ಬೆಂಗಳೂರಿನ (Bengaluru) ಭಾರತಿನಗರದಲ್ಲಿ ನಡೆದ ರೌಡಿಶೀಟರ್ (Rowdysheetar ) ಬಿಕ್ಲು ಶಿವ (Biklu shiva) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ತನಿಖೆ ನಡೆಸುತ್ತಿರುವ ಪೊಲೀಸರು ಜಗ್ಗ ಮತ್ತು ಶಿವನ ನಡುವೆ ವೈಷಮ್ಯ ಬೆಳೆಯಲು ಕಾರಣವೇನು ಎಂಬುದರ ಕುರಿತು ಮಾಹಿತಿ ಕಲೆಹಾಕಿದ್ದಾರೆ.
ಮೊದಲಿಂದಲೂ ಗೆಳೆಯರಾಗಿದ್ದ ಜಗದೀಶ್ ಮತ್ತು ಬಿಕ್ಲು ಮಧ್ಯೆ ವೈಶಮ್ಯ ಬೆಳೆದಿದ್ದು ಫೆಬ್ರವರಿಯಿಂದ ಎನ್ನಲಾಗಿದೆ.ಕಿತ್ತಗನೂರು ಜಮೀನು ಕಾಂಪೌಂಡ್ ಡೆಮಾಲಿಷನ್ ಮಾಡಿದ ಬಳಿಕ ಹಾವು ಈ ಇಬ್ಬರೂ ಮುಂಗೂಸಿಯಂತಾಗಿದ್ರು ಎಂಬ ಮಾಹಿತಿ ಲಭ್ಯವಾಗಿದೆ.

ಕಿತ್ತಗನೂರು ಜಮೀನಿಗೆ ರವಿ ಕಾಂಪೌಂಡ್ ಹಾಕಿಸುತ್ತಿದ್ದ.ಈ ವೇಳೆ ಅಲ್ಲಿಗೆ ಬಿಕ್ಲು ಶಿವ ತಮ್ಮ ಹುಡಗರನ್ನು ಕರೆದುಕೊಂಡು ಹೋಗಿ ನಿರ್ಮಾಣವಾಗ್ತಿದ್ದ ಕಾಂಪೌಂಡ್ ಧ್ವಂಸ ಮಾಡಿದ್ದ. ಆಗ ರವಿ ಬೆನ್ನಿಗೆ ನಿಂತಿದ್ದವನೇ ಈ A1 ಜಗದೀಶ್ @ಜಗ್ಗ.ಅಂದಿನಿಂದ ಬಿಕ್ಲು ಶಿವ ಮತ್ತು ಜಗದೀಶ್ ಮಧ್ಯೆ ದ್ವೇಷ ಶುರುವಾಗಿತ್ತು.
ಈ ಬೆಳವಣಿಗೆಯ ನಂತರ ಬಿಕ್ಲು ಶಿವಗೆ ಬೆದರಿಕೆ ಹಾಕುತ್ತಿದ್ದ ಜಗದೀಶ್ ಮತ್ತು ಬಂಧಿತ ಆರೋಪಿ ಕಿರಣ್ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದರು. ಹೀಗಾಗಿ ಫೆಬ್ರವರಿ 18 ರಂದು ಅಂದಿನ ಕಮಿಷನರ್ ದಯಾನಂದ್ ಗೆ ಜೀವ ಬೆದರಿಕೆ ಇರೋದಾಗಿ ಬಿಕ್ಲು ಶಿವ ದೂರು ನೀಡಿದ್ದ.ಭಾರತಿನಗರ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 21 ರಂದು ಎಫ್ಐಆರ್ ದಾಖಲಾಗಿತ್ತು.

ಆದ್ರೆ ಎಫ್ಐಆರ್ ಗೆ ಕೋರ್ಟ್ ನಿಂದ ಜಗದೀಶ್ ಸ್ಟೇ ತಂದಿದ್ದ.ಹೀಗಾಗಿ ರಾಮಮೂರ್ತಿನಗರ ಪೊಲೀಸ್ ಠಾಣೆಗೂ ಬಿಕ್ಲು ಶಿವ ದೂರು ನೀಡಿದ್ದ.ಆದ್ರೆ ಎನ್ ಸಿಆರ್ ದಾಖಲಿಸಿ ರಾಮಮೂರ್ತಿನಗರ ಪೊಲೀಸ್ರು ನಿರ್ಲಕ್ಷ್ಯ ವಹಸಿದ್ದರು. ಹೀಗಾಗಿ ಕಿತ್ತಗನೂರು ಜಮೀನು ವ್ಯಾಜ್ಯದಿಂದಲೇ ಬಿಕ್ಲು ಹತ್ಯೆಯಾಗಿದ್ದಾನೆ.