ಸದ್ಯ ನಿನ್ನೆಯಷ್ಟೇ ಪರಪ್ಪನ ಅಗ್ರಹಾರದಿಂದ (Parappana agrahara) ಹೊರಬಂದಿರೋ ರೇವಣ್ಣಗೆ (Revanna) ಮತ್ತೆ ಎಸ್ ಐ ಟಿ (SIT) ಭೂತ ಬೆನ್ನುಬಿದ್ದಿದೆ. ಹೊಳೆನರಸೀಪುರ (Hole narasipura) ಪ್ರಕರಣದ ತನಿಖೆಯನ್ನ ಎಸ್ಐಟಿ ಚುರುಕುಗೊಳಿಸಿದ್ದು, ಈಗಾಗಲೇ ಕೇಸ್ ಸಂಬಂಧ 3 ನೋಟಿಸ್ ಜಾರಿ ಮಾಡಿದೆ. ಜೊತೆಗೆ ಸಂತ್ರಸ್ತೆಯರಿಂದ ಸ್ಥಳ ಮಹಜರು ಮಾಡಿಸಿದೆ. ಅಲ್ಲದೇ 164 ಹೇಳಿಕೆಯನ್ನೂ ದಾಖಲಿಸಿದೆ.ಇದೀಗ ಪ್ರಕರಣದ ಆರೋಪಿ ರೇವಣ್ಣರ ವಿಚಾರಣೆ ನಡೆಸಲು ಮತ್ತೊಂದು ನೋಟಿಸ್ (SIT notice) ನೀಡಲು ಮುಂದಾಗಿದೆ.
ಸದ್ಯ ರೇವಣ್ಣ ಪರಪ್ಪನ ಅಗ್ರಹಾರ ಜೈಲುಪಾಲಾಗಿ ಕಂಬಿ ಎಣಿಸಿದ್ದು, ಹರಸಾಹಸ ಪಟ್ಟು ಜಾಮೀನಿನ (Bail) ಮೇಲೆ ಹೊರಬಂದಿದ್ದು, ಕೆ.ಆರ್.ನಗರದಲ್ಲಿ (KR nagar) ದಾಖಲಾಗಿದ್ದ ಕಿಡ್ನಾಪ್ (Kidnap) ಕೇಸ್ನಲ್ಲಿ. ಇನ್ನೇನು ಈಗಷ್ಟೇ ಹೊರಬಂದೆ, ದೇವಸ್ಥಾನಗಳನ್ನ ಸುತ್ತಾಡಿ ದೇವರ ದರ್ಶನ ಪಡೆಯೋಣ ಎನ್ನುವಷ್ಟರಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೊಳೆನರಸಿಪುರ ಕೇಸ್ನಲ್ಲಿ ಈಗಾಗಲೇ ರೇವಣ್ಣಗೆ ಎಸ್ಐಟಿ (SIT) ಮೂರು ನೋಟಿಸ್ ಜಾರಿ ಮಾಡಿದ್ದು, ಇದೀಗ ನಾಲ್ಕನೇ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ. ಹೀಗಾಗಿ ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಎಂಬಂತೆ ತನಿಖೆಯ ಭೂತ ರೇವಣ್ಣರನ್ನ ಬಿಟ್ಟೂ ಬಿಡದೆ ಕಾಡುತ್ತಿದೆ.