ದೇಶದಲ್ಲಿ ಶನಿವಾರ ಮತ್ತೊಂದು ಡಿಜಿಟಲ್ ಕ್ರಾಂತಿಯಾಗಿದ್ದು 4 ಮಹಾನಗರ ಸೇರಿದಂತೆ 8ನಗರಗಳಲ್ಲಿ 5G ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಇನ್ನು ಈ ಕುರಿತು ಪ್ರಕಟಣೆಯನ್ನ ಹೊರಡಿಸಿರುವ ಜಿಯೋ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ 2023ರ ವರ್ಷಾಂತ್ಯದ ವೇಳೆಗೆ ದೇಶಾದ್ಯಂತ 5ಜಿ ಸೇವೆಗಳನ್ನು ಶುರು ಮಾಡುವುದಾಗಿ ಘೋಷಿಸಿದ್ದಾರೆ.
ಇಂಡಿಯನ್ ಮೊಬೈಲ್ ಕಾಂಗ್ರೆಸ್(IMC) ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖೇಶ್ ಅಂಬಾನಿ 2023ರ ಡಿಸೆಂಬರ್ ವೇಳೆಗೆ ಜಿಯೋ ಅಗ್ಗದ ದರದಲ್ಲಿ 5ಜಿ ಸೇವೆಯನ್ನು ದೇಶದ ಮೂಲೆ ಮೂಲೆಗೂ ತಲುಪಿಸುತ್ತದೆ ಎಂದಿದ್ದಾರೆ.