ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿ ಇಂದಿಗೆ (ನವೆಂಬರ್ 24, 2018) ನಾಲ್ಕು ವರ್ಷಗಳಾಗಿವೆ. ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಲು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಜಮಾಯಿಸಿ ತಮ್ಮ ನೆಚ್ಚಿನ ನಟನನ್ನು ಸ್ಮರಿಸಿದ್ದಾರೆ.
ಇನ್ನು ಪತಿಯನ್ನು ನೆನೆದು ಮಂಡ್ಯ ಸಂಸದೆ ಸುಮಲತಾ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಂತರಾಳದ ನಮನ ಅಂಬಿ ಅಮರ ಎಂದು ಬರೆದುಕೊಂಡಿದ್ದಾರೆ.
24 ನವೆಂಬರ್ 2018ರಂದು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅಂಬರೀಶ್ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಂತರಾಳದ ನಮನ.
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) November 24, 2022
'ಅಂಬಿ ಅಮರ'.
🙏❤️🙏❤️🙏❤️🙏#Ambareesh #RebelStar #RebelstarAmbareesh#AmbiAmara pic.twitter.com/DhCtWKocRo