ಗೋವಾದಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪದ ಮೇಲೆ ಕರ್ನಾಟಕ ಮೂಲದ ಹುಸೇನ್ ಖಾನ್(40) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೇ 6ರಂದು ದಕ್ಷಿಣ ಗೋವಾದ ಸಾನ್ಟೊರ್ದಿಮ್ ಗ್ರಾಮದ ನಿರ್ಜನ ಪ್ರದೇಶದ ಬಳಿ ರೂಪಾ ಪಾರ್ಕರ್ ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿತ್ತು.
ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿರುವ ಹುಸೇನ್ ಮೃತ ದುರ್ದೈವಿ ರೂಪಾರನ್ನು ಡ್ರಾಪ್ ಮಾಡುವುದಾಗಿ ತನ್ನ ಕಾರಿಗೆ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರಾಡ್ನಿಂದ ಹಲ್ಲೆ ನಡೆಸಿ ಮಹಿಳೆ ಬಳಿಯಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ.
ಘಟನೆ ಕುರಿತು ಮಾತನಾಡಿರುವ ಡಿಸಿಪಿ ಅಭಿಷೇಕ್ ದಾನಿಯಾ ಕೊಲೆ ಮಾಡಿ ಮಹಿಳೆ ಬಳಿಯಿದ್ದ ಚಿನ್ನಾಭರಣಗಳನ್ನು ಕದ್ದ ನಂತರ ಹುಸೇನ್ ಒಡವೆಗಳನ್ನು ಮಾರಾಟ ಮಾಡಿ ಸಾಲವನ್ನು ತೀರಿಸಿ ಒಡಾಡಲು ಹೊಸ ಬೈಕ್ ಒಂದನ್ನು ಖರೀದಿಸಿದ್ದ. ಸಿಸಿಟಿವಿ ದೃಶ್ಯ ಹಾಗು ಆರೋಪಿಯ ಚಲನವಲನಗಳನ್ನು ಮೇಲೆ ನಿಗಾ ವಹಿಸಲಾಗಿತ್ತು ಕಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.