ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (America president election) ಇನ್ನೇನು ಕೆಲವೇ ಗಂಟೆ ಬಾಕಿಯಿದ್ದು, ಪ್ರಚಾರ ಕಾರ್ಯ ಭರ್ಜರಿಯಾಗಿ ಸಾಗಿದೆ. ಒಂದೆಡೆ ಡೊನಾಲ್ಡ್ ಟ್ರಂಪ್ (Donald trump) ಮತ್ತೊಂದೆಡೆ ಕಮಲಾ ಹ್ಯಾರಿಸ್ (Kamala haris) ಚುನಾವಣೆ ಗೆಲುವಿಗಾಗಿ ಎರಡೂ ಪಕ್ಷಗಳಿಂದ ಎಲ್ಲಾ ರೀತಿಯ ಹೋರಾಟ ನಡೆಯುತ್ತಿದೆ.
ಇದೇ ನವೆಂಬರ್ 5, ಅಂದ್ರೆ ನಾಳೆ ಅಮೆರಿಕದ ಚುನಾವಣೆಗೆ ಮತದಾನ ನಡೆಯಲಿದ್ದು, ಮರು ದಿನವೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಕೂಡ ಹೊರ ಬೀಳಲಿದೆ. ಗೆಲುವಿಗಾಗಿ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಸಖತ್ ಹೋರಾಟ ನಡೆಸುತ್ತಿದ್ದಾರೆ.
ಇತ್ತ ಭಾರತದಲ್ಲಿ (India) ಟ್ರಂಪ್ ಗೆಲುವಿಗಾಗಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಗ್ತಿದೆ. ದೆಹಲಿಯಲ್ಲಿ ಮಹಾಮಂಡಲೇಶ್ವರ ಸ್ವಾಮೀಜಿ ಟ್ರಂಪ್ ಭಾವಚಿತ್ರವನ್ನು ಹಿಡಿದು ಪೂಜೆ ಮಾಡಿದ್ದಾರೆ. ಈ ಹಿಂದೆ ಕಮಲಾ ಹ್ಯಾರಿಸ್ ಗೆಲುವಿಗೆ ತೆಲಂಗಾಣದಲ್ಲಿ 11 ದಿನಗಳ ವಿಶೇಷ ಪೂಜೆ ಸಲ್ಲಿಸಲಾಗಿತ್ತು.