ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ಎಲ್ಲರಿಗೂ ತಿಳಿದಿರೋ ವಿಚಾರ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್ ಹಾಗೂ ಅವಿವಾ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದ್ದು ಇಲ್ಲಿ ಅರೇಂಜ್ ಮಾಡಲಾದ ವೇದಿಕೆ ಟಾಕ್ ಆಫ್ ದಿ ಟೌನ್ ಆಗಿದೆ.
ಭಾರತದಲ್ಲೇ ಮೊದಲ ಬಾರಿಗೆ ಇಂತಹದ್ದೊಂದು ವೇದಿಕೆ ನಿರ್ಮಾಣ ಮಾಡಲಾಗಿದೆ ಎನ್ನಲಾಗ್ತಾ ಇದ್ದು ವೇದಿಕೆಯ ಅಲಂಕಾರಕ್ಕೆ ದೆಹಲಿಯಿಂದ ಪರಿಕರಗಳನ್ನು ತರಿಸಲಾಗಿದೆಯಂತೆ,. ವಿಶೇಷ ಥೀಮ್ನಲ್ಲಿ ಈ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ವೇದಿಕೆ ನಿರ್ಮಾಣಕ್ಕೆ ಬಹಳ ದಿನಗಳಿಂದ ತಯಾರಿ ನಡೆದಿದ್ದು ಸಾಕಷ್ಟು ಶ್ರಮದ ಬಳಿಕ ಈ ಅಪರೂಪದ ವೇದಿಕೆ ಸಿದ್ಧಗೊಂಡಿದೆ.
ಇಂದು ನಡೆಯುತ್ತಿರುವ ಅದ್ಧೂರಿ ರಿಸೆಪ್ಶನ್ ಕಾರ್ಯಕ್ರಮದಲ್ಲಿ ಮಾಧ್ಯಮ ಲೋಕದ ಅತಿಥಿಗಳು, ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಭಾಗಿಯಾಗುತ್ತಿದ್ದಾರೆ.