ಉತ್ತರ ಕನ್ನಡ : ಕಪ್ಪೆ ಚಿಪ್ಪು (Shells) ಸಂಗ್ರಹಿಸಲು ಹೋದ ಒಂದೇ ಕುಟುಂಬದ 8 ಜನರು ಜಲಸಮಾಧಿಯಾಗಿರುವ ಭೀಕರ ಅವಘಡ ಜಿಲ್ಲೆಯಲ್ಲಿ ಸಂಭವಿಸಿದೆ. ಭಟ್ಕಳದ ವೆಂಕಟಾಪುರ ನದಿಗೆ ತೆರಳಿದ್ದಾಗ ದಿಢೀರ್ ನೀರು ಏರಿಕೆಯಾಗಿ ದುರ್ಘಟನೆ ಸಂಭವಿಸಿದೆ.

ಇದರಲ್ಲಿ 8 ಜನರು ಮೃತಪಟ್ಟಿರುವ ಭಟ್ಕಳ ತಾಲೂಕಿನ ಶಿರಾಲಿ ತಟ್ಟಿ ಹಕ್ಕಲು ಪ್ರದೇಶದಲ್ಲಿ ಘಟನೆ ನಡೆದಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಒಟ್ಟು 11 ಮಂದಿ ಕಪ್ಪೆಚಿಪ್ಪು ತೆಗೆಯಲು ತೆರಳಿದ್ದರು. ಈ ಪೈಕಿ ಒಂದೇ ಕುಟುಂಬದ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನುಳಿದವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಸಾವನ್ನಪ್ಪಿದ ಎಂಟು ಜನರಲ್ಲಿ ಓರ್ವ ಪುರುಷ, 7 ಜನ ಮಹಿಳೆಯರು ಎಂಬ ಮಾಹಿತಿ ಲಭ್ಯವಾಗಿದೆ, ಲಕ್ಷ್ಮಿ ಮಾದೇವ ನಾಯ್ಕ 38, ಉಮೇಶ್ ಮಂಜುನಾಥ ನಾಯ್ಕ 42, ಲಕ್ಷ್ಮಿ ಶಿವರಾಂ ನಾಯ್ಕ 39, ಮಾಲತಿ ಜಟ್ಟಪ್ಪ ನಾಯ್ಕ 38, ಮಾಸ್ತಮ್ಮ ಮಂಜುನಾಥ 43, ಜ್ಯೋತಿ ನಾಯ್ಕ 37 ಹೀಗೆ ಒಂದೇ ಕುಟುಂಬದ ಒಟ್ಟು 8 ಜನರು ಜಲಸಮಾಧಿಯಾಗಿದ್ದಾರೆ.́
ಟನಾ ಸ್ಥಳಕ್ಕೆ ಭಟ್ಕಳ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ





