ಟಾಲಿವುಡ್ನ ಸೂಪರ್ ಸ್ಟಾರ್ ಮಹೇಶ್ ಬಾಬು ತಾಯಿ ಇಂದಿರಾ ದೇವಿ (70) ವಿಧಿವಶರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬುಧವಾರ ಬೆಳಗಿನ ಜಾವ 4:00 ಘಂಟೆಗೆ ನಿಧನರಾದರು ಮಧ್ಯಾಹ್ನ 12:00 ಘಂಟೆ ಸುಮಾರಿಗೆ ಅವರ ಅಂತ್ಯಸಂಸ್ಕಾರವನ್ನ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಹೇಶ್ ತಾಯಿ ಇಂದಿರಾ ದೇವಿ ನಿಧನಕ್ಕೆ ಸಿನಿಮಾ, ರಾಜಕೀಯ ಹಾಗೂ ಅಭಿಮಾನಿ ವರ್ಗದವರು ಕಂಬನಿ ಮಿಡಿದಿದ್ದಾರೆ.