ಸ್ಯಾಂಡಲ್ವುಡ್ ತಾರೆ ರಮ್ಯಾ (Sandalwood Queen Ramya) ತಮ್ಮ ಜನ್ಮದಿನವನ್ನು ಕೀನ್ಯಾದ (Keenya) ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ಆಚರಿಸಿಕೊಂಡಿದ್ದಾರೆ. ಅಭಿನಯದಿಂದ ದೂರ ಉಳಿದಿರುವ ರಮ್ಯಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಮ್ಯಾ ಗೆಳೆಯ ಸಂಜೀವ್ ಮೋಹನ್ (Sanjeev Mohan) ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರಮ್ಯಾ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ರಮ್ಯಾ ಅವರ ಕೆಲ ಫೋಟೋಗಳು ವೈರಲ್ ಆಗಿವೆ. ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಮೀಸಲು ಭಾಗದಲ್ಲಿ ಗೆಳೆಯರ ಜೊತೆ ಈ ಭಾಗದಲ್ಲಿ ಸುತ್ತಾಟ ನಡೆಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ.
ಪ್ರತಿ ಬಾರಿ ಜನ್ಮದಿನಕ್ಕೆ ಅವರು ನಾನಾ ಕಡೆಗಳಲ್ಲಿ ಸುತ್ತಾಟ ನಡೆಸುತ್ತಾರೆ, ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಅವರು ಫೋಟೋನ ಪೋಸ್ಟ್ ಮಾಡಲು ಇಚ್ಛಿಸುವುದಿಲ್ಲ. ಈಗಲೂ ರಮ್ಯಾ ಅವರು ಫೋಟೋನ ಪೋಸ್ಟ್ ಮಾಡಿಲ್ಲ. ಆದರೆ, ಅವರ ಗೆಳೆಯರಿಂದ ರಮ್ಯಾ ಅವರು ಕೀನ್ಯಾದಲ್ಲಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.
ರಮ್ಯಾ ಅವರ ಆಪ್ತ ಸಂಜೀವ್ ಮೋಹನ್ ಎಂಬುವವರು ಅವರ ಫೋಟೋನ ಪೋಸ್ಟ್ ಮಾಡಿದ್ದಾರೆ. ರಮ್ಯಾ ಅವರಿಗೆ ಸಂಜೀವ್ ಜೊತೆ ಒಳ್ಳೆಯ ಗೆಳೆತನ ಇದೆ. ಈ ಮೊದಲಿನಿಂದಲೂ ಸಂಜೀವ್ ಅವರು ಇನ್ಸ್ಟಾಗ್ರಾಮ್ನಲ್ಲಿ ರಮ್ಯಾ ಫೋಟೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ. ಈಗ ಹಂಚಿಕೊಂಡಿರೋ ಫೋಟೋ ಗಮನ ಸೆಳೆದಿದೆ.
‘ಹ್ಯಾಪಿ ಬರ್ತ್ಡೇ ದಿವು. ಯಾವಾಗಲೂ ಪ್ರೀತಿಸುತ್ತೇನೆ. ನಿಮ್ಮ ಜೊತೆ ಇರೋದು ಯಾವಾಗಲೂ ಸುಂದರವಾಗಿರುತ್ತದೆ’ ಎಂದು ಸಂಜೀವ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ಮಸಾಯಿ ಮಾರ, ಕೀನ್ಯಾ ಎಂದು ಲೊಕೇಶನ್ ನೀಡಿದ್ದಾರೆ. ಸದ್ಯ ಸಂಜೀವ್ ಅವರು ಕೀನ್ಯಾದಲ್ಲಿಯೇ ಇದ್ದಾರೆ. ಮಸಾಯಿ ಮಾರದಲ್ಲಿರುವ ಫೋಟೋಗಳನ್ನು ಸ್ಟೇಟಸ್ನಲ್ಲಿ ಹಂಚಿಕೊಳ್ಳುತ್ತಾ ಇದ್ದಾರೆ.