ಮಂಡ್ಯ:
ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ। ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಾಹಿತಿ ಭಾನು ಮುಷ್ತಾಕ್ ಪುಷ್ಪ ನಮನ ಸಲ್ಲಿಸಿದ್ದು ವಿವಾದಕ್ಕೆ ತಿರುಗಿದೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಭಾನು ಮುಷ್ತಾಕ್ ಮುಂದಾದಾಗ ಸಂಘಟಕರು ಚಪ್ಪಲಿ ಬಿಟ್ಟು ಬರುವಂತೆ ಮನವಿ ಮಾಡಿದರು. ಅದಕ್ಕೆ ಭಾನು ಮುಷ್ತಾಕ್ ಒಪ್ಪಲಿಲ್ಲ.

ಪುಷ್ಪ ನಮನಕ್ಕೆ ಚಪ್ಪಲಿ ಬಿಟ್ಟು ಬರಬೇಕೆಂದರೆ ನಾನು ಪುಷ್ಪ ನಮನವನ್ನೇ ಸಲ್ಲಿಸುವುದಿಲ್ಲ ಎಂದು ನೇರವಾಗಿ ಹೇಳಿದರು. ಕೊನೆಗೆ ಚಪ್ಪಲಿ ಧರಿಸಿಕೊಂಡು ಬಂದು ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ನಂತರ ತಮ್ಮ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಚಪ್ಪಲಿ ನಮ್ಮ ಮನೆ ದೇವರು. ಅದು ನಮ್ಮ ಅಸ್ಮಿತೆಯ ಸಂಕೇತ. ನಾವು ಚಪ್ಪಲಿ ಹೊಲಿಯುವವರು. ನಮಗೆ ಅದರ ಬಗ್ಗೆ ಅಪಾರ ಗೌರವವಿದೆ ಎಂದು ಸಮರ್ಥನೆ ನೀಡಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಹಾಗೂ ಡಾ.ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನದ ವತಿಯಿಂದ ಶನಿವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ಮತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದ್ದಾರೆ.
ಇದನ್ನೂ ಓದಿ
ಮತ್ತೆ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಬುದ್ದಿವಂತ ಉಪೇಂದ್ರ : ಡಿಲೀಟ್ ಮಾಡುವುದಾಗಿ ಹೇಳಿ ಹಾಕಿದ ಪೋಸ್ಟ್ ಇದು !






