ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ದಿ ಕಾಶ್ಮೀರಿ ಫೈಲ್ಸ್ ಚಿತ್ರದ ಕುರಿತು ಟೀಕಿಸಿ ಚರ್ಚೆಗೆ ಗ್ರಾಸವಾಗಿದ್ದ ಇಸ್ರೇಲ್ ಮೂಲದ ನಿರ್ದೇಶಕ ನಾದವ್ ಲ್ಯಾಪಿಡ್ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಹೆಚ್ಚು ಓದಿದ ಸ್ಟೋರಿಗಳು
ಈ ವರ್ಷ ಬಿಡುಗಡೆಯಾಗಿ ತೀವ್ರ ಸದ್ದು ಮಾಡಿದ ದಿ ಕಾಶ್ಮೀರಿ ಫೈಲ್ಸ್ ಕೀಳು ಅಭಿರುಚಿಯ ಚಿತ್ರ ಮತ್ತು ಪ್ರಚಾರಕ್ಕಾಗಿ ಮಾಡಿರುವುದು ಎಂದು ಟೀಕಿಸಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ನಾನು ನನ್ನ ಹೇಳಿಕೆಯಿಂದ ಯಾರನ್ನು ಅವಮಾನಿಸಲು ಬಯಸಲಿಲ್ಲ ಮತ್ತು ಇನ್ನೊಬ್ಬರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾತನಾಡುವ ವೇಳೆ ನಾನು ಮೊದಲು ಹೇಳಿದ ಹಾಗೆ ಅದು ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗುವಂತಹ ಸಿನಿಮಾವಲ್ಲ. ಬೇಕಿದ್ದರೆ ಫ್ರೆಂಚ್ ಹಾಗೂ ಸ್ಪ್ಯಾನಿಷ್ ಜ್ಯೂರಿಯನ್ನು ಸಂಪರ್ಕಿಸಿ ಅವರ ಹೇಳಿಕೆಯನ್ನೂ ಪಡೆಯಿರಿ ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಪುನರುಚ್ಚರಿಸಿದ್ದಾರೆ.
#EXCLUSIVE | India Today grills IFFI jury chief #NadavLapid | @RahulKanwal | #TheKashmirFiles #ITLivestream
— IndiaToday (@IndiaToday) November 30, 2022
https://t.co/Bw0pgrnLAM