ನಮ್ಮ ದೇಶದಲ್ಲಿ ಸಾಕಷ್ಟು ಕಾಮಗಾರಿಗಳು ಕಳಪೆಯಿಂದ ಕೂಡಿರುತ್ತವೆ. ಕಳೆದ ನಾಲ್ಕೈದು ದಶಕಗಳಿಂದ ಯಾವುದಾದರೂ ಒಂದು ಕಾಮಗಾರಿ ಪೂರ್ಣಗೊಂಡು 3-4 ತಿಂಗಳ ನಂತರ ಅದು ಕಳಪೆ ಅಂತ ಗೊತ್ತಾಗ್ತಾ ಇತ್ತು, ಆದರೆ ಕಳೆದ ಒಂದಯ ದಶಕಗಳಿಂದ ಈಚೆಗೆ ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡಗಳು, ಸೇತುವೆಗಳು, ಬಿರುಕು ಬಿಡುವುದು ಕುಸಿಯುವಂತ ಘಟನೆಗಳು ಆಗಾಗ ಸಂಭವಿಸುತ್ತಲೇ ಇವೆ..

ಇದಕ್ಕೆ ಪೂರಕವಾಗಿ ಇದೀಗ ಬಿಹಾರದ ಭಾಗಲ್‌ಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಆಗುವನಿ-ಸುಲ್ತಂಗಂಜ್ ಸೇತುವೆ ಕುಸಿದಿದೆ. ಸೇತುವೆ ಕುಸಿದು ಬಿದ್ದ ಕ್ಷಣವನ್ನ ಸ್ಥಳೀಯರ ವಿಡಿಯೋ ಮಾಡಿದ್ದು. ಈ ಸೇತುವೆ ಹೀಗೆ ನಿರ್ಮಾಣ ಹಂತದಲ್ಲಿ ಕುಸಿದಿರುವುದು ಇದು ಎರಡನೇ ಬಾರಿ ಅಂತ ಹೇಳಲಾಗುತ್ತಿದೆ ಇದೀಗ ಈ ಘಟನೆಯಲ್ಲಿ ಪ್ರಾಣ ಹಾನಿ ಗಾಯಗಳ ಕುರಿತು ಇನ್ನು ಮಾಹಿತಿ ಲಭ್ಯ ಆಗಿಲ್ಲ, ಅಧಿಕೃತ ವರದಿಗಳ ನಂತರವಷ್ಟೇ ಆ ಬಗ್ಗೆ ಮಾಹಿತಿ ಲಭ್ಯವಾಗಲಿದೆ

ಇನ್ನು ಈ ಸೇತುವೆ ಹೀಗೆ ನಿರ್ಮಾಣ ಹಂತದಲ್ಲಿ ಕುಸಿದಿರುವುದನ್ನ ನೋಡಿರುವ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು ಇಂತಹ ಕಳಪೆ ಕಾಮಗಾರಿ ಮಾಡಿ ಜನರ ಜೀವನದಲ್ಲಿ ಏತಕ್ಕಾಗಿ ಆಟವಾಡುತ್ತಿದ್ದೀರಿ ಅಂತ ಪ್ರಶ್ನೆಯನ್ನು ಮಾಡಿದ್ದಾರೆ ಈ ಬಗ್ಗೆ ಮುಂದೆಗಳಲ್ಲಿ ಬಿಹಾರ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಯಾವ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತೆ ಅಂತ ಕಾದುನೋಡಬೇಕಾಗಿದೆ






