ಪ್ರಧಾನಿ ಮೋದಿ (pmmodi) ಸರ್ಕಾರ ಈಗಾಗಲೇ ಒಂಬತ್ತು ವರ್ಷಗಳನ್ನು ಪೂರೈಸಿ ಒಂದು ದಶಕದ ಸಂಭ್ರಮಕ್ಕೆ ಕಾಲಿಡುತ್ತಿದೆ ಇಂತಹ ಹೊತ್ತಿನಲ್ಲಿ ಈ ಒಂಬತ್ತು ವರ್ಷದ ಪ್ರಮುಖ ಸಾಧನೆಗಳು ಏನಿವೆ ಅಂತ ವಿರೋಧ ಪಕ್ಷಗಳು, ಹಾಗೂ ಮೋದಿಯ (MODI) ರಾಜಕೀಯ ವಿರೋಧಿಗಳು ಕೇಳುತ್ತಿದ್ದಾರೆ ಪ್ರಧಾನಿಗಳಿಗೆ ಕೇಳಿದ ಪ್ರಶ್ನೆಗೆ ಇದುವರೆಗೂ ಉತ್ತರವನ್ನು ಪ್ರಧಾನಿಗಳು ನೀಡಿಲ್ಲ ಬದಲಾಗಿ ಯಾರಿಗೂ ಕೇಳಿದ ಪ್ರಶ್ನೆಗೆ ಮತ್ತಿನ್ಯಾರೋ ಉತ್ತರ ಕೊಡುವ ಹಾಗೆ ಬಿಜೆಪಿಯ (BJP) ವಕ್ತಾರರು ಉತ್ತರವನ್ನು ಕೊಡುತ್ತಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಕೇಂದ್ರ ಸಚಿವರುಗಳು ತಾವೇ ವಿರೋಧ ಪಕ್ಷದ ನಾಯಕರುಗಳಂತೆ ವರ್ತಿಸುವ ಬುದ್ಧಿಯನ್ನ ಇನ್ನು ಬಿಡದಂತೆ ಭಾಸವಾಗುವ ರೀತಿಯಲ್ಲಿ ಉತ್ತರವನ್ನು ಕೊಡುತ್ತಿದ್ದಾರೆ ಮೊನ್ನೆ ಅಷ್ಟೇ ಮೋದಿ ಸರ್ಕಾರದ 9 ವರ್ಷದ ಆಡಳಿತ ಅವಧಿಯ ರಿಪೋರ್ಟ್ ಕಾರ್ಡನ್ನು ತೆಗೆದುಕೊಂಡ ಬಂದಿದ್ದ ನಿರ್ಮಲ ಸೀತಾರಾಮನ್ ಮೋದಿ ಸರ್ಕಾರದಲ್ಲಿ ಬಿಂಬಿಸಿದ್ರು.
ಇದರ ಜೊತೆಗೆ ಇನ್ನೂ ಕೆಲವೊಂದಷ್ಟು ಬಿಜೆಪಿಯ ಸಂಸದರು ಇಡೀ ಜಗತ್ತಿನಲ್ಲಿ ನಮ್ಮ ದೇಶದಲ್ಲಿರುವ ಬಿಜೆಪಿ ಸರ್ಕಾರವೇ ಅತ್ಯುತ್ತಮ ಶ್ರೇಷ್ಠ ಎಂಬ ರೀತಿಯ ಮಾತುಗಳನ್ನು ಕೂಡ ಆಡೋದಕ್ಕೆ ಮುಂದೆ ಬಂದಿದ್ದರು, ಇದು ಸಹಜವಾಗಿಯೇ ಜನಸಾಮಾನ್ಯರಲಿ ಅತಿಶಯೋಕ್ತಿ ಭಾವನೆಯನ್ನು ಉಂಟುಮಾಡಿದ್ದು ಸುಳ್ಳಲ್ಲ.
ಇದೀಗ ಮೋದಿ ಸರ್ಕಾರದ 9 ವರ್ಷಗಳ ಸಾಧನೆಯನ್ನ ಹೊಗಳಿ ಬೆಂಗಳೂರು ಕೇಂದ್ರದ ಸಂಸದ ಪಿ.ಸಿ ಮೋಹನ್ ಟ್ವಿಟ್ ಮಾಡಿದ್ದು, ಆ ಟ್ವಿಟ್ ನಲ್ಲಿ ಮೋದಿ ಸರ್ಕಾರದ ಒಂಭತ್ತು ಪ್ರಮುಖ ಸಾಧನೆಗಳನ್ನು ಬರೆದುಕೊಳ್ಳುವುದರ ಜೊತೆಗೆ ಪ್ರಧಾನಿ ಮೋದಿ ಸರ್ಕಾರ 9 ವರ್ಷ ಪೂರೈಸಿದಿಕ್ಕಾಗಿ ಅಭಿನಂದನೆಯನ್ನು ಕೂಡ ಸಲ್ಲಿಸಿದ್ದಾರೆ.
ಆ ಟ್ವಿಟ್ನಲ್ಲಿ ” 9 ವರ್ಷಗಳ ಅತ್ಯುತ್ತಮ ಅಧಿಕಾರಾವಧಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಅಭಿನಂದನೆಗಳು. 9 ವರ್ಷಗಳ ಸೇವೆಯು ಪ್ರತಿಯೊಬ್ಬ ಭಾರತೀಯನನ್ನು ಸಶಕ್ತಗೊಳಿಸುವ, ಪ್ರಮುಖ ಕ್ಷೇತ್ರಗಳನ್ನು ಸುಧಾರಿಸುವ ಮತ್ತು ಉತ್ತಮ ಆಡಳಿತವನ್ನು ಮರುವ್ಯಾಖ್ಯಾನಿಸುವ ಶಾಶ್ವತ ಪರಂಪರೆಯಾಗಿ ಉಳಿಯುತ್ತದೆ. ನಮ್ಮ ಅಭಿವೃದ್ಧಿ ಪ್ರಯಾಣವನ್ನು ಅನ್ವೇಷಿಸಿ” ಎಂದು ಬರೆದುಕೊಂಡಿದ್ದಾರೆ.
ಇದರ ಜೊತೆಗೆ ಮೋದಿ ಸರ್ಕಾರದ 9 ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಬರೆದಿರುವ ಅವರು” 9 ವರ್ಷಗಳ ಸೇವೆಯು ಭಾರತವನ್ನು ಪರಿವರ್ತಿಸಿತು, 9 ಹೊಸ ಐಐಟಿ, 9 ಹೊಸ ಐಐಎಂ, 15 ಹೊಸ ಐಐಐಟಿ, ಸ್ಥಿರ ಸರ್ಕಾರ, 12 ಕೋಟಿ ಶೌಚಾಲಯಗಳು, ರಾಮಮಂದಿರ, 370 ತೆಗೆದು ಹಾಕಿದ್ದು, 12 ಹೊಸ ಏಮ್ಸ್, 3.5 ಕೋಟಿ ಮನೆಗಳು, 75 ಹೊಸ ವಿಮಾನ ನಿಲ್ದಾಣಗಳು, 40 ಕೋಟಿ ಮುದ್ರಾ ಸಾಲಗಳು, 50 ಕೋಟಿ ಆರೋಗ್ಯ ರಕ್ಷಣೆ ಸಿಕ್ಕಿದೆ, 2.7 ಲಕ್ಷ ಕಿಮೀ ಗ್ರಾಮೀಣ ರಸ್ತೆಗಳು, 12 ಕೋಟಿ ಮನೆಗಳಿಗೆ ಟ್ಯಾಪ್ ವಾಟರ್ ಸಿಕ್ಕಿದೆ 78,000 ಕಿಮೀ ರಾಷ್ಟ್ರೀಯ ಹೆದ್ದಾರಿ ಆಗಿದೆ” ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಮೋದಿಯವರ ಸಾಧನೆಯನ್ನ ವಿವರಿಸಿರುವ ಪಿಸಿ ಮೋಹನ್ ತಮ್ಮ ಪಕ್ಷದ ಪರ ವಕಾಲತ್ತು ವಹಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ