ಕೊರೊನಾವೈರಸ್, ಮಂಕಿಪಾಕ್ಸ್ ಭೀತಿ ನಡುವೆ ಇದೀಗ ಕೇರಳದಲ್ಲಿ ಇದೀಗ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದೆ.
ದೇವರನಾಡು ಕೇರಳದ ಕಣ್ಣೂರು ಹಾಗೂ ವಯಾನಾಡ್ ಜಿಲ್ಲೆಗಳಲ್ಲಿ ಆಫ್ರಿಕನ್ ಹಂದಿ ಜ್ಷರ ಪ್ರಕರಣಗಳು ಪತ್ತೆಯಾಗಿದೆ.
ವಯನಾಡು ಜಿಲ್ಲೆಯ ನೆನ್ಮನಿ ಗ್ರಾಮದಲ್ಲಿ ಸೋಮವಾರ ಪ್ರಕರಣ ಪತ್ತೆಯಾಗಿದ್ದು ಹಂದಿ ಜ್ವರ ಹರಡದಂತೆ ಅಗತ್ಯ ಮುನ್ನೆಚ್ಚರಿಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಸ್ಥಳೀಯಾಡಳಿತ ನೆನ್ಮನಿ ಗ್ರಾಮದಲ್ಲಿರುವ 193 ಹಂದಿಗಳನ್ನು ಕೊಲ್ಲಲು ಸಿದ್ದತೆ ನಡೆಸಿದೆ. ಜಿಲ್ಲೆಯಲ್ಲಿರುವ ಸುಮಾರು 222 ಹಂದಿ ಫಾರ್ಮಗಳಲ್ಲಿ ಸಾಕಿರುವ ಸುಮಾರು 20 ಸಾವಿರಕ್ಕೂ ಹೆಚ್ಚು ಹಂದಿಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಜಿಲ್ಲಾಡಳಿತ ಅಗತ್ಯ ತಯಾರಿ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.