ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲ್ಲೂಕಿನ ತೆರದಾಳು ಗ್ರಾಮದಲ್ಲಿ ಎಂ.ಎಸ್.ಐ.ಎಲ್ ಬಾರ್ ಬಂದ್ ಮಾಡಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಮ್ಮ ಗ್ರಾಮದಲ್ಲಿ ಬಾರ್ ಬೇಡ , ಇದ್ರಿಂದ ನಿತ್ಯ ಕಿರಿಕಿರಿಯಾಗುತ್ತಿದ್ದು ಬಾರ್ ಮುಚ್ಚಬೇಕೆಂದು ಮಹಿಕೆಯರು ಪಟ್ಟು ಹಿಡಿದಿದ್ದಾರೆ.

ಎಂ.ಎಸ್.ಐ.ಎಲ್ ಬಾರ್ ಮುಂದೆ ಮಹಿಳೆಯರು ಧರಣಿ ನಡೆಸಿದ್ದಾರೆ. ಬಾರ್ ನ ಷಟರ್ ಬಾಗಿಲಿಗೆ ಮುಳ್ಳು ಕಂಪೆಗಳನ್ನ ಹಾಕಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತರಿದಾಳು ಗ್ರಾಮದಲ್ಲಿರುವ ಸರ್ಕಾರಿ ಎಮ್.ಎಸ್.ಎಲ್ ಬಾರ್ ಇದಾಗಿದೆ.

ಹೀಗೆ ಊರಿನ ಮದ್ಯೆ ಬಾರ್ ಇರುವುದರಿಂದ ಗ್ರಾಮದ ಜನ ಮದ್ಯಕ್ಕೆ ದಾಸರಾಗುತಿದ್ದಾರೆಂದು ಮಹಿಳೆಯರು ಆರೋಪ ಮಾಡಿದ್ದಾರೆ.ಬಾರ್ ನಿಂದ ದಿನ ಪೂರ್ತಿ ಕುಡಿದು ಸಾಕಷ್ಟು ಜನ ಜೀವ ಬಿಟ್ಟಿದ್ದಾರೆ.ಕುಡಿದು ಅಸಭ್ಯ ವರ್ತನೆ ಮಾಡಿತ್ತಾರೆ ಎಂದು ಬಾರ್ ನ ಪಕ್ಕದ ಮನೆಯವರು ಅಳಲು ತೋಡಿಕೊಂಡಿದ್ದಾರೆ.

ಬಾರ್ ಗ್ರಾಮದ ಮುಖ್ಯರಸ್ತೆಯಲ್ಲಿ ಇರುವ ಕಾರಣ ನಿತ್ಯ ಕಿರಿಕಿರಿಯಾಗುತ್ತಿದೆ.ಶಾಲಾ ಕಾಲೇಜುಗಳಿಗೆ ಹೊಗಿ ಬರುವ ಯುವತಿಯರು ಬಾರ್ ಮುಂದೆಯೆ ನಡೆದುಕೊಂಡು ಹೋಗಬೇಕು. ಕುಡಿದ ಅಮಲಿನಲ್ಲಿ ಕುಡುಕರು ಯುವತಿಯರ ಮುಂದೆ ಅಸಭ್ಯ ವರ್ತನೆ ತೋರುತ್ತಿದ್ದಾರೆ. ಹೀಗಾಗಿ ಬಾರ್ ಮುಚ್ಚಲು ಮಹಿಳೆ ಆಗ್ರಹಿಸಿದ್ದಾರೆ.