• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

IBPS ಪರೀಕ್ಷೆ: 2014 ಕ್ಕೂ ಮುಂಚಿನ ನಿಯಮಾವಳಿಗಳ ಪುನರ್ ಜಾರಿಗೆ ಜಿಸಿ ಚಂದ್ರಶೇಖರ್‌ ಮನವಿ

ಪ್ರತಿಧ್ವನಿ by ಪ್ರತಿಧ್ವನಿ
July 3, 2021
in Uncategorized
0
IBPS ಪರೀಕ್ಷೆ: 2014 ಕ್ಕೂ ಮುಂಚಿನ ನಿಯಮಾವಳಿಗಳ ಪುನರ್ ಜಾರಿಗೆ ಜಿಸಿ ಚಂದ್ರಶೇಖರ್‌ ಮನವಿ
Share on WhatsAppShare on FacebookShare on Telegram

IBPS ಪರೀಕ್ಷೆಗಳಲ್ಲಿ 2014 ಕ್ಕೂ ಮುನ್ನ ಇದ್ದ ನೇಮಕಾತಿ ಕಟ್ಟಲೆಗಳನ್ನೇ ಜಾರಿಗೆ ತರಬೇಕು ಎಂದು ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್‌, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ಗೆ ಮನವಿ ಮಾಡಿದ್ದಾರೆ.

ADVERTISEMENT

ಅರ್ಥ ಸಚಿವೆಗೆ ಮನವಿ ಪತ್ರ ನೀಡಿದ ಕುರಿತು ಟ್ವೀಟ್‌ ಮಾಡಿರುವ  ಜಿಸಿ ಚಂದ್ರಶೇಖರ್‌, ʼIBPS ವಿಚಾರವಾಗಿ 2014 ಕ್ಕೂ ಮುಂಚಿನ ನಿಯಮಾವಳಿಗಳು ಪುನರ್ ಜಾರಿಯಾಗಬೇಕೆಂದು ಸಮಸ್ತ ಕನ್ನಡಿಗರ ಪರವಾಗಿ ಮಾನ್ಯ ನಿರ್ಮಲ ಸೀತಾರಾಮನ್ ರವರನ್ನು ಖುದ್ದು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದೇನೆ, ಅತಿ ಶೀಘ್ರವೇ ಈ ವಿಷಯ ಬಗೆಹರಿಸುವುದಾಗಿ  ಭರವಸೆ ನೀಡಿದ್ದಾರೆʼ ಎಂದು ತಿಳಿಸಿದ್ದಾರೆ.

2014 ಕ್ಕೂ ಹಿಂದಿನ ನಿಯಮಾವಳಿಗಳು ಪುನರ್‌ಜಾರಿಯಾಗುವುದರಿಂದ ಸ್ಥಳೀಯ ಭಾಷೆಯಲ್ಲಿ ಹಾಗೂ ಬೋರ್ಡ್‌ಗಳಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಪ್ರಯೋಜನವಾಗುತ್ತದೆ. ಬ್ಯಾಂಕ್‌ನ ಗ್ರಾಹಕರಿಗೂ ಸಹಕಾರಿಯಾಗುತ್ತದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕು (RRB-regional rural bank) ಗಳ ಗ್ರಾಹಕರು ಗ್ರಾಮೀಣ ಪ್ರದೇಶದವರೇ ಆಗಿರುವುದರಿಂದ ಅವರೊಡನೆ ಸಂವಹನ ನಡೆಸಲು ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕಗೊಳಿಸುವುದು ಹೆಚ್ಚು ಪ್ರಯೋಜನಾಕಾರಿ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

IBPS ಪರೀಕ್ಷೆಗಳಲ್ಲಿ 2014 ಕ್ಕೂ ಮುನ್ನ ಇದ್ದ ನೇಮಕಾತಿ ಕಟ್ಟಲೆಗಳನ್ನೇ ಜಾರಿಗೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಕೂಡಾ ಒತ್ತಾಯಿಸಿದ್ದರು.

ಕರ್ನಾಟಕದಲ್ಲಿ ಕನ್ನಡಿಗನಿಗೇ ಬ್ಯಾಂಕಿಂಗ್ ನೌಕರಿ ಸಿಗುವಂತೆ ಮಾಡಲು ಇದು ಅತ್ಯಗತ್ಯ. 2014 ಕ್ಕೆ ಮುನ್ನ ಕರ್ನಾಟಕದಲ್ಲಿನ ಬ್ಯಾಂಕ್ ಸಿಬ್ಬಂದಿಗೆ ಕನ್ನಡ ಗೊತ್ತಿರಬೇಕೆಂಬ ನಿಯಮವಿತ್ತು. ನಂತರ ಇದನ್ನು ತೆಗೆದು, ಕೆಲಸಕ್ಕೆ ಸೇರಿದ 6 ತಿಂಗಳಲ್ಲಿ ಕನ್ನಡ ಕಲಿಯಬೇಕೆಂದು ಹೇಳಲಾಯಿತು. ಇದರಿಂದಾಗಿ ರಾಜ್ಯದ ಬ್ಯಾಂಕ್ ಗಳಲ್ಲಿ ಕನ್ನಡ ತಿಳಿಯದವರೇ ತುಂಬಿದ್ದಾರೆ. ಇದು ಕನ್ನಡಿಗರಿಗೆ ಸಮಸ್ಯಾತ್ಮಕವಾಗಿದೆ.  2014ಕ್ಕೆ ಮೊದಲಿದ್ದ ಐಬಿಪಿಎಸ್ ಕಟ್ಟಲೆಗಳನ್ನು ಮರಳಿ ಜಾರಿಗೆ ತರುವುದೇ ಇದಕ್ಕೆ ಏಕೈಕ ಪರಿಹಾರ ಎಂದು ಕುಮಾರಸ್ವಾಮಿ ಹೇಳಿದ್ದರು.

ಇದೀಗ, ರಾಜ್ಯಸಭಾ ಸದಸ್ಯ ಜಿ ಚಂದ್ರಶೇಖರ್‌ ಕೂಡಾ ಈ ಬೇಡಿಕೆಗೆ ದನಿ ಸೇರಿಸಿದ್ದು, ನೇರವಾಗಿ ಅರ್ಥಸಚಿವರಿಗೆ ಮನವಿಯನ್ನು ಮಾಡಿದ್ದಾರೆ. ಜೊತೆಗೆ, ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ನ ಗ್ರಾಹಕರಿಗೆ ತಮ್ಮ ಠೇವಣಿ ಸಿಗುವಂತೆ ಮಾಡಿ ಎಂದೂ ನಿರ್ಮಲಾ ಸೀತರಾಮನ್‌ ಅವರಲ್ಲಿ ಮನವಿ ಮಾಡಿದ್ದಾರೆ.

ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ತಮ್ಮ ರಿಟೈರ್ಮೆಂಟ್ ಹಣವನ್ನು ಠೇವಣಿ ಮಾಡಿದ್ದ ಹಿರಿಯರು ಸೇರಿದಂತೆ 49 ಜನ ಈಗಾಗಲೇ ಮರಣಹೊಂದಿದ್ದು ಉಳಿದ ಗ್ರಾಹಕರ ಚಿಂತಾಜನಕ,ಅಸಹಾಯಕ ಸ್ಥಿತಿಯನ್ನು ತಿಳಿಸಿ ಆದಷ್ಟು ಬೇಗ ಅವರ ಕಷ್ಟದ ಹಣ ಸಿಗುವಂತೆ ಮಾಡಿ ಎಂದು ಮಾನ್ಯ ಹಣಕಾಸು ಸಚಿವರಲ್ಲಿ ಮನವಿ ಮಾಡಿದೆ. pic.twitter.com/PraRpmseB6

— GC ChandraShekhar (@GCC_MP) July 3, 2021

ʼಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ತಮ್ಮ ರಿಟೈರ್ಮೆಂಟ್ ಹಣವನ್ನು ಠೇವಣಿ ಮಾಡಿದ್ದ ಹಿರಿಯರು ಸೇರಿದಂತೆ 49 ಜನ ಈಗಾಗಲೇ ಮರಣಹೊಂದಿದ್ದು ಉಳಿದ ಗ್ರಾಹಕರ ಚಿಂತಾಜನಕ,ಅಸಹಾಯಕ ಸ್ಥಿತಿಯನ್ನು ತಿಳಿಸಿ ಆದಷ್ಟು ಬೇಗ ಅವರ ಕಷ್ಟದ ಹಣ ಸಿಗುವಂತೆ ಮಾಡಿ ಎಂದು ಮಾನ್ಯ ಹಣಕಾಸು ಸಚಿವರಲ್ಲಿ ಮನವಿ ಮಾಡಿರುವುದಾಗಿ ಜಿ ಸಿ ಚಂದ್ರಶೇಖರ್‌ ತಿಳಿಸಿದ್ದಾರೆ.

Previous Post

ಇನ್ನೊಂದು ಪಕ್ಷಕ್ಕೆ ಹೋಗುವುದು, ಮರಳುವುದು ರಾಜಕೀಯದಲ್ಲಿ ಸಾಮಾನ್ಯ: ಡಿ.ಕೆ. ಶಿವಕುಮಾರ್

Next Post

ರಾಜ್ಯದಲ್ಲಿ ಅನ್ ಲಾಕ್ 3.0 ಜಾರಿ: ಕರೋನ ಮಾರ್ಗಸೂಚಿ ಪಾಲಿಸಲು ರಾಜ್ಯ ಸರ್ಕಾರ ವಿನಂತಿ

Related Posts

ಮುಂದಿನ 5 ದಿನ ರಾಜ್ಯಾದ್ಯಂತ ಮಳೆ ಅಬ್ಬರ: ಬೆಂಗಳೂರಿಗೆ ಬಿ ಅಲರ್ಟ್‌!
Uncategorized

ಮುಂದಿನ 5 ದಿನ ರಾಜ್ಯಾದ್ಯಂತ ಮಳೆ ಅಬ್ಬರ: ಬೆಂಗಳೂರಿಗೆ ಬಿ ಅಲರ್ಟ್‌!

by ಪ್ರತಿಧ್ವನಿ
May 22, 2026
0

ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ...

Read moreDetails
BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

May 15, 2026
BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

May 14, 2026
ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

May 14, 2026
ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

May 14, 2026
Next Post
ರಾಜ್ಯದಲ್ಲಿ ಅನ್ ಲಾಕ್ 3.0 ಜಾರಿ: ಕರೋನ ಮಾರ್ಗಸೂಚಿ ಪಾಲಿಸಲು ರಾಜ್ಯ ಸರ್ಕಾರ ವಿನಂತಿ

ರಾಜ್ಯದಲ್ಲಿ ಅನ್ ಲಾಕ್ 3.0 ಜಾರಿ: ಕರೋನ ಮಾರ್ಗಸೂಚಿ ಪಾಲಿಸಲು ರಾಜ್ಯ ಸರ್ಕಾರ ವಿನಂತಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada