ದರ್ಶನ್ ಅಭಿಮಾನಿಗಳು ಕೈದಿ ನಂಬರ್ 6106 ಅಂತ ತಮ್ಮ ವಾಹನಗಳ ಮೇಲೆ ಸ್ಟಿಕ್ಕರ್ ಹಾಕಿಸುತ್ತಿದ್ದಾರೆ. ಈ ವಿಡಿಯೋಗಳು ತುಂಬಾನೇ ವೈರಲ್ ಆಗ್ತಿದೆ ಕೂಡ. ಇದೀಗ ಇದನ್ನೂ ಮೀರಿದ ಅತಿರೇಕದ ವರ್ತನೆಯೊಂದು ಬೆಳಕಿಗೆ ಬಂದಿದೆ.

ಆದ್ರೆ ಇದೀಗ ದರ್ಶನ್ ಅಭಿಮಾನಿಯೊಬ್ಬರ ಅಂಧಾಭಿಮಾನ ಸಾಕಷ್ಟು ಟೀಕೆಗೆ ಗುರಿಯಾಗಿದೆ. ತಾಯಿಯೇ ತನ್ಮ ಮಗುವಿಗೆ ಖೈದಿ ಗೆಟಪ್ ಹಾಕಿಸಿ, ಕೈದಿ ನಂಬರ್ 6106 ಅಂಥ ಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಮಗುವಿಗೆ ಇದೇ ಕೈದಿ ನಂಬರ್ ನ್ನೇ ಹೆಸರಿಟ್ಟಿದ್ದಾರಂಥೆ.

ಅಭಿಮಾನ ಇರಬೇಕು, ಆದ್ರೆ ಇಷ್ಟು ಅಂಧಾಭಿಮಾನ ಇರಬಾರದು ಎಂದು ತಾಯಿಯ ಈ ನಡೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಮಗುವಿನ ಭವಿಷ್ಯದ ಬಗ್ಗೆ ಚಿಂತಿಸದೆ ಇಂಥ ಕೆಲಸ ಮಾಡಿರುವ ತಾಯಿಗೆ ನೆಟ್ಟಿಗರು ಕ್ಲಾಸ್ ತಗೊಂಡಿದ್ದಾರೆ. ಅತಿಯಾದ್ರೆ ಅಮೃತವೂ ವಿಷ ಎಂಬಂತಾಗಿದೆ ಕೆಲ ದರ್ಶನ್ ಅಭಿಮಾನಿಗಳ ನಡೆ.