ಉತ್ತರಪ್ರದೇಶ: ಜಿಲ್ಲೆಯಲ್ಲಿ ಮೂಢನಂಬಿಕೆಯಿಂದ ಒಂದು ಹತ್ಯೆ ನಡೆದಿದೆ. ಮಕ್ಕಳಾಗದ ಕಾರಣಕ್ಕಾಗಿ ಯುವಕನೊಬ್ಬ ತನ್ನ ಪಕ್ಕದ ಮನೆಯ 7 ವರ್ಷದ ಬಾಲಕನನ್ನು ಹತ್ಯೆ ಮಾಡಿದ ಘಟನೆ ನಡೆದಿದ್ದು, ಇದನ್ನು ತಾಂತ್ರಿಕರ ಸಲಹೆಯ ಮೇರೆಗೆ ಎಸಗಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು, ತಾಂತ್ರಿಕನ ಪತ್ತೆಗೆ ಶೋಧ ಮುಂದುವರೆದಿದೆ.
ಭಿಂಗಾ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ತಿಳಿಸಿದ ಪ್ರಕಾರ, ಈ ಘಟನೆ ಹರದತ್ತನಗರ ಗಿರಾಂತ್ ಠಾಣಾ ವ್ಯಾಪ್ತಿಯ ಛೇಡಾ ಗ್ರಾಮ ಬೇಗಂಪುರದಲ್ಲಿ ನಡೆದಿದ್ದು, ಆರೋಪಿ ದೀಪು ತನ್ನ ವಿವಾಹ ಮೂರು ವರ್ಷಗಳ ಹಿಂದೆ ನಡೆದಿತ್ತು ಎಂದು ಹೇಳಿದ್ದಾರೆ. ದಂಪತಿಗೆ ಮಕ್ಕಳಾಗದೇ, ಪತ್ನಿ ಎರಡು ಬಾರಿ ಗರ್ಭಿಣಿಯಾದರೂ ಗರ್ಭಪಾತವಾಗಿದ್ದರಿಂದ ತೀವ್ರ ನಿರಾಸೆಯಲ್ಲಿದ್ದೆ ಎಂದು ದೀಪು ಪೊಲೀಸ್ ವಿಚಾರಣೆಯಲ್ಲಿ ಹೇಳಿದ್ದಾರೆ.
ಆರೋಪಿಯ ಪ್ರಕಾರ, ತಾಂತ್ರಿಕರು ಮಕ್ಕಳಾಗದ ಕಾರಣಕ್ಕೆ ಪಕ್ಕದ ಮನೆಯವರು ಮಾಟ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ. ಮೆಲೇರಾಮ್ ಮತ್ತು ಅವರ ಪತ್ನಿ ಪೂನಂ ಈ ಬಗ್ಗೆ ಪಕ್ಕದ ಮನೆಯವರ ಮೇಲೆ ದ್ವೇಷ ಹೊಂದಿದ್ದರು, ಡಿ.10 ರಂದು ಸಿಟ್ಟಿನಿಂದ, ಮೆಲೇರಾಮ್ ಅವರ ಮಗ ಅರುಣ್ (07) ಎಂಬಾತನನ್ನು ಅಂಗಡಿಗೆ ಕರೆದುಕೊಂಡು ಹೋಗಿ, ಕತ್ತು ಹಿಸುಕಿ ಕೊಂದಿದ್ದಾಗಿ ದೀಪು ಒಪ್ಪಿಕೊಂಡಿದ್ದಾರೆ. ಪೊಲೀಸರು ಆರೋಪಿ ದೀಪು ಅವರನ್ನು 24 ಗಂಟೆಗಳ ಒಳಗಾಗಿ ಬಂಧಿಸಿದ್ದು, ತಾಂತ್ರಿಕನ ಪತ್ತೆಗೆ ವಿಶೇಷ ತಂಡವನ್ನು ನೇಮಿಸಲಾಗಿದೆ ಎಂದು ಸಿಒ ಸಂತೋಷ್ ಕುಮಾರ್ ತಿಳಿಸಿದ್ದಾರೆ.