ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ʻವೀಕೆಂಡ್ ವಿತ್ ರಮೇಶ್ʼ ಸೀಸನ್ 5ರ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇಂದು ರಾತ್ರಿ 9ಕ್ಕೆ ʻವೀಕೆಂಡ್ ವಿತ್ ರಮೇಶ್ʼ ಕಾರ್ಯಕ್ರಮ ಪ್ರಸಾರವಾಗಲಿದೆ. ಎಂದಿನಂತೆ ಸ್ಯಾಂಡಲ್‌ವುಡ್‌ನ ಹಿರಿಯ ನಟ ರಮೇಶ್ ಅರವಿಂದ್ ಶೋ ನಡೆಸಿಕೊಡಲಿದ್ದಾರೆ. ಹೊಸ ಸೀಸನ್‌ನ ಮೊದಲ ಅತಿಥಿಯಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಬರಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ರಮ್ಯಾ ಅವರ ಜರ್ನಿಯ ನೆನಪನ್ನ ತೆರೆದಿಡಲಿದ್ದಾರೆ.

ರಮ್ಯಾ ಪಾಲ್ಗೊಂಡಿರುವ ಎಪಿಸೋಡ್ ಇಂದು ಮತ್ತು ನಾಳೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಈಗಾಗಲೇ ರಮ್ಯಾ ಶೋನಲ್ಲಿ ಭಾಗಿಯಾಗಿರೋ ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ʻವೀಕೆಂಡ್ ವಿತ್ ರಮೇಶ್ʼ ಕಾರ್ಯಕ್ರಮದಲ್ಲಿ ರಮ್ಯಾ ತಮ್ಮ ಜೀವನದ ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಅಮೃತಧಾರೆ ಸಿನಿಮಾದಲ್ಲಿ ನಡೆದಿದ್ದ ಘಟನೆ, ಅಪ್ಪು ಮೇಲಿನ ತಮ್ಮ ಪ್ರೀತಿ, ತಮ್ಮ ಬಾಲ್ಯ ಹೀಗೆ ಹಲವು ವಿಚಾರಗಳನ್ನು ರಮ್ಯಾ ಹೇಳಿಕೊಂಡಿದ್ದಾರೆ ಎನ್ನಲಾಗ್ತಿದೆ.
