ಬರ ಪರಿಹಾರ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದೆ. ಮೋದಿ ಅಮಿತ್ ಶಾಗೆ ರಾಜ್ಯದಲ್ಲಿ ಮತ ಕೇಳಲು ನೈತಿಕತೆ ಇಲ್ಲ. ಯಾವ ಮುಖ ಇಟ್ಕೊಂಡು ರಾಜ್ಯಕ್ಕೆ ಬರ್ತೀರಾ..? ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.
ಬರ ಪರಿಹಾರ ವಿಚಾರದಲ್ಲಿ ಕೇಂದ್ರದಿಂದ ವಿಳಂಬ ಧೋರಣೆ ಖಂಡಿಸಿ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ನಾವು 34 ಲಕ್ಷ ರೈತರಿಗೆ ಬರಪರಿಹಾರ ನೀಡಿದ್ದೇವೆ. ರೈತರಿಗೆ 2 ಸಾವಿರ ರೂ. ನೀಡಿದ್ದೇವೆ. ಆದರೆ ಬರಪರಿಹಾರ ವಿಚಾರದಲ್ಲಿ ಕೇಂದ್ರ ಮಲತಾಯಿ ಧೋರಣೆ ತೋರಿದೆ. ಸೆಪ್ಟಂಬರ್ ನಲ್ಲೇ ವರದಿ ಕೊಟ್ಟಾಗಲೇ ಪರಿಹಾರ ನೀಡಲಿಲ್ಲ ಎಂದು ಕಿಡಿಕಾರಿದರು.ಮೋದಿ ಅಮಿತ್ ಶಾಗೆ ಕರ್ನಾಟಕದ ಮೇಲೆ ಪ್ರೀತಿ ಇಲ್ಲ, ದ್ವೇಷಿಸುತ್ತಾರೆ ಕೇಂದ್ರದ ಅನ್ಯಾಯದ ವಿರುದ್ದ ಸುಪ್ರೀಂಕೋರ್ಟ್ ಗೆ ಹೋಗಿದ್ದೇವೆ . ಕೇಂದ್ರ ನೀಡದ ಪರಿಹಾರಕ್ಕಾಗಿ ಪ್ರತಿಭಟನೆ ಮಾಡಿದ್ದೇವೆ . ಇದುವರೆಗೆ ಕೇಂದ್ರ ಸರ್ಕಾರ ನಿರ್ಮಲಾ ಸೀತಾರಾಮನ್ ಸೂಕ್ತವಾಗಿ ಸ್ಪಂದಿಸಿಲ್ಲ. ಮೋದಿ ಅಮಿತ್ ಶಾಗೆ ಮತ ಕೇಳಲು ಯಾವುದೇ ನೈತಿಕತೆ ಇಲ್ಲ. ಮೊದಲು ಪರಿಹಾರ ನೀಡ ನಂತರ ರಾಜ್ಯಕ್ಕೆ ಬನ್ನಿ ಎಂದು ವಾಗ್ದಾಳಿ ನಡೆಸಿದರು.