
ತುಮಕೂರು ಸಂಸದ ವಿ ಸೋಮಣ್ಣ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಬೆನ್ನಲ್ಲೆ ತುಮಕೂರಿಗೆ ದೊಡ್ಡ ಮಟ್ಟದ ಅನುದಾನ ಹರಿದು ಬಂದಿದೆ. ಮೊದಲ ಬಾರಿಗೆ ತುಮಕೂರಿಗೆ ಕೇಂದ್ರದಿಂದ ನೂರಾರು ಕೋಟಿ ಅನುದಾನ ರಿಲೀಸ್ ಆಗಿದೆ.

ಸುಮಾರು ₹350 ಕೋಟಿ ವೆಚ್ಚದಲ್ಲಿ ರೈಲ್ವೆ ಬ್ರಿಡ್ಜ್ ಕಾಮಗಾರಿಗೆ ಕೇಂದ್ರ ಗ್ರೀನ್ ಸಿಗ್ನಲ್ ನೀಡಿದೆ. ಒಟ್ಟು ಐದು ಮೇಲ್ಸೇತುವೆ ಕಾಮಗಾರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತುಮಕೂರಿನ ಕ್ಯಾತಸಂದ್ರ ರೈಲ್ವೆ ಸ್ಟೇಷನ್ ಹಾಗು ಮೈದಾಳ ಗೇಟ್ ಮೇಲ್ಸೇತುವೆ. ಬಡ್ಡಿಹಳ್ಳಿ ಗೇಟ್ ಅಗ್ನಿಶಾಮಕ ದಳದ ಕಚೇರಿ ಬಳಿ ಮೇಲ್ಸೇತುವೆ, ಬಟವಾಡಿ ಗೇಟ್ ಮೇಲ್ಸೇತುವೆ, ಹರೆಯೂರು ರಸ್ತೆ, ಮಲ್ಲಸಂದ್ರ ಗೇಟ್ ಮೇಲ್ಸೇತುವೆ, ತುಮಕೂರು ಮೈಸೂರು ರಸ್ತೆಯ ನಿಟ್ಟೂರು ರೈಲ್ವೆ ಸ್ಟೇಷನ್ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಅನುಮೋದನೆ ಕೊಡಲಾಗಿದೆ.

ರೈಲ್ವೆ ರಾಜ್ಯ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ ಯೋಜನೆಗಳಿಗೆ ಚಾಲನೆ ನೀಡುವ ಮಾತನಾಡಿದ್ದ ಸಚಿವ ವಿ ಸೋಮಣ್ಣ, ಇದೀಗ ಸ್ವಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಖಾತೆಯಿಂದ ಚಾಲನೆ ಕೊಟ್ಟಂತಾಗಿದೆ. ಇದೀಗ ಪ್ರಕಟಣೆಗಾಗಿ ಮಾಹಿತಿ ಹಂಚಿಕೊಂಡಿದ್ದಾರೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ.






