ಬೆಂಗಳೂರು : ಬೇಸಿಗೆಯ ದಿನಗಳಲ್ಲಿ ಸಾಮಾನ್ಯವಾಗಿ ನೀರಿನ ಸಮಸ್ಯೆ ಇದ್ದೆ ಇರುತ್ತದೆ. ಮನುಷ್ಯ ಸೇರಿದಂತೆ ಪ್ರಾಣಿ, ಪಕ್ಷಿ ಹಾಗೂ ಗಿಡಮರಗಳಿಗೆ ನೀರು ಬೇಕು. ಮನುಷ್ಯನಂತೆ ಬೆಳವಣಿಗೆಗೆ ಗಿಡಮರಗಳು ನೀರನ್ನು ಅವಲಂಬಿಸಿರುತ್ತಾನೆ.

ಆದರೆ ತಮಗೆ ಇಷ್ಟವಾದಂತೆ ಮನುಷ್ಯರು ನೀರನ್ನು ಬಳಸುತ್ತಾರೆ. ಆದರೆ ಗಿಡಮರಗಳಿಗೆ ನೀರು ಹಾಕಿ ಪೋಷಿಸುವ ಜನರು ಇಂದಿನ ದಿನಗಳಲ್ಲಿ ವಿರಳಾತೀವಿರಳ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಪರಿಸರ ಪ್ರೇಮಿಯೊಬ್ಬರ ವಿಡಿಯೋ ಒಂದು ಹರಿದಾಡುತ್ತಿದೆ.
ರಸ್ತೆಯ ಬದಿಯ ಡಿವೈಡರ್ಗೆ ನೀರು ಹಾಕುವ ವ್ಯಕ್ತಿಯನ್ನು ಕಂಡು ನೆಟ್ಟಿಗರು ಶಹಬ್ಬಾಶ್.! ಎನ್ನುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪ್ರಕೃತಿಯ ಉಳಿವು, ಪರಿಸರ, ಗಿಡಮರಗಳ ರಕ್ಷಣೆಯ ಬಗೆಗೆ ಇರುವ ಅಪಾರ ಆಸಕ್ತಿಯನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ : ಬೆಂಗಳೂರಿನ ಜನರಿಗೆ ಇಲ್ಲಿದೆ ಆರೋಗ್ಯ ತಜ್ಞರು ಕೊಟ್ಟ ಎಚ್ಚರಿಕೆ!
ತಮ್ಮ ಮನೆಯ ಸುತ್ತಲಿನ ಗಿಡ, ಮರಗಳಿಗೆ ನೀರುಣಿಸುವ ಕೆಲಸ ಮಾಡದ ಇಂದಿನ ದಿನಗಳಲ್ಲಿ ರಸ್ತೆ ಬದಿಯ ಗಿಡಗಳಿಗೆ ನೀರು ಹಾಕುವ ಈ ಯುವಕನ ಪರಿಸರ ಕಾಳಜಿ ಎಲ್ಲರೂ ಮೆಚ್ಚುವಂಥದ್ದು. ಯುವಕನೊಬ್ಬ ತನ್ನ ಸ್ಕೂಟಿಯಲ್ಲಿ ಬಕೆಟ್ನಲ್ಲಿ ಬೇರೆ ಕಡೆಯಿಂದ ನೀರು ತಂದು ಅತ್ಯಂತ ಪ್ರಾಮಾಣಿಕವಾಗಿ ಪರಿಸರ ಸೇವೆ ಸಲ್ಲಿಸಿದ್ದಾನೆ.
https://x.com/Rainmaker1973/status/2031401311632085342?s=20
ಈ ಯುವಕನ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯುವಕನ ಮಾಹಿತಿ ಬಹಿರಂಗವಾಗದಿದ್ದರೂ, ವಿಡಿಯೋ ಮಾತ್ರ ಸಾಕಷ್ಟು ಜನರ ಮನಮುಟ್ಟುವಂತಿದೆ. ಮುಖ್ಯವಾಗಿ ಪ್ರತಿದಿನ ಬೆಳಗಿನ ಜಾವ ಈ ಯುವಕ ತನ್ನ ಪಾಡಿಗೆ ತಾನು ರಸ್ತೆ ಬದಿಯ ಗಿಡ, ಮರಗಳಿಗೆ ನೀರು ಹಾಕುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.






