ರಾಜ್ಯ ಸರ್ಕಾರದ (Karnataka Government) ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ವಿರೋಧ ಪಕ್ಷದ ನಾಯಕ (Leader of opposition) ಆರ್. ಅಶೋಕ್ (R Ashok) ಹೊಸ ಬಾಂಬ್ ಸಿಡಿಸಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಅಂತ್ಯವಾದ ಬೆನ್ನಲ್ಲೇ, ವಿಪಕ್ಷ ನಾಯಕ ನೀಡಿರುವ ಈ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ (congress) ಪಕ್ಷದೊಳಗಿನ ಅಂತರಿಕ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ.

ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರದ ಆಯುಷ್ಯ ಮುಗಿಯುತ್ತಾ ಬಂದಿದೆ ಎಂದ ಆರ್.ಅಶೋಕ್ (R. Ashok),ಅನೇಕ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಮತ್ತೊಂದು ಬಾಂಬ್ (Bomb) ಸಿಡಿಸಿದ್ದಾರೆ. ರಾಜ್ಯದಲ್ಲಿ ಈ ಸರ್ಕಾರ ಬಂದಲೆ ಹೇಳಿಕೊಳ್ಳುವಂಥ ಒಂದೇ ಒಂದು ಅಭಿವೃದ್ಧಿ ಕೆಲಸ ಕೂಡ ಆಗಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರೇ ಸರ್ಕಾರದ ಮೇಲೆ ಬೇಸರಗೊಂಡಿದ್ದಾರೆ ಎಂದು ಆರ್ .ಅಶೋಕ್ ಹೇಳಿದ್ದಾರೆ.

ಹೀಗೆ ಸರ್ಕಾರದ (Government) ವಿರುದ್ಧ ಕಿಡಿಕಾರಿದ ಅಶೋಕ್, ಇದು ಬಡವರ ವಿರೋಧಿ ಸರ್ಕಾರ, ಮಜಾವಾದಿ ಸರ್ಕಾರ ಎಂದು ಹರಿಹಾಯ್ದರು. ಈ ಮೊದಲೂ ಕೂಡ ಕುಮಾರಸ್ವಾಮಿ (kumaraswamy) ಮತ್ತಿತರ ಮೈತ್ರಿ ನಾಯಕರು ಈ ಸರ್ಕಾರದ ಆಯುಷ್ಯ ಡಿಸೆಂಬರ್ (December) ವರೆಗೆ ಮಾತ್ರ ಎಂಬ ಹೇಳಿಕೆಗಳನ್ನ ನೀಡಿದ್ದರು.