ ಸರ್ವೆ ಮಾಡಿಸ್ತಿದ್ದೇವೆ ಒಟ್ಟಾರೆ ದಾಖಲೆ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳಿಸ್ತೇವೆ ಕೇಂದ್ರ ಸರ್ಕಾರದ ಗಮನಕ್ಕೆ ತಾರದೇ ಡಿನೋಟಿಫಿಕೇಶನ್ ಮಾಡಿರುವುದೇ ತಪ್ಪು. ಕೂಲಂಕುಷವಾಗಿ ದಾಖಲೆ ಪರಿಶೀಲನೆ ಮಾಡಿರಬೇಕಾಗಿರುವುದರಿಂದ ಸಮಯ ಆಗ್ತಿದೆ ದೋಷ ರಹಿತ ವರದಿ ಕಳಿಸಿದರೆ ವಾಪಸ್ ಬರುವ ಆತಂಕ ಇರೋದಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಮಂಗಳೂರು ಬ್ಲ್ಯಾಸ್ಟ್‌ನ ಪ್ರಮುಖ ಆರೋಪಿ ಶಂಕಿತ ಉಗ್ರ ಶಾರಿಖ್‌ಗೆ ಜೀವ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ನಾವು ಶಾರೀಖ್‌ಗೆ ಸಂಪೂರ್ಣ ರಕ್ಷಣೆ ಕೊಡ್ತೀವಿ ಗೃಹಸಚಿವನಾಗಿ ನನಗೂ ಆತನ ವಾರ್ಡಿಗೆ ಹೋಗಲಾಗಿಲ್ಲ ಅಲ್ಲಿ ಯಾರನ್ನೂ ಬಿಡೋದಿಲ್ಲ ಎಲ್ಲ ರೀತಿಯ ರಕ್ಷಣಾತ್ಮಕ ಉಪಕರಣಗಳನ್ನು ಅಲ್ಲಿ ಜೋಡಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ರೌಡಿ ಶೀಟರ್ ಸೈಲೆಂಟ್ ಸುನೀಲ್ ಭಾಗಿಯಾಗಿದ್ದ ಬಗ್ಗೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ ಆತನ ಬಗ್ಗೆ ನನಗೆ ಐಡಿಯಾ ಇಲ್ಲ ನಾನೂ ಈ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇನೆ ನಾನೂ ನಿನ್ನೆ ಇಡೀ ದಿನ ನನ್ನ ಕ್ಷೇತ್ರದ ಕಾರ್ಯಕ್ರಮದಲ್ಲಿ ಇದ್ದೆ ಈ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.