ತನ್ನದೇ ಮನೆಯಲ್ಲಿ ಅತ್ಯಾಚಾರ ಎಸಗಿದ ರಾಜಕೀಯ ಮುಖಂಡನನ್ನು ಕೂಡಿ ಹಾಕಿದ ಗಗನಸಖಿ ಪೊಲೀಸರಿಗೆ ದೂರು ನೀಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ದಕ್ಷಿಣ ದೆಹಲಿಯ (South Delhi) ಮೆಹ್ರೌಲಿ ಪ್ರದೇಶದಲ್ಲಿ ನಡೆದಿದ್ದು, ರಾಜಕೀಯ ಪಕ್ಷವೊಂದರ ಬ್ಲಾಕ್ ಘಟಕದ ಅಧ್ಯಕ್ಷನಾಗಿರುವ ಹರ್ಜೀತ್ ಯಾದವ್ ಬಂಧಿತ ವ್ಯಕ್ತಿ.
ಕಳೆದ ಒಂದೂವರೆ ತಿಂಗಳ ಹಿಂದೆ ಪರಿಚಯವಾಗಿದ್ದ ವ್ಯಕ್ತಿ ಕುಡಿದು ಮನೆಗೆ ಬಂದು ಅತ್ಯಾಚಾರ ಎಸಗಿದ್ದಾನೆ. ಕೂಡಲೇ ಆತನನ್ನು ಕೂಡಿ ಹಾಕಿದ ಗಗನಸಖಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ.
ಭಾನುವಾರ ನಮಗೆ ೧೧೨ ಸಂಖ್ಯೆಗೆ ಅತ್ಯಾಚಾರ ದೂರು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದಾಗ ಹರ್ಷಿತ್ ಯಾದವ್ ಕೊಠಡಿಯಲ್ಲಿ ಬಂಧಿತನಾಗಿದ್ದ. ಕೂಡಲೇ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
೩೦ ವರ್ಷದ ಗಗನಸಖಿ ದೂರಿನ ಆಧಾರದ ಮೇಲೆ ಹರ್ಜಿತ್ ನನ್ನು ಬಂಧಿಸಿರುವ ಮೆಹ್ರೌಲಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.