ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೊಷಣೆಯಾಗಿದೆ ಎಂದು ಟೀಕಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಎದುರು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌದಕ್ಕೆ ಹೋಗಲು ನಮ್ಮನ್ನು ಬಿಡ್ತಿಲ್ಲ, ಜೈಶ್ರೀರಾಮ್ ಅಂದ್ರೆ ಪ್ರಜ್ಞೆ ತಪ್ಪಿ ಬೀಳ್ತಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡ್ತಿದೆ. ರಾಜ್ಯದ ಜನರ, ರೈತರ ಪಾಲಿಗೆ ಸರ್ಕಾರ ಇದ್ದು ಕೂಡ ಸತ್ತಾಂತಾಗಿದೆ. ಭಿಕ್ಷೆ ಕೊಟ್ಟಂತೆ ಸಾವಿರ ಕೊಟ್ಟಿದ್ದಾರೆ ಅದನ್ನ ಮುಟ್ಟಿಲ್ಲಾ, ರಾಜ್ಯದಲ್ಲೇ ಹತ್ತಾರು ಸಮಸ್ಯೆಗಳಿದ್ದರೂ, ದೆಹಲಿಯಲ್ಲಿ ಶೋಕಿ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೆಂದ್ರ ಸರ್ಕಾರ ಅಂಕಿ ಅಂಶ ಬಿಟ್ಟಿಲ್ಲಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಕೇವಲ 80 ಸಾವಿರ ಕೋಟಿ ಕೊಟ್ಟಿದೆ. ಸಿಎಂ ಯಾಕಾದ್ರು ಸಿಎಂ ಆದೆ ಅಂತಾ ತಲೆ ಚಚ್ಚಿಕೊಳ್ತಿದ್ದಾರೆ, ಕೈ ಕಟ್ಟಿಹಾಕಿಕೊಂಡಿದ್ದಾರೆ. ಸುಳ್ಳನ್ನ ಹೇಳಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕಂತಾ ಅಂದುಕೊಂಡಿದ್ದಾರೆ. ರಾಜ್ಯ ಸರ್ಕಾರ ಆಡಳಿತ ನಡೆಸುವ ಪಕ್ಷ ನೀವು ಮೊದಲು ರೈತರಿಗೆ ಹಣ ಬಿಡುಗಡೆ ಮಾಡಿ. ಉತ್ತರ ಕೊಡೋದಕ್ಕೆ ಆಗೊಲ್ಲಾ ಅಂತಾ ಬೂಟಾಟಿಕೆ ಆಡ್ತಿದ್ದಾರೆ. ಕೇಂದ್ರ ಸರ್ಕಾರದ ಅನುದಾನ ಕಾಯದೆ ನಾವು ಈ ಹಿಂದೆ ಅನುದಾನ ಕೊಟ್ಟಿದ್ವು, ಮೇಕೆದಾಟು ಬಗ್ಗೆ ಹೋರಟ ಮಾಡ್ತಿದ್ದ ಡಿ.ಕೆ. ಶಿವಕುಮಾರ್ ಎಲ್ಲಿ ಹೋಗಿದ್ದಾರೆ? ಕಾಗೆ ಹಾರಿಸುವ ಕೆಲಸ ಮಾಡ್ತಿದ್ದಾರೆ ಕಾಂಗ್ರೆಸ್ನವರು ಎಂದು ಟೀಕಿಸಿದರು.
#BYVijayendra #BJPProtest #Congress #Siddaramaiah #INCProtest






