ಕೇರಳದ ಮಲಪ್ಪುರಂ ಜಿಲ್ಲೆಯಿಂದ ಮತ್ತೊಂದು ಮಂಕಿಪಾಕ್ಸ್ ಪ್ರಕರಣವನ್ನು ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಜುಲೈ 27 ರಂದು ಯುಎಇಯಿಂದ ಬಂದ 30 ವರ್ಷದ ವ್ಯಕ್ತಿ ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೇರಳ ತನ್ನ ಮೊದಲ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯ ಸಾವನ್ನು ದೃಢಪಡಿಸಿದ ಎರಡು ದಿನಗಳ ನಂತರ, ಮಂಗಳವಾರ ಹೊಸ ಮಂಕಿಪಾಕ್ಸ್ ಕೇಸ್ ಪತ್ತೆಯಾಗಿದೆ.
ಈ ರೋಗಿಯ ಸಂಪರ್ಕದಲ್ಲಿದ್ದ ಅಪ್ಪ, ಅಮ್ಮ ಇಬ್ಬರು ಸ್ನೇಹಿತರ ಮೇಲೆ ಆರೋಗ್ಯ ಇಲಾಖೆ ನಿಗಾಇರಿಸಿದೆ. ಕೇರಳದಲ್ಲಿ ಈವರೆಗೆ ಐದು ಪ್ರಕರಣಗಳು ಪತ್ತೆಯಾಗಿದ್ದು, ಮೊದಲು ಆಸ್ಪತ್ರೆಗೆ ದಾಖಲಾಗಿದ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದ. ಇನ್ನುಳಿದ ರೋಗಿಗಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
“ರಾಜ್ಯದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. 30 ವರ್ಷದ ವ್ಯಕ್ತಿಯೊಬ್ಬರು ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಯುಎಇಯಿಂದ ಜುಲೈ 27 ರಂದು ಕೋಝಿಕೋಡ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಭಾರತ ಸರ್ಕಾರವು ಈಗ ಭಾರತದಲ್ಲಿ ಮಂಕಿಪಾಕ್ಸ್ನ ಕಾರ್ಯಪಡೆಯನ್ನು ರಚಿಸಿದೆ, ಡಾ ವಿಕೆ ಪಾಲ್ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರ ನೇತೃತ್ವದಲ್ಲಿ ಇತರ ಸದಸ್ಯರು ಅದರಲ್ಲಿದ್ದಾರೆ.
ಇದೀಗ ಭಾರತದಲ್ಲಿ ಪತ್ತೆಯಾಗಿರುವ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ 7ಕ್ಕೇರಿದೆ.