ಬೆಂಗಳೂರು : ಕನ್ನಡ ಚಿತ್ರರಂಗದ ಧ್ರುವತಾರೆ, ಅಭಿಮಾನಿಗಳ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರ 51ನೇ ಹುಟ್ಟುಹಬ್ಬದ ಸಂಭ್ರಮ ಕಳೆಗಟ್ಟಿದೆ. ಕೇವಲ ಅಭಿಮಾನಿಗಳಿಗೆ ಹಬ್ಬವಲ್ಲ, ಇದೊಂದು ಸ್ಫೂರ್ತಿಯ ದಿನ. ಬೆಳ್ಳಿಪರದೆಯ ಮೇಲೆ ಪವರ್ ಸ್ಟಾರ್ ಆಗಿ ಅಬ್ಬರಿಸುತ್ತಿದ್ದರು. ನಿಜ ಜೀವನದಲ್ಲಿ ಮಾತ್ರ ಅಪ್ಪಟ ಚಿನ್ನದಂತಹ ಮನುಷ್ಯನಾಗಿಯೇ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ.

ಹೀಗೆ ಜನರ ಮನಗೆದ್ದು ಪ್ರೀತಿಯ ಅಪ್ಪು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ನೆನಪು ಅಪಾರ ಅಭಿಮಾನಿಗಳಲ್ಲಿದೆ. ಆದರೆ ತಮ್ಮ ಸಹೋದರ ಹಾಗೂ ದಿ. ನಟ ಪುನೀತ್ ರಾಜ್‌ಕುಮಾರ್ ಅವರಿಗೆ ನಟ ಡಾ. ಶಿವರಾಜ್ ಕುಮಾರ್ ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಇದನ್ನೂ ಓದಿ : ಷೇರು ಮಾರುಕಟ್ಟೆಯ ಕೆಟ್ಟ ಸುದ್ದಿ: ಇಲ್ಲಿದೆ ಭಾರತೀಯ ಷೇರು ಮಾರುಕಟ್ಟೆಗೆ ಎಚ್ಚರಿಕೆ

ಸ್ಟಾರ್ ಗಿರಿಯ ಹಮ್ಮಿಲ್ಲದ ಸರಳತೆ, ಕಷ್ಟ ಅಂದವರಿಗೆ ಸ್ಪಂದಿಸುವ ಕರುಣಾಳು ಮನಸ್ಸು ಮತ್ತು ಸದಾ ನಗುಮುಖದಿಂದಲೇ ಎಲ್ಲರನ್ನೂ ಆವರಿಸಿಕೊಳ್ಳುತ್ತಿದ್ದರು ಎಂದು ಅಪ್ಪುವನ್ನು ಶಿವರಾಜ್ ಕುಮಾರ್ ಸ್ಮರಿಸಿದ್ದಾರೆ.






