• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚುನಾವಣೆಯಲ್ಲಿ ಇವಿಎಂ ಬಾಯ್, ಬ್ಯಾಲೆಟ್ ಹಾಯ್: ಕರ್ನಾಟಕದಲ್ಲಿ ಐತಿಹಾಸಿಕ ವಿಧೇಯಕ ಅಂಗೀಕಾರ!

ಪ್ರತಿಧ್ವನಿ by ಪ್ರತಿಧ್ವನಿ
March 26, 2026
in Top Story
0
ಚುನಾವಣೆಯಲ್ಲಿ ಇವಿಎಂ ಬಾಯ್, ಬ್ಯಾಲೆಟ್ ಹಾಯ್: ಕರ್ನಾಟಕದಲ್ಲಿ ಐತಿಹಾಸಿಕ ವಿಧೇಯಕ ಅಂಗೀಕಾರ!
Share on WhatsAppShare on FacebookShare on Telegram

ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಇವಿಎಂ ಯಂತ್ರಗಳ ಬದಲಿಗೆ ಮತಪತ್ರ ಪದ್ಧತಿಯನ್ನು ಮರುಜಾರಿಗೊಳಿಸುವ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ–2026’ ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಗಿದೆ.

ADVERTISEMENT
BZ Zameer Ahmed Khan : Davanagere ಉಪ ಚುನಾವಣೆ ಟಿಕೆಟ್ ಅಲ್ಪಸಂಖ್ಯಾತರಿಗೆ ಕೊಡ್ಬೇಕು! #pratidhvani

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಮಂಡಿಸಿದ ಈ ವಿಧೇಯಕವು, ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕಾರವಾದ ನಂತರ ಮೇಲ್ಮನೆಗೂ ಬಂದಿದ್ದು, ವಿರೋಧ ಪಕ್ಷದ ಪ್ರತಿಭಟನೆ ನಡುವೆಯೇ ಪಾಸಾಗಿದೆ. ವಿಧೇಯಕವನ್ನು ಶೀಘ್ರದಲ್ಲೇ ರಾಜ್ಯಪಾಲರ ಅನುಮತಿಗೆ ಕಳುಹಿಸಲಾಗಿದ್ದು, ಅವರ ತೀರ್ಮಾನವೇ ಮುಂದಿನ ಹಂತವನ್ನು ನಿರ್ಧರಿಸಲಿದೆ.ಈ ತಿದ್ದುಪಡಿಯ ಪ್ರಮುಖ ಉದ್ದೇಶ, ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸುವುದಾಗಿದೆ.

YouTube player

ಸಂವಿಧಾನದಡಿ ಮತದಾರರು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದು, ಮತದಾನ ಪ್ರಕ್ರಿಯೆಯ ಮೇಲೆ ಮಾನಸಿಕ ವಿಶ್ವಾಸ ಹೆಚ್ಚಿಸಲು ಮತಪತ್ರ ಪದ್ಧತಿ ಸಹಕಾರಿ ಎಂಬ ಅಭಿಪ್ರಾಯವನ್ನು ಸರ್ಕಾರ ವ್ಯಕ್ತಪಡಿಸಿದೆ.ಇದರಿಂದ ಮುಂದೆ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಮತಪತ್ರಗಳ ಮೂಲಕವೇ ನಡೆಯಲಿವೆ. ಜೊತೆಗೆ, ಬೂತ್ ಕ್ಯಾಪ್ಚರಿಂಗ್ ಮತ್ತು ಇತರೆ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವಂತೆ ಕಠಿಣ ನಿಯಮಗಳನ್ನು ವಿಧೇಯಕದಲ್ಲಿ ಸೇರಿಸಲಾಗಿದೆ.

Rajsabha PMModi Speech : ಯುದ್ಧದ ಸನ್ನಿವೇಶ ಜಾಗತಿಕ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ..! #pratidhvani

ಇನ್ನೊಂದೆಡೆ, ಪಂಚಾಯತ್‌ಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಅನಧಿಕೃತ ಸ್ವತ್ತುಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ತರುವ ವ್ಯವಸ್ಥೆಯನ್ನೂ ವಿಧೇಯಕದಲ್ಲಿ ಒಳಗೊಂಡಿದೆ. ಇದರಿಂದ ಗ್ರಾಮೀಣ ಅಭಿವೃದ್ಧಿ ಕಾರ್ಯಗಳಿಗೆ ಆದಾಯ ಹೆಚ್ಚುವ ನಿರೀಕ್ಷೆ ಇದೆ.ಆದರೆ, ಈ ಕ್ರಮಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇದನ್ನು ಹಿಮ್ಮುಖ ಹೆಜ್ಜೆ ಎಂದು ಟೀಕಿಸಿದ್ದು, ಇವಿಎಂ ವ್ಯವಸ್ಥೆಯ ದೋಷಗಳನ್ನು ಸರಿಪಡಿಸುವ ಬದಲು ಹಳೆಯ ವಿಧಾನಕ್ಕೆ ಮರಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ನಡೆಸಿದರು.

Arvind Kejriwal : ಪ್ರಧಾನಿ ಮೋದಿಗೆ ಹಿಗ್ಗಾಮುಗ್ಗಾ ಜಾಡಿಸಿದ ಕೇಜ್ರಿವಾಲ್..! #pmmodi #amitshah #bjp

ಇವಿಎಂಗಳ ವಿಶ್ವಾಸಾರ್ಹತೆ ಕುರಿತ ಚರ್ಚೆಗಳು ದೇಶದಾದ್ಯಂತ ಮುಂದುವರಿದಿರುವ ಹಿನ್ನೆಲೆ, ಈ ತೀರ್ಮಾನ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ

ಆರ್‌ಸಿಬಿ ತಂಡಕ್ಕೆ ಹೊಸ ಮಾಲಿಕರ ಎಂಟ್ರಿ, ತಂಡದ ಹೆಸರು ಬದಲಾವಣೆ?

Tags: Ballot systembill passed in Karnatakapanchayath electionspratidavaniPriyanka Kharge
Previous Post

ಯುದ್ಧದ ಪರಿಣಾಮ: ಜಾಗತಿಕ ಇಂಧನ ಬಿಕ್ಕಟ್ಟು ತೀವ್ರ, ಭಾರತಕ್ಕೂ ಆತಂಕ

Next Post

ಇವಳು-ಅವಳು ನಮ್ಮವಳೆನಿಸುವುದು ಯಾವಾಗ ?

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post
ಇವಳು-ಅವಳು ನಮ್ಮವಳೆನಿಸುವುದು ಯಾವಾಗ ?

ಇವಳು-ಅವಳು ನಮ್ಮವಳೆನಿಸುವುದು ಯಾವಾಗ ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada