ಇತ್ತೀಚೆಗಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿದೆ. ತೆಲಂಗಾಣ, ಮಹಾರಾಷ್ಟ್ರ ಬಳಿಕ ಬಿಹಾರಕ್ಕೂ ತನ್ನ ನೆಲೆ ವಿಸ್ತರಿಸಿರುವ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಮುಂದಿನ ದಿನಗಳಲ್ಲಿ ಇಡೀ ದೇಶಾದ್ಯಂತ ಎಐಎಂಐಎಂ ಪಕ್ಷ ಸಂಘಟನೆ ಮಾಡುವ ಗುರಿ ಹಾಕಿಕೊಂಡಿದ್ದಾರೆ.
ಹೀಗಿರುವಾಗ ಓವೈಸಿ ಬಿಜೆಪಿ ಬಿ ಟೀಮ್, ಕಾಂಗ್ರೆಸ್ ಸೋಲಿಗೆ ಇವರೇ ಕಾರಣ ಎಂದು ಹಲವರು ದೂರುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೇ ಪಶ್ಚಿಮ ಬಂಗಾಳದ ನಂತರ ಹೈದರಾಬಾದ್ಗೆ ಭೇಟಿ ನೀಡಿರುವ ಬಿಜೆಪಿ ಯುವ ಮೋರ್ಚಾ ರಾಷ್ಟ್ರಾಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅಸಾದುದ್ದೀನ್ ಓವೈಸಿ ವಿರುದ್ಧ ಕುಟುಕಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೈದರಾಬಾದ್ನ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಬಿಜೆಪಿ ನಡೆಸುತ್ತಿರುವ ಪ್ರಚಾರ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಿದ್ದರು. ಈ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಇವರು, ಓವೈಸಿ ಮೊಹಮ್ಮದ್ ಅಲಿ ಜಿನ್ನಾ ಅವತಾರ. ಓವೈಸಿಗೆ ಹಾಕುವ ಒಂದೊಂದು ಮತವೂ ಭಾರತದ ವಿರುದ್ಧ ಎಂದು ಹೇಳಿದ್ದಾರೆ.
Also Read: ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಕರ್ತರಾದರೇ ಓವೈಸಿ ?
“ಭಾರತದಲ್ಲಿ ಓವೈಸಿ ಸಹೋದರರು ಕೋಮು ರಾಜಕಾರಣ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಅವಕಾಶ ನೀಡದೆ ರೋಹಿಂಗ್ಯಾ ಮುಸ್ಲಿಮರು ದೇಶದೊಳಗೆ ನುಸುಳುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ” ಎಂದು ತೇಜಸ್ವಿ ಆರೋಪಿಸಿದರು.
ಎಐಎಂಐಎಂ ನೀವು ಹೈದರಬಾದಿನಲ್ಲಿ ಮತ ಹಾಕಿದರೇ ಓವೈಸಿ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಕರ್ನಾಟಕದಲ್ಲೂ ಬಲಿಷ್ಠರಾಗಲೂ ಮುಂದಾಗುತ್ತಾರೆ. ಓವೈಸಿ ಜಿನ್ನಾನ ಹೊಸ ಅವತಾರ. ಯಾವುದೇ ಕಾರಣಕ್ಕೆ ಇಂತವರು ಬೆಳೆಯಲು ಬಿಡಬಾರದು. ಬಿಜೆಪಿಗೆ ನೀಡುವ ಪ್ರತಿಯೊಂದು ಮತ ಭಾರತ ಮತ್ತು ಹಿಂದುತ್ವದ ಪರ ಎಂದರು.
Also Read: ಬಿಹಾರ: ಯಾವುದೇ ಪಕ್ಷದ ‘ಬಿ’ ಟೀಂ ಆಗದೆ ಗೆಲುವು ಸಾಧಿಸಿರುವ ಓವೈಸಿಯ AIMIM