ಪುಷ್ಪ ೨ (Pushpa 2) ಪ್ರೀಮಿಯರ್ ಶೋ ವೇಳೆ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ (Allu Arjun) ರನ್ನ ಬಂಧಿಸಲಾಗಿತ್ತು. ಆ ನಂತರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.
ಆದ್ರೆ ಹೈಕೋರ್ಟ್ ನಲ್ಲಿ (Highcourt) ಮಧ್ಯಂತರ ಜಾಮೀನು ಸಿಕ್ಕ ಹಿನ್ನಲೆ ಸೆರೆ ವಾಸದಿಂದ ಪಾರಾಗಿದ್ದರು. ಆದ್ರೆ ನೆನ್ನೆಯೇ ಮಧ್ಯಂತರ ಜಾಮೀನು ಸಿಕ್ಕಿದ್ರೂ ಕೂಡ ಅಲ್ಲು ಅರ್ಜುನ್ ತಕ್ಷಣ ಜೈಲಿಂದ ಯಾಕೆ ಬಿಡುಗಡೆಯಾಗಿಲ್ಲ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಇದ್ದಕ್ಕೆ ಕಾರಣವೇನಂದ್ರೆ ಹೈಕೋರ್ಟ್ ನ ಮಧ್ಯಂತರ ಜಾಮೀನು ಆದೇಶದ ಪ್ರತಿ ನೆನ್ನೆ ರಾತ್ರಿವರೆಗೂ ಜೈಲು ಅಧಿಕಾರಿಗಳಿಗೆ ತಲುಪಿರಲಿಲ್ಲ ಹಾಗೂ ಮಧ್ಯಂತರ ಜಾಮೀನು ಆದೇಶದಲ್ಲಿ ಸ್ವಲ್ಪ ದೋಷಗಳಿತ್ತು. ಹೀಗಾಗಿ ಬಳಿಕ ಹೊಸದಾಗಿ ಮಧ್ಯಂತರ ಜಾಮೀನು ಆದೇಶ ಹೊರಡಿಸಿ ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಉಲ್ಲೇಖಿಸಲಾಗಿತ್ತು.
ಆದ್ರೆ ಈ ಹೊಸ ಜಾಮೀನು ಆದೇಶದ ಪ್ರತಿ ತಡರಾತ್ರಿ ಜೈಲು ಅಧಿಕಾರಿಗಳಿಗೆ ತಲುಪಿದ್ದು ನಿನ್ನೆ ಅವರನ್ನು ಬಿಡುಗಡೆಗೊಳಿಸಲು ಸಾಧ್ಯವಾಗಿಲ್ಲ.ಈ ಹಿನ್ನಲೆ ಇಂದು ಬೆಳಿಗ್ಗೆ 6.40 ಕ್ಕೆ ಅಲ್ಲು ಅರ್ಜುನ್ ರನ್ನು ಜೈಲು ಅಧಿಕಾರಿಗಳು ಜೈಲಿನಿಂದ ಬಿಡುಗಡೆ ಮಾಡಿದ್ದಾರೆ.