ಎಲೆಕ್ಟ್ರಿಕ್ ಬಸ್ಗಳು ಬಿಎಂಟಿಸಿಯನ್ನ ಉದ್ದಾರ ಮಾಡುವ ಬದಲಿಗೆ ಮುಳುಗಿಸ್ತವೆ ಅನ್ನೋ ಮಾತು ಕೇಳಿಬರ್ತಿದೆ. ಈ ಆರೋಪ ಇದೀಗ ನಿಜ ಎಂಬಂತ ಬೆಳವಣಿಗೆಗಳು ನಡೆಯುತ್ತಿದೆ. ಉದ್ದಾರ ಮಾಡಿ ಅಂದರೆ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿ, ವೋಲ್ವೋ ಬಸ್ ಗಳಿಗೆ ಒಂದು ಗತಿ ಕಾಣಿಸಲು ಮುಂದಾಗಿದೆ.
ಇಲೆಕ್ಟ್ರಿಕ್ ಬಸ್ ಗಳಿಗೆ ಮಣೆ!
ಮೊದಲಿಗೆ 90. ಆನಂತರ 300. ಈಗ 921. ಹೀಗೆ ಮೇಲಿಂದ ಮೇಲೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಖರೀದಿಸುತ್ತಿದೆ. ಆದರೆ ಈ ರೀತಿ ಜಿಸಿಸಿ ಮಾಡೆಲ್ ಅಡಿ ಎಲೆಕ್ಟ್ರಿಕ್ ಬಸ್ ಖರೀದಿಸಿದರೆ ನಿಗಮಕ್ಕೆ ಭಾರಿ ನಷ್ಟ ಸಂಭವಿಸುತ್ತೆ ಅನ್ನೋದೂ ಈಗಾಗಲೇ ಸಾಭೀತಾಗಿದೆ. ಈ ಹಿನ್ನಲೆಯಲ್ಲಿ ಖರೀದಿಸಿದ ಎಲೆಕ್ಟ್ರಿಕ್ ಬಸ್ಗಳನ್ನು ಯಾವ ರೂಟ್ನಲ್ಲಿ ಓಡಿಸೋದು ಅನ್ನೋದು ನಿಗಮಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ. ಇದಕ್ಕೀಗ ಒಂದು ಮಾರ್ಗ ಹುಡುಕಿರೋ ಬಿಎಂಟಿಸಿ ನಗರದಲ್ಲಿ ಐಟಿ ಬಿಟಿ ಕಂಪನಿಗಳಿಗೆ ಇನ್ಮುಂದೆ ಎಲೆಕ್ಟ್ರಿಕ್ ಬಸ್ಗಳನ್ನ ಗುತ್ತಿಗೆಗೆ ನೀಡೋ ತೀರ್ಮಾನಕ್ಕೆ ಬಂದಿವೆ. ಕಂಪನಿಗಳಲ್ಲಿ ವರ್ಕರ್ಸ್ ಟ್ರಾನ್ಸ್ ಪೋರ್ಟ್ಗಾಗಿ ಬಿಎಂಟಿಸಿಯಿಂದ ಬಸ್ಗಳನ್ನ ಲೀಸ್ ಪಡೆಯಲಾಗುತ್ತೆ. ಸಾಮಾನ್ಯವಾಗಿ ಇಷ್ಟು ದಿನ ಬಿಎಂಟಿಸಿಯ ಎಸಿ ವೋಲ್ವೋ ಬಸ್ಗಳನ್ನು ಖಾಸಗಿ ಕಂಪನಿಗಳಿಗೆ ಲೀಸ್ ನೀಡಲಾಗ್ತಿತ್ತು. ಆದರೀಗ ವೋಲ್ವೋ ಬದಿಗೊತ್ತಿ ಎಲೆಕ್ಟ್ರಿಕ್ ಬಸ್ ಮಾತ್ರ ನೀಡೋಕೆ ಬಿಎಂಟಿಸಿ ತೀರ್ಮಾನಿಸಿದೆ.
ಇಲೆಕ್ಟ್ರಿಕ್ ಬಸ್ ಮುಂದಿಟ್ಟು BMTCಯಿಂದ ಮತ್ತೊಂದು ಸಾಹಸ!
ಬಿಎಂಟಿಸಿ ಸದ್ಯ ಕೋಟಿ ಕೋಟಿ ವೆಚ್ಚಮಾಡಿ ಖರೀದಿಸಿದ ಎಲೆಕ್ಟ್ರಿಕ್ ಬಸ್ಗಳನ್ನು ಖಾಸಗಿ ಕಂಪನಿಗಳಿಗೆ ಲೀಸ್ ನೀಡುವ ಪ್ಲಾನ್ ಮಾಡಿದೆ. ಇದು ಬಸ್ ಖರೀದಿಸಿ ಡಿಪೋದಲ್ಲಿ ನಿಲ್ಲಿಸೋದನ್ನ ತಪ್ಪಿಸುತ್ತೆ. ಆದರೆ ನಿಗಮದ ಈ ತೀರ್ಮಾನದಿಂದ ವೋಲ್ವೋ ಬಸ್ಗಳು ಪೂರ್ಣ ಪ್ರಮಾಣದಲ್ಲಿ ಗುಜರಿಗೆ ಸೇರೋದು ಪಕ್ಕಾ ಆಗಿದೆ. ಸದ್ಯ ಬಿಎಂಟಿಸಿ ಬಳಿಯಲ್ಲಿ 750 ವೋಲ್ವೋ ಬಸ್ಗಳಿವೆ. ಇವುಗಳ ಪೈಕಿ ದರ ಇಳಿಕೆ ಮಾಡಿ 200 ಬಸ್ಗಳನ್ನು ರಸ್ತೆಗಿಳಿಸಲಾಗಿದೆ. ಉಳಿದಂತೆ 550 ಬಸ್ಗಳು ಈಗಲೂ ಧೂಳು ತಿನ್ನುತ್ತಾ ಡಿಪೋದಲ್ಲೇ ನಿಂತಿವೆ. ಈಗ ಖಾಸಗಿ ಕಂಪನಿಗಳು ವರ್ಕ್ ಫ್ರಂ ಹೋಂ ಕ್ಯಾನ್ಸಲ್ ಮಾಡಿ ವ್ರರ್ಕ್ ಫ್ರಂ ಆಫೀಸ್ ಮಾಡೋಕೆ ಮುಂದಾಗ್ತಿವೆ. ಹೀಗಾಗಿ ವೋಲ್ವೋ ಬಸ್ಗಳು ಮತ್ತೆ ಖಾಸಗಿ ಕಂಪನಿಗಳ ಸೇವೆಗೆ ನಿಯೋಜನೆಗೊಳ್ಳುವ ಸಾಧ್ಯತೆ ಹೆಚ್ಚಿತ್ತು. ಆದರೆ ಈ ವೋಲ್ವೋ ಬದಲಿಗೆ ಎಲೆಕ್ಟ್ರಿಕ್ ಬಸ್ಗಳು ಖಾಸಗಿ ಕಂಪನಿಗಳಿಗೆ ನೀಡೋಕೆ ನಿಗಮ ತೀರ್ಮಾನಿಸಿದ್ರಿಂದ ಈ 550 ಐಷಾರಾಮಿ ವೋಲ್ವೋ ಬಸ್ಗಳು ಸುಸಜ್ಜಿತವಾಗಿರುವಾಗಲೇ ಗುಜರಿಗೆ ಸೇರಿಕೊಳ್ಳೋ ಸಾಧ್ಯತೆ ಇದೆ.
ಒಟ್ಟಿನಲ್ಲಿ ಬಿಎಂಟಿಸಿ ಏನೋ ಎಲೆಕ್ಟ್ರಿಕ್ ಬಸ್ಗಳಿಗೆ ಒಂದು ದಾರಿ ತೋರಿಸ್ಬೇಕಂತ ಐಟಿ ಬಿಟಿ ಕಂಪನಿಗಳಿಗೆ ಬಸ್ ಗುತ್ತಿಗೆ ನೀಡಲು ನಿರ್ಧರಿಸಿದೆ. ಆದರೆ ಈ ತೀರ್ಮಾನದಿಂದ ಐಷಾರಾಮಿ, ಬಹುಕೋಟಿ ವೆಚ್ಚ ಮಾಡಿ ಖರೀದಿಸಿರುವ ವೋಲ್ವೋ ಬಸ್ಗಳು ಗುಜರಿ ಸೇರೋದು ಗ್ಯಾರೆಂಟಿಯಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ನಿಗಮ ಸಾರ್ವಜನಿಕರ ತೆರಿಗೆ ಹಣವನ್ನು ಹೀಗೇಕೆ ಪೋಲ್ ಮಾಡ್ಬೇಕು. ಇರುವ ಬಸ್ ಅನ್ನು ಬಳಸಿಕೊಳ್ಳುವ ಬದಲಾಗಿ ಈ ಹೊಸ ಹೊಸ ಪ್ರಯೋಗವೇಕೆ ಅನ್ನೋದು ಜನರ ಪ್ರಶ್ನೆಯಾಗಿದೆ.